ದೈವಾರಾಧನೆ ಪರಂಪರೆ ಮುಂದುವರೆಯಲಿ: ಶ್ರೀ

KannadaprabhaNewsNetwork | Published : Feb 18, 2024 1:33 AM

ಸಾರಾಂಶ

ಸೂಲಿಬೆಲೆ: ಜೀವನದ ಜಂಜಾಟದಲ್ಲಿ ಮಾನಸಿಕ ನೆಮ್ಮದಿ ಕಾಣಬೇಕಾದರೆ ದೇವಾಲಯಗಳಿಂದ ಮಾತ್ರ ಸಾಧ್ಯ ಎಂದು ಆದಿಚುಂಚನಗಿರಿ ಮಠ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಶ್ರೀಗಳು ತಿಳಿಸಿದರು.

ಸೂಲಿಬೆಲೆ: ಜೀವನದ ಜಂಜಾಟದಲ್ಲಿ ಮಾನಸಿಕ ನೆಮ್ಮದಿ ಕಾಣಬೇಕಾದರೆ ದೇವಾಲಯಗಳಿಂದ ಮಾತ್ರ ಸಾಧ್ಯ ಎಂದು ಆದಿಚುಂಚನಗಿರಿ ಮಠ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಶ್ರೀಗಳು ತಿಳಿಸಿದರು. ಹೋಬಳಿಯ ಕಂಬಳೀಪುರದಲ್ಲಿ ನಾಗಮುನೇಶ್ವರ ದೇಗುಲ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಧುನಿಕ ಭರಾಟೆಯಲ್ಲಿ ಪ್ರಗತಿಪರ ಚಿಂತನೆಗಳ ನೆಪದಲ್ಲಿ ಧರ್ಮಕ್ಕೆ ಧಕ್ಕೆಯಾಗದಿರಲಿ, ನಮ್ಮ ಹಿಂದೂ ಧರ್ಮದ ಆಚರಣೆಗಳು ದೈವಾರಾಧನೆಯ ಪರಂಪರೆ ಮುಂದಿನ ಪೀಳಿಗೆಗೆ ಮುಂದುವರೆಯಲಿ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಪ್ರತಿಭಾ ಶರತ್‌ ಬಚ್ಚೇಗೌಡ , ಕಂಬಳೀಪುರದ ಹನುಮಂತರಾಯಪ್ಪ, ಚಂದ್ರಪ್ಪ, ಕೃಷ್ಣಪ್ಪ, ದೊಡ್ಡಸೊಣ್ಣಪ್ಪ, ಚಿಕ್ಕಸೊಣ್ಣಪ್ಪ, ಕುಟುಂಬದಿಂದ ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ರಾಮಕೃಷ್ಣ, ನೇತ್ರಾವತಿ, ದೇವರಾಜ್, ಅರುಣ, ಆನಂದ್, ಜ್ಯೋತಿ, ಮಂಜುನಾಥ್, ರಮಾನಾಗೇಶ್, ಕವನಾ ಹೋಮ, ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಬಮೂಲ್ ನಿರ್ದೇಶಕ ಮಂಜುನಾಥ್, ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ, ಕಂಬಳೀಪುರ ಗ್ರಾಪಂ ಅಧ್ಯಕ್ಷೆ ಮಮತ, ಮಾಜಿ ಅಧ್ಯಕ್ಷ ಮುನಿಯಪ್ಪ, ರಮೇಶ್, ಮುತ್ಸಂದ್ರ ಆನಂದಪ್ಪ, ಮಾಜಿ ಉಪಾಧ್ಯಕ್ಷ ದೇವರಾಜ್, ಮಾಜಿ ಸದಸ್ಯ ಕೃಷ್ಣಮೂರ್ತಿ, ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ತಮ್ಮೇಗೌಡ, ಬೇಗೂರು ಪಾರ್ವತಮ್ಮ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಹಸಿಗಾಳ ಜಗದೀಶ್, ಚಿಕ್ಕಹರಳಗೆರೆ ಜಗದೀಶ್, ಗುತ್ತಿಗೆದಾರ ಬೇಗೂರು ರಾಜಣ್ಣ, ಸಿಅರ್‌ಪಿ ಮಂಜುನಾಥ್ ಇತರರಿದ್ದರು.

(ಫೋಟೋ ಕ್ಯಾಪ್ಷನ್‌) ಸೂಲಿಬೆಲೆಯ ಹೋಬಳಿಯ ಕಂಬಳೀಪುರದಲ್ಲಿ ನಾಗಮುನೇಶ್ವರ ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಶ್ರೀಗಳು ಪಾಲ್ಗೊಂಡಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಪ್ರತಿಭಾ ಶರತ್‌ ಬಚ್ಚೇಗೌಡ , ಹನುಮಂತರಾಯಪ್ಪ, ಚಂದ್ರಪ್ಪ, ಕೃಷ್ಣಪ್ಪ ಇತರರಿದ್ದರು.

Share this article