ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮೀತಿಯ ಎಂ.ಎಸ್.ನಾಗೇಶ್
ಕನ್ನಡಪ್ರಭ ವಾರ್ತೆ, ಶೃಂಗೇರಿರಾಜ್ಯ ಸರ್ಕಾರವೂ ಮಲೆನಾಡಿನ ರೈತರು, ನಾಗರಿಕರ ಮೇಲೆ ಒಂದಾದ ಮೇಲೊಂದರಂತೆ ಕಠಿಣ ಕಾನೂನುಗಳನ್ನು ಬಿಗಿಗೊಳಿಸಿ ಬದುಕಿನ ಜೊತೆ ಚೆಲ್ಲಾಟವಾಡುತ್ತಾ ದೌರ್ಜನ್ಯ ನಡೆಸುತ್ತಿದೆ. ಸರ್ಕಾರದ ಈ ನೀತಿಯನ್ನು ಖಂಡಿಸಿ ಆಗಸ್ಟ್ 17 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ನಾಗರಿಕ, ರೈತ ಹಿತರಕ್ಷಣಾ ಸಮಿತಿಯ ಎಂ.ಎಸ್.ನಾಗೇಶ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸರವೆಂದರೆ ಕೇವಲ ಕಾಡು, ಮರಗಳು ಮಾತ್ರವಲ್ಲ. ಮನುಷ್ಯನು ಇರಬೇಕು. ಕಾನೂನು ಕಾಯ್ದೆಗಳ ಹೆಸರಲ್ಲಿ ರೈತರು, ನಾಗರಿಕರ ಮೇಲೆ ಅರಣ್ಯ ಇಲಾಖೆ, ಸರ್ಕಾರದ ದೌರ್ಜನ್ಯ ದಬ್ಬಾಳಿಕೆ ಹೆಚ್ಚುತ್ತಿದೆ. ಮಲೆನಾಡಿನ ಜನರ ಅಸ್ತಿತ್ವದ ಉಳಿವಿಗೆ ನಾವು ಹೊಂದಾಣಿಕೆಯಿಂದ ಹೊರಾಡುವುದು ಅನಿವಾರ್ಯವಾಗಿದೆ ಎಂದರು.ಅಂಬಳೂರು ರಾಮಕೃಷ್ಣ ಮಾತನಾಡಿ ಮಲೆನಾಡಿನ ಬಗ್ಗೆ ಏನು ತಿಳುವಳಿಕೆಯಿಲ್ಲದ ನಗರ ಪರಿಸರವಾದಿಗಳಿಂದ, ಅವರ ವರದಿ, ಮಾಹಿತಿಗಳಿಂದ ಮಲೆನಾಡಿನ ರೈತರು, ನಾಗರಿಕರು ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ರೈತರೇ ನಿಜವಾದ ಪರಿಸರವಾದಿಗಳು, ತಲೆತಲಾಂತರಗಳಿಂದ ಅರಣ್ಯಗಳನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಅಂತಹ ರೈತರನ್ನು ನಿರ್ಗತಿಕರನ್ನಾಗಿ ಮಾಡಲು ಸರ್ಕಾರ ಹೊರಟಿದೆ. ಸರ್ಕಾರದ ಧೋರಣೆ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದರು.
ಸಭೆಯಲ್ಲಿ ಅಡಕೆ ಬೆಳೆಗಾರರ ಸಂಘದ ಕೆ.ಎಂ. ಶ್ರೀನಿವಾಸ್, ತಾಲೂಕು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಅನಂತಯ್ಯ, ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ, ಭರತ್ ರಾಜ್, ಅಶ್ವಿನ್, ಅನಿರುದ್, ರಾಜ್ ಕುಮಾರ್ ಹೆಗ್ಡೆ, ವೆಂಕಟೇಶ್, ಪ್ರಜ್ವಲ್ ಮತ್ತಿತರರು ಇದ್ದರು.14 ಶ್ರೀ ಚಿತ್ರ 2-
ಶೃಂಗೇರಿ ಪಟ್ಟಣದ ಕನ್ನಡ ಭವನದಲ್ಲಿ ಮಲೆನಾಡು ರೈತ ನಾಗರಿಕ ಹಿತರಕ್ಷಣಾ ಸಮಿತಿಯ ಆಗಸ್ಟ್ 17 ರಂದು ಶೃಂಗೇರಿ ಕ್ಷೇತ್ರ ಮಟ್ಟದ ಬೃಹತ್ ಪ್ರತಿಭಟನೆ ಕುರಿತ ಪೂರ್ವಭಾವಿ ಸಭೆ ನಡೆಸಿತು.