ಮದ್ದೂರು ಪುರಸಭೆ ಕಂದಾಯ ವಿಭಾಗದಲ್ಲಿ ಭಾರೀ ಅಕ್ರಮ: ಭ್ರಷ್ಟಾಚಾರ ಪತ್ತೆಗೆ ತನಿಖಾ ಆಯೋಗ ರಚಿಸಿ

KannadaprabhaNewsNetwork | Published : Jul 9, 2024 12:47 AM

ಸಾರಾಂಶ

ಮದ್ದೂರು ಪುರಸಭೆಯಲ್ಲಿ 2018ರ ನಂತರ ಕಾರ್ಯನಿರ್ವಹಿಸಿರುವ ಕೆಲವು ಮುಖ್ಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನಿಯಮ ಬಾಹಿರವಾಗಿ ಅಕ್ರಮವಾಗಿ ಇ-ಸ್ವತ್ತು ಮಾಡಿ ಸರ್ಕಾರಕ್ಕೆ ಮತ್ತು ಪುರಸಭೆಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪುರಸಭೆ ಕಂದಾಯ ವಿಭಾಗದಲ್ಲಿ ನಡೆದಿರುವ ಭಾರೀ ಪ್ರಮಾಣದ ಅಕ್ರಮ ಪತ್ತೆಗೆ ತನಿಖಾ ಆಯೋಗ ರಚಿಸುವಂತೆ ಶಾಸಕ ಕೆ.ಎಂ.ಉದಯ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಪುರಸಭೆ ಅಕ್ರಮಗಳ ಕುರಿತು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಬರೆದಿರುವ ಪತ್ರವನ್ನು ಶಾಸಕ ಉದಯ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಪುರಸಭೆಯಲ್ಲಿ 2018ರ ನಂತರ ಕಾರ್ಯನಿರ್ವಹಿಸಿರುವ ಕೆಲವು ಮುಖ್ಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನಿಯಮ ಬಾಹಿರವಾಗಿ ಅಕ್ರಮವಾಗಿ ಇ-ಸ್ವತ್ತು ಮಾಡಿ ಸರ್ಕಾರಕ್ಕೆ ಮತ್ತು ಪುರಸಭೆಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಕಂದಾಯ ಭೂಮಿಗೆ ಈ ಸ್ವತ್ತು ಮಾಡುವಾಗ ಮತ್ತು ಸರ್ವೆ ನಂಬರ್ ಭೂಮಿಗೆ ಸಂಬಂಧಿಸಿದಂತೆ ಈ ಖಾತೆಯಲ್ಲಿ ಪ್ರಾಧಿಕಾರದ ಯಾವುದೇ ಅನುಮತಿ ಪಡೆಯದೆ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದೆ ಈ ಖಾತೆ ಮಾಡಿ ದೊಡ್ಡ ಹಗರಣವನ್ನೆ ನಡೆಸುವ ಮೂಲಕ ಸರ್ಕಾರ ಮತ್ತು ಪುರಸಭೆಗೆ ನ್ಯಾಯ ಬದ್ಧವಾಗಿ ಬರಬೇಕಾದ ಆರ್ಥಿಕ ಸಂಪನ್ಮೂಲ ದ ನಷ್ಟ ಉಂಟು ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಶಾಸಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪುರಸಭೆ ಖಾತೆಗಳನ್ನು ಬದಲಾವಣೆ ಮಾಡುವಾಗ ನಿಯಮಗಳನ್ನು ಅನುಸರಿಸದೇ ಆರ್ಥಿಕ ಸ್ವಹಿತಾ ಶಕ್ತಿಗಾಗಿ ನಿವೇಶನಗಳ ಅಕ್ರಮ ಖಾತೆ ಮಾಡಿ ಸಾರ್ವಜನಿಕರು ವಿನಾಕಾರಣ ನ್ಯಾಯಾಲಯದ ಮೊರೆ ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಮೇಲ್ಕಂಡ 2018ರ ಅವಧಿಯಲ್ಲಿ ಪುರಸಭೆಯಲ್ಲಿ ಕಾರ್ಯನಿರ್ವಹಿಸಿರುವ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಉದಯ್ ಪೌರಾಡಳಿತ ಸಚಿವರಿಗೆ ಬರೆದಿರುವ ಪತ್ರದಲ್ಲಿ ಅಗ್ರಪಡಿಸಿದ್ದಾರೆ.

ಎಸ್ಸಿ, ಎಸ್ಟಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ: ಆರೋಪ

ಕನ್ನಡಪ್ರಭ ವಾರ್ತೆ, ಮಂಡ್ಯಎಸ್.ಸಿ.,ಎಸ್.ಟಿ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿ, ದುರ್ಬಳಕೆ ಮಾಡಿಕೊಂಡಿರುವುದು, ವಾಲ್ಮಿಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಮಾಡಿ ಆರ್ಥಿಕ ಅಶಿಸ್ತಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ೩೯,೧೨೧,೪೬ ಕೋಟಿ ರು. ಅನುದಾನ ಬಳಕೆಗೆ ಕ್ರಿಯಾ ಯೋಜನೆ ರೂಪಿಸಿ ೪ ತಿಂಗಳು ಕಳೆದರೂ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಕರೆದು ಅನುಮೋದಿಸದೆ ಕಳೆದ ಶುಕ್ರವಾರ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳಿಗೆ ೧೪,೨೮೨ ಕೋಟಿ ರು.ವರ್ಗಾಯಿಸಲು ತೀರ್ಮಾನಿಸಿರುವ ಮುಖ್ಯಮಂತ್ರಿಗಳ ದಲಿತ ವಿರೋಧಿ ಧೋರಣೆಯನ್ನು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ದಲಿತ ವಿರೋಧಿ ಧೋರಣೆಯ ಅನ್ಯಾಯವನ್ನು ತಡೆಯಲಾಗದ ರಾಜ್ಯ ಆಡಳಿತ ಪಕ್ಷದ ದಲಿತ ಮಂತ್ರಿ, ಶಾಸಕರು ಮತ್ತು ವಿರೋಧ ಪಕ್ಷದಲ್ಲಿನ ದಲಿತ ಶಾಸಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಎಸ್ಸಿ, ಎಸ್ಟಿ, ಟಿಎಸ್‌ಪಿ ಅನುದಾನದ ೨೪,೨೮೨ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲ್ಪಟ್ಟ ೧೪,೨೮೨ ಅನುದಾನವನ್ನು ಮತ್ತು ವಾಲ್ಮೀಕಿ ನಿಗಮದ ಬಹುಗೋಟಿ ಹಗರಣದ ೧೮೭ ಕೋಟಿ ಹಾಗೂ ಕಳೆದ ಹತ್ತು ವರ್ಷಗಳಿಂದಲೂ ಸರ್ಕಾರವೇ ವಾಪಸ್ಸು ಪಡೆದುಕೊಂಡಿರುವ ೮೦ ಸಾವಿರ ಕೋಟಿ ರು. ಹಣವನ್ನೆಲ್ಲಾ ಮತ್ತೆ ಸೇರಿಸಿ ರಾಜ್ಯ ದಲಿತ ಸಮುದಾಯದ ಕುಟುಂಬಗಳಿಗೆ ತಲಾ ೨೫ ಲಕ್ಷ ರು.ನಂತೆ ರಾಜ್ಯಸರ್ಕಾರ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್.ಸಿ., ಎಸ್.ಟಿ., ಟಿಎಸ್‌ಪಿ ಅನುದಾನದ ಸದ್ಬಳಕೆ ಮಾಡದೆ, ದುರ್ಬಳಕೆ ಮಾಡಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನಾ ಕಾಯ್ದೆ (೨೦೧೩) ಅನ್ವಯ ಕ್ರಿಮಿನಲ್ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಬಿ. ಆನಂದ್, ಸುರೇಶ್ ಮರಳಗಾಲ, ಮರಂಕಯ್ಯಘಿ, ಅನಿಲ್‌ಕುಮಾರ್ ಇತರರು ಗೋಷ್ಠಿಯಲ್ಲಿದ್ದರು.

Share this article