ಶೈಕ್ಷಣೀಕ ಪ್ರಗತಿಗೆ ಇರುವ ಅವಕಾಶ ಸದ್ಭಳಕೆ ಆಗಲಿ

KannadaprabhaNewsNetwork |  
Published : Dec 20, 2023, 01:15 AM IST
19ಕೆಕೆಆರ್1:ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ಜರುಗಿದ ಯಲಬುರ್ಗಾ, ಕುಕನೂರು ಉಭಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರತಿಭಾ ಕಾರಂಜಿ  ಹಾಗು ಕಲೋತ್ಸವ ಕಾರ್ಯಕ್ರಮವನ್ನು ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಉದ್ಘಾಟಿಸಿದರು | Kannada Prabha

ಸಾರಾಂಶ

ಶೈಕ್ಷಣೀಕ ರಂಗದಲ್ಲಿ ಇನ್ನಷ್ಟು ಪ್ರಗತಿ ಆಗಬೇಕಿದೆ. ಮಕ್ಕಳು ವೃತ್ತಿ ಹಾಗು ಅಭಿವೃದ್ಧಿ ಪೂರಕ ಶಿಕ್ಷಣ ಪಡೆಯಬೇಕು. ಶಿಕ್ಷಣ ರಾಷ್ಟ್ರೀಕರಣದತ್ತ ದಿಟ್ಟ ಹೆಜ್ಜೆ ಆಗಬೇಕು

ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರ ಹೇಳಿಕೆ | ರಾಜೂರಲ್ಲಿ ಪ್ರತಿಭಾ ಕಾರಂಜಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಕನೂರು

ಶೈಕ್ಷಣೀಕ ಪ್ರಗತಿಗೆ ಇರುವ ಅವಕಾಶಗಳ ಸದ್ಭಳಕೆ ಹಾಗು ಅವುಗಳ ಅನುಷ್ಠಾನ ಆಗಬೇಕು ಎಂದು ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಹೇಳಿದರು.

ತಾಲೂಕಿನ ರಾಜೂರು ಗ್ರಾಮದಲ್ಲಿ ಜರುಗಿದ ಯಲಬುರ್ಗಾ, ಕುಕನೂರು ಉಭಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರತಿಭಾ ಕಾರಂಜಿ ಹಾಗು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಶೈಕ್ಷಣೀಕ ರಂಗದಲ್ಲಿ ಇನ್ನಷ್ಟು ಪ್ರಗತಿ ಆಗಬೇಕಿದೆ. ಮಕ್ಕಳು ವೃತ್ತಿ ಹಾಗು ಅಭಿವೃದ್ಧಿ ಪೂರಕ ಶಿಕ್ಷಣ ಪಡೆಯಬೇಕು. ಶಿಕ್ಷಣ ರಾಷ್ಟ್ರೀಕರಣದತ್ತ ದಿಟ್ಟ ಹೆಜ್ಜೆ ಆಗಬೇಕು ಎಂದರು.

ಬಿಇಒ ಕೆ.ಟಿ.ನಿಂಗಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಹಾಗು ಕಲೋತ್ಸವದಲ್ಲಿ ಮಕ್ಕಳು ವ್ಯಕ್ತಪಡಿಸುವ ಪ್ರತಿಭೆಗೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಮಕ್ಕಳ ಪ್ರತಿಭೆಗೆ ನೀರೆರೆದು ಬೆಳೆಸುವ ಹೊಣೆ ನಮ್ಮ ಶಿಕ್ಷಣ ಇಲಾಖೆ ಹಾಗು ಪಾಲಕರದು. ಯಾವ ಮಗುವು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತದೆಯೋ ಆ ವಿಷಯದ ಕುರಿತು ಆ ಮಗುವಿಗೆ ಬೇಕಾದ ತರಬೇತಿ, ಕಲಿಕೆ ನೀಡಬೇಕು ಎಂದರು.

ಕಲೋತ್ಸವ ಪ್ರಯುಕ್ತ ಬೆಳಗ್ಗೆ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಜರುಗಿತು. ಮೆರವಣಿಗೆಗೆ ಗ್ರಾಪಂ ಅಧ್ಯಕ್ಷೆ ಹುಲ್ಲವ್ವ ಹಿರೇಮನಿ ಚಾಲನೆ ನೀಡಿದರು. ಹಳ್ಳಿ ಬಂಡೆ ಕುಣಿತ, ಲೈಜಿಮ್ ನೃತ್ಯ, ಡೊಳ್ಳು ಕುಣಿತ, ಕೋಲಾಟ, ಲಂಬಾಣಿ ಡ್ಯಾನ್ಸ್ ಜರುಗಿದವು.

ಬಿಆರ್ ಸಿ ಸಮನ್ವಯ ಅಧಿಕಾರಿ ಅಶೋಕ ಗೌಡರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಫ್.ಎಂ. ಕಳ್ಳಿ, ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ತಾಲೂಕು ನೋಡಲ್ ಅಧಿಕಾರಿ ಕನಕಪ್ಪ ಕಂಬಳಿ, ಗ್ರಾಪಂ ಉಪಾಧ್ಯಕ್ಷ ವಿಜಯಕುಮಾರ ಮಾದಿನೂರು, ಯಲಬುರ್ಗಾ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಜಿ. ಪಾಟೀಲ್, ಕುಕನೂರು ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕಕರ ಸಂಘದ ಅಧ್ಯಕ್ಷ ಮಹೇಶ ಸಬರದ, ಬಸವರಾಜ ಮಾಸ್ತಿ, ವೀರಭದ್ರಪ್ಪ ಬೆಣಕಲ್, ಅಶೋಕ ಮಾಲಿ ಪಾಟೀಲ್, ಬಸವರಾಜ ಮೇಟಿ, ಎಸ್ ವಿ ಧರಣಾ, ಮಾರುತೇಶ ತಳವಾರ್, ಶಿವನಪ್ಪ ಬ ಹೂಗಾರ, ಸಿದ್ದಲಿಂಗಪ್ಪ ಶ್ಯಾಗೋಟಿ,ಮಹಾವೀರ ಕಲಬಾವಿ,ಕೋಟೆಪ್ಪ ನಿಂಗಪ್ಪ ಗೋಂದಿ, ಭೀಮರೆಡ್ಡಿಪ್ಪ ಮಾದಿನೂರು, ಶಾಂತ ಮೂಲಿಮನಿ, ಶರಣವ್ವ ತಳವಾರ, ಉಮೇಶ ಕಂಬಳಿ, ಫೀರಸಾಬ್ ದಪೇದಾರ, ದೇವಪ್ಪ ತಳವಾರ, ಅಶೋಕ ಮಾದಿನೂರ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ