ಸಂಸ್ಕೃತಿ ಬೆಳವಣಿಗೆಗೆ ಮಠಗಳು ಸಹಕಾರಿ

KannadaprabhaNewsNetwork | Published : Mar 18, 2024 1:49 AM

ಸಾರಾಂಶ

ನಮ್ಮ ರಾಜ್ಯದಲ್ಲಿ ಮಠ ಮಾನ್ಯಗಳು ಹೆಚ್ಚಾಗಿರುವುದರಿಂದ ನಮ್ಮ ಸಂಸ್ಕೃತಿ ಅಗಾಧವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಮಾಜಿ ಸಚಿವ, ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ನಮ್ಮ ರಾಜ್ಯದಲ್ಲಿ ಮಠ ಮಾನ್ಯಗಳು ಹೆಚ್ಚಾಗಿರುವುದರಿಂದ ನಮ್ಮ ಸಂಸ್ಕೃತಿ ಅಗಾಧವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಮಾಜಿ ಸಚಿವ, ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಶ್ರೀ ವನಕಲ್ಲು ಮಠದಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿರುವ ಮಠಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು ಶಿಕ್ಷಣ, ವಸತಿ, ದಾಸೋಹ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಸಲಕರಣೆಗಳನ್ನು ನೀಡಿ ಸಮಾಜದಲ್ಲಿ ಸತ್ಪ್ರಜೆಯಾಗಿ ಜೀವಿಸಲು ಸಹಕರಿಸುತ್ತಿವೆ. ಅದರಲ್ಲೂ ಸರ್ಕಾರ ಮಾಡಲಾಗದ ಸೇವೆಗಳಾದ ವಿದ್ಯಾಭ್ಯಾಸ, ದಾಸೋಹ ಮತ್ತು ವಸತಿಯನ್ನು ಮಠಾಧೀಶರು ನೀಡುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ವನಕಲ್ಲು ಮಠವೂ ಸಮಾಜದಲ್ಲಿ ಸೇವೆ ಸಲ್ಲಿಸಿದ, ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಮಠಗಳು ಸಮಾಜ ಕಟ್ಟುವ, ಸಮರ್ಪಣಾಭಾವದಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ವನಕಲ್ಲು ಮಠವನ್ನು ತಾಲೂಕಿನ ಶ್ರೇಷ್ಠ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ ಸಾಮಾಜಿಕ ಕೇಂದ್ರವಾಗಿಸಲು ಶ್ರೀಗಳು ಪ್ರಯತ್ನಪಟ್ಟಿದ್ದಾರೆ. ಶ್ರೀ ವನಕಲ್ಲು ಮಠದ ಸ್ವಾಮಿಗಳ ಸಾಧನೆ ಅಗ್ರಗಣ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವನಕಲ್ಲು ಶ್ರೀ ಪ್ರಶಸ್ತಿಯನ್ನು ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಗೆ, ಜಗಜ್ಯೋತಿ ಪ್ರಶಸ್ತಿಯನ್ನು ಸಂಶೋಧಕ ಹಾಗೂ ಆಯುರ್ವೇದ ವೈದ್ಯ ಬಿ.ನಂಜುಂಡಸ್ವಾಮಿಯವರಿಗೆ, ಶರಣಶ್ರೀ ಪ್ರಶಸ್ತಿಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಸಿಂಗ್ರಿ ಭಾಸ್ಕರ್‌ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮೇಲಣಗವಿ ಮಠದ ಡಾ.ಮಲಯ ಶಾಂತಮುನಿ ದೇಶೀಕೇಂದ್ರ ಸ್ವಾಮೀಜಿ, ಹೊಸದುರ್ಗದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಐರಾಣಿ ಮಠದ ಗಜದಂಡ ಸ್ವಾಮೀಜಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಪ್ರಸಾದ್, ಮಾಜಿ ಗ್ರಾಪಂ ಸದಸ್ಯ ಗೋವಿಂದರಾಜು ಇತರರಿದ್ದರು.

Share this article