16ರಂದು ವಿಜಯಪುರದಲ್ಲಿ ಬೃಹತ್ ಹೋರಾಟ

KannadaprabhaNewsNetwork |  
Published : Oct 15, 2025, 02:08 AM IST
ಅ.16ರಂದು ವಿಜಯಪುರದಲ್ಲಿ ಬೃಹತ್ ಹೋರಾಟ: ಎಸ್.ಎಂ.ಪಾಟೀಲ ಗಣಿಹಾರ | Kannada Prabha

ಸಾರಾಂಶ

ಅ.16ರಂದು ಸಂವಿಧಾನದ ರಕ್ಷಣೆಗಾಗಿ ಜಾತಿ, ಪಕ್ಷ, ಧರ್ಮಾತೀತವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ

ಕನ್ನಡಪ್ರಭ ವಾರ್ತೆ ವಿಜಯಪುರ

ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಬಿ.ಆರ್‌.ಗವಾಯಿ ಅವರ ಮೇಲೆ ವಕೀಲ ಶೂ ಎಸೆದರೂ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಅ.16ರಂದು ನಗರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಓರ್ವ ನ್ಯಾಯಾಧೀಶರ ಮೇಲೆಯೇ ಈ ರೀತಿ ಹಲ್ಲೆ ಮಾಡಿದರೂ ಕೇಂದ್ರ ಸರ್ಕಾರ ಏಕೆ ಆರೋಪಿ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ? ಆರೋಪಿಯ ಮೇಲೆ ಪ್ರಕರಣ ದಾಖಲು ಮಾಡಿಕೊಂಡು, ತಕ್ಷಣ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಅ.16ರಂದು ಸಂವಿಧಾನದ ರಕ್ಷಣೆಗಾಗಿ ಜಾತಿ, ಪಕ್ಷ, ಧರ್ಮಾತೀತವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಹಿಂದುಳಿದವರು, ದಲಿತರು, ಸಾಹಿತಿಗಳು, ಸಮಾನ ಮನಸ್ಕರು, ಸಂಘಟನೆಗಳು ಭಾಗವಹಿಸಬೇಕು ಎಂದು ಗಣಿಹಾರ ವಿನಂತಿಸಿದರು.

ಸಮಾಜದಲ್ಲಿ ಸಮಾನತೆಯನ್ನು ಬಯಸದ ಸನಾತನ ಹಿನ್ನೆಲೆಯವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದವರಿಗೆ ಸಮಾನತೆ ಬೇಕಾಗಿಲ್ಲ. ದೇಶದ ದಲಿತರಿಗೆ ಸ್ಥಾನಮಾನ, ಸಾಮಾಜಿಕ‌ ನ್ಯಾಯ ಸಿಗುವುದು ಬೇಕಾಗಿಲ್ಲ. ಆರ್‌ಎಸ್‌ಎಸ್ ಮುಸ್ಲಿಂರನ್ನು ತೋರಿಕೆಗೆ ವಿರೋಧಿಸುತ್ತಾರೆ, ಆದರೆ ಅವರ ಅಸಲಿ ಟಾರ್ಗೆಟ್ ದಲಿತರೇ ಆಗಿದ್ದಾರೆ ಎಂದರು.

ಇನ್ನು ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಮಾಡುವುದು ಬಂದ್ ಮಾಡಬೇಕು ಎಂದು ಸಿಎಂ ಅವರಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿದ್ದಾರೆ. ಇದನ್ನೇ ಕೆಲವರು ಆರ್‌ಎಸ್‌ಎಸ್‌ ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದಾರೆ ಎಂದು ತಿರುಚಲಾಗಿದೆ. ಆರ್‌ಎಸ್‌ಎಸ್‌ ಮೇಲೆ ಸರಿಯಾದ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಬ್ಯಾನ್ ಮಾಡುತ್ತಾರೆ ಎಂದರು. ಸಂಘಟನೆ ಹುಟ್ಟಿ 100 ವರ್ಷಗಳು ಪೂರೈಸಿದ್ದೀರಿ, ದೇಶಕ್ಕಾಗಿ ಏನು ಮಾಡಿದ್ದೀರಿ ಅದನ್ನು ಜನರಿಗೆ ತಿಳಿಸಬೇಕು. ಆರ್‌ಎಸ್‌ಎಸ್ ಸಂಘಟನೆ ಅಧಿಕೃತವಾಗಿ ನೋಂದಣಿಯೇ ಆಗಿಲ್ಲ. ಇಷ್ಟೆ ಅಲ್ಲದೆ ಕೈಯಲ್ಲಿ ಲಾಠಿ ಹಿಡಿದುಕೊಂಡು ಗಲ್ಲಿಗಳಲ್ಲಿ ಅಡ್ಡಾಡಿದರೆ ಏನು ಪ್ರಯೋಜನವಿದೆ?. ಇದೆಲ್ಲವನ್ನು ದೇಶದ ಜನರಿಗೆ ಹೆದರಿಸಲು ಅವರು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವಲ್ಲಿ ಆರ್‌ಎಸ್‌ಎಸ್ ನವರು ಬೇಹುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಡಾ.ಜೆ.ಎಸ್.ಪಾಟೀಲ ಮಾತನಾಡಿ, ಸಂವಿಧಾನ, ಸಾಮಾಜಿಕ‌ ನ್ಯಾಯ ಬೆಂಬಲಿಸುವವರು ಪ್ರತಿಭಟನೆಗೆ ಬೆಂಬಲ‌ ಕೊಡಬೇಕು ಎಂದರು. ಕನ್ಹೇರಿ ಸ್ವಾಮೀಜಿ ಕಾವಿ ಪುಢಾರಿಯಾಗಿದ್ದು, ಅವರು ಸ್ವಾಮೀಜಿ ಆಗಲು ಯೋಗ್ಯರಲ್ಲ. ಲಿಂಗಾಯತ ಸಮಾಜವನ್ನು ನಾಶ ಮಾಡಲೇಂದೆ ಹುಟ್ಟಿರುವವನು ಕನ್ಹೇರಿ ಸ್ವಾಮೀಜಿ ಎಂದು ಆರೋಪಿಸಿದರು.

ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ‌ ಹಾಗೂ ಡಾ.ರವಿಕುಮಾರ ಬಿರಾದಾರ, ಪ್ರಭು ಪಾಟೀಲ ಉಪಸ್ಥಿತರಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ