ಮಾ. ೬ ರಂದು ಮಾಸ್ತಿ ವಸತಿ ಶಾಲೆ ಲೋಕಾರ್ಪಣೆ

KannadaprabhaNewsNetwork |  
Published : Feb 29, 2024, 02:06 AM IST
ಶಿರ್ಷಿಕೆ-೨೮ಕೆ.ಎಂ.ಎಲ್.ಅರ್.೧-ಮಾಲೂರಿನ ಕೋಲಾರ ರಸ್ತೆಯಲ್ಲಿ ಪುರಸಭೆಯ ಸಂತೇ ಮೈದಾನದಲ್ಲಿ ೬.೫ ಕೋಟಿ ರು.ಗಳಲ್ಲಿ ನಿರ್ಮಿಸಲಾಗುವ ವಾಲ್ಮೀಕಿ ವಸತಿ ನಿಲಯ ಕಟ್ಟಡಕ್ಕೆ ಶಾಸಕ ನಂಜೇಗೌಡ ಗುದ್ದಲಿ ಪೂಜೆ ಮೂಲಕ ಚಾಲನೆ ನೀಡಿದರು.ಸಮಾಜ ಕಲ್ಯಾಣ ಅಧಿಕಾರಿ ಶಿವುಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನಾರಸಿಂಹ,ಮುರಳಿಧರ್ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಮುಖ್ಯಮಂತ್ರಿಗಳು ಡಾಬಸ್ ಪೇಟೆಯಿಂದ ಇಲ್ಲಿನ ತಮಿಳುನಾಡಿನ ಗಡಿ ವರೆಗೂ ೬ ಪಥದ ರಸ್ತೆ ಕಾಮಗಾರಿ ಯೋಜನೆಯನ್ನು ಘೋಷಿಸಿದ್ದಾರೆ. ಈಗ ಪಟ್ಟಣದಲ್ಲಿ ಹಾದುಹೋಗುವ ಅದೇ ರಸ್ತೆ ಮೇಲೆ ೨ .ಕಿ.ಮೀ.ಉದ್ದದ ಮೇಲ್ಸೇತುವೆಗೆ ೩೦೦ ಕೋಟಿ ರು.ಮಂಜೂರಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಮಾಸ್ತಿ ಗ್ರಾಮದಲ್ಲಿ ೨೫ ಕೋಟಿ ರು.ಗಳ ವೆಚ್ಚದಲ್ಲಿ ಪೂರ್ಣಗೊಂಡಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ ಮಾ.೬ ರಂದು ಲೋಕಾರ್ಪಣೆಗೊಳ್ಳಲಿದ್ದು, ಉಸ್ತುವಾರಿ ಸಚಿವ ಭೈರತಿ ಸುರೇಶ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಇಲ್ಲಿನ ಸಂತೇ ಮೈದಾನದಲ್ಲಿ ೬.೫ ಕೋಟಿ ರುಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಲ್ಮೀಕಿ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡುತ್ತ, ಅಂದೇ ಖಾಸಗಿ ಕಂಪನಿ ವಾಸಟ್ ೬ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡಕ್ಕೂ ಹಾಗೂ ಮಾಸ್ತಿ ಗ್ರಾಮದಲ್ಲಿ ೨.೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಬಸ್ ನಿಲ್ದಾಣ ಕಾಮಗಾರಿಗೆ ಸಹ ಚಾಲನೆ ನೀಡಲಾಗುತ್ತದೆ ಎಂದರು.

ಡಾಬಸ್‌ಪೇಟೆಯಿಂದ ಆರು ಪಥದ ರಸ್ತೆ

ಈಗಾಗಲೇ ಮುಖ್ಯಮಂತ್ರಿಗಳು ಡಾಬಸ್ ಪೇಟೆಯಿಂದ ಇಲ್ಲಿನ ತಮಿಳುನಾಡಿನ ಗಡಿ ವರೆಗೂ ೬ ಪಥದ ರಸ್ತೆ ಕಾಮಗಾರಿ ಯೋಜನೆಯನ್ನು ಘೋಷಿಸಿದ್ದಾರೆ. ಈಗ ಪಟ್ಟಣದಲ್ಲಿ ಹಾದುಹೋಗುವ ಅದೇ ರಸ್ತೆ ಮೇಲೆ ೨ .ಕಿ.ಮೀ.ಉದ್ದದ ಮೇಲ್ಸೇತುವೆಗೆ ೩೦೦ ಕೋಟಿ ರು.ಮಂಜೂರಾಗಿದೆ. ಲೋಕಸಭೆ ಚುನಾವಣೆ ನಂತರ ಇದರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಡಾ.ಅಂಬೇಡ್ಕರ್‌ ಬಸ್‌ ನಿಲ್ದಾಣ

ಪಟ್ಟಣದಲ್ಲಿ ೧೦ ಕೋಟಿ ರು.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ಡಾ.ಬಿ.ಆರ್.ಅಂಬೇಡ್ಕರ್ ಬಸ್ ನಿಲ್ದಾಣಕ್ಕೆ ಶೀಘ್ರವಾಗಿ ಚಾಲನೆ ನೀಡಲಾಗುತ್ತಿದ್ದು, ಒಂದು ವರ್ಷದಲ್ಲಿ ನೂತನ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಸಹ ಮಾಡಲಾಗುವುದು ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ,ಬಿ.ಇ.ಓ. ಚಂದ್ರಕಲಾ ,ಮಾರಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯನಾರಸಿಂಗ,ಮಧುಸೂಧನ್,ಸಮಾಜ ಕಲ್ಯಾಣ ಅಧಿಕಾರಿ ಶಿವುಕುಮಾರ್,ಅಶ್ವಥ ರೆಡ್ಡಿ,ಪುರಸಭೆ ಸದಸ್ಯ ಇಂತಿಯಾಜ್,ಜಾಕೀರ್ ಖಾನ್ ,ಮುರಳಿಧರ್,ಎಂ.ಪಿ.ವಿ.ಮಂಜು,ಶಂಕರ್,ತನ್ವೀರ್ ,ವೆಂಕಟಸ್ವಾಮಿ ಇನ್ನಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ