ಓನಕೆ ಒಬವ್ವನ ಶೌರ್ಯ ಎಲ್ಲ ಮಹಿಳೆಯರಲ್ಲಿ ಬರಲಿ

KannadaprabhaNewsNetwork |  
Published : Nov 11, 2024, 11:49 PM IST
ಇಲ್ಲಿನ ಸ.ಪ.ಪೂ ಕಾಲೇಜಿನಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬವ್ವ ನ ಜಯಂತ್ಯೋತ್ಸವ ಸಮಾರಂಭದಲ್ಲಿ ಒನಕೆ ಓಬವ್ವನ ಬಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುತ್ತೀರುವ ಗಣ್ಯರು) | Kannada Prabha

ಸಾರಾಂಶ

ಜಯಂತ್ಯುತ್ಸವ ಸಮಾರಂಭದಲ್ಲಿ ಒನಕೆ ಓಬವ್ವನ ಬಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುತ್ತೀರುವ ಗಣ್ಯರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಓನಕೆ ಒಬ್ಬವ್ವ ವೀರ ವನಿತೆಯಾಗಿದ್ದು, ಇಂತಹ ಧಿಟ್ಟ ಮಹಿಳೆಯ ಶೌರ್ಯ, ಸಾಹಸಗಳು ಪ್ರತಿಯೊಬ್ಬ ಮಹಿಳೆಯರಲ್ಲಿಯೂ ಬಂದಾಗ ಶತ್ರುಗಳ ಸಂಹಾರವಾಗುವ ಜೊತೆಗೆ ವೀರ ನಾರಿಯರ ಹೆಸರು ಚರಿತ್ರೆಯಲ್ಲಿ ದಾಖಲಾಗುವುದು ಎಂದು ಜಿಲ್ಲಾ ಛಲವಾದಿ ಸಮಾಜದ ಉಪಾಧ್ಯಕ್ಷ ಸಿ.ನಾಗರಾಜ್ ಹೇಳಿದರು.

ಸೋಮವಾರ ಇಲ್ಲಿನ ಸ.ಪ.ಪೂ ಕಾಲೇಜಿನಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ವೀರ ವನಿತೆ ಒನಕೆ ಓಬವ್ವನ ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರವು ಇತಿಹಾಸ, ಪುಣ್ಯ ಪುರುಷರ, ಮಹಾತ್ಮರ, ವೀರ ವನಿತೆಯರ, ದಾರ್ಶನಿಕರ, ಶರಣರ ಜಯಂತ್ಯೋತ್ಸವಗಳನ್ನು ಆಚರಣೆ ಮಾಡಲು ಸರ್ಕಾರ ಆದೇಶಿಸಿದೆ. ಆದರೆ ಇಲ್ಲಿನ ತಾಲೂಕು ಆಡಳಿತವು ಬೇಕಾ ಬಿಟ್ಟಿಯಾಗಿ ಜಯಂತ್ಯೋತ್ಸವಗಳನ್ನು ಆಚರಣೆ ಮಾಡುತ್ತಾ ನಾಮಕಾವಸ್ತೆಯಂತೆ ಮಾಡುವುದು ಸರಿಯಲ್ಲ ಎಂದು ಹೇಳಿದರು. ವ್ಯವಸ್ಥಿತವಾಗಿ ಜಯಂತ್ಯೋತ್ಸವ ಕಾರ್ಯಕ್ರಮಗಳನ್ನು ಆಚರಿಸಬೇಕೆಂದು ತಾಲೂಕು ಆಡಳಿತವನ್ನು ಎಚ್ಚರಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಪುಪ್ಪಲತಾ ಜಗದೀಶ್ ಮಾತನಾಡಿ, ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯ ಮೇಲೆ ಅಕ್ರಮಣ ಮಾಡಿದಾಗ ಓಬವ್ವ ತನ್ನ ಮನೆಯಲ್ಲಿದ್ದ ಒನಕೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಿಂಡಿಯಿಂದ ಕೋಟೆ ಪ್ರವೇಶ ಮಾಡುತ್ತಿದ್ದ ಹೈದರಾಲಿಯ ಸೈನಿಕರನ್ನು ಕೊಂದು ಕೋಟೆ ರಕ್ಷಿಸಿದ ವೀರ ಮಹಿಳೆಯಾಗಿದ್ದಾಳೆ. ಇಂತಹ ವೀರ ಮಹಿಳೆಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತೀರುವುದು ಶ್ಲಾಘನೀಯ ಎಂದರು.

ಅತಿಥಿ ಉಪನ್ಯಾಸವನ್ನು ದಾವಣಗೆರೆ ಸ.ಪ.ಪೂ ಕಾಲೇಜಿನ ಪ್ರಾಚಾರ್ಯ ಸುರೇಶ್ ಇವರು ಒನಕೆ ಓಬವ್ವ ನ ಸಾಹಸ ಪರಾಕ್ರಮಗಳ ಬಗ್ಗೆ ಸಮಗ್ರವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ವಹಿಸಿದ್ದರು.

ಈ ವೇಳೆ ಛಲವಾದಿ ಸಮಾಜದ ಪ್ರಮುಖರಾದ ಎಚ್.ಧರಣೇಂದ್ರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಶಿರಾಸ್ತೆದಾರ್ ಮೋಹನ್, ರುದ್ರಸ್ವಾಮಿ, ಪುರಸಭೆಯ ಹಿರಿಯ ಆರೋಗ್ಯನಿರೀಕ್ಷಕ ಶಿವರುದ್ರಪ್ಪ, ಪುರಸಭೆಯ ಸದಸ್ಯ ಶಶಿಕುಮಾರ್ ಸೇರಿ ಮೊದಲಾದವರು ಹಾಜರಿದ್ದರು. ಸಮಾರಂಭಕ್ಕೂ ಮುನ್ನ ಒನಕೆ ಓಬವ್ವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ