ಎಂ.ಸಿ.ಸಿ. ಬ್ಯಾಂಕ್‌ಗೆ ಇಥಿಯೋಪಿಯಾದ ಡ್ಯಾಶೆನ್ ಬ್ಯಾಂಕ್ ಎಸ್.ಸಿ. ಆಡಳಿತ ಮಂಡಳಿ ನಿರ್ದೇಶಕರ ಭೇಟಿ

KannadaprabhaNewsNetwork |  
Published : May 25, 2026, 03:00 AM IST
ಎಂ.ಸಿ.ಸಿ. ಬ್ಯಾಂಕ್‌ಗೆ ಇಥಿಯೋಪಿಯಾದ ಡ್ಯಾಶೆನ್ ಬ್ಯಾಂಕ್ ಎಸ್.ಸಿ. ಆಡಳಿತ ಮಂಡಳಿಯ ನಿರ್ದೇಶಕರು ಭೇಟಿ ನೀಡಿದರು | Kannada Prabha

ಸಾರಾಂಶ

ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರಮುಖ ಖಾಸಗಿ ಬ್ಯಾಂಕ್ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ಆಡಳಿತ ಮಂಡಳಿ ಸದಸ್ಯರು ಶುಕ್ರವಾರ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

ಮಂಗಳೂರು: ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರಮುಖ ಖಾಸಗಿ ಬ್ಯಾಂಕ್ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ಆಡಳಿತ ಮಂಡಳಿ ಸದಸ್ಯರು ಶುಕ್ರವಾರ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

ವೃತ್ತಿಪರ ಸಂಬಂಧಗಳನ್ನು ಬೆಳೆಸುವುದು, ಭಾರತದ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು, ಬ್ಯಾಂಕಿಂಗ್ ಪರಿಣತಿ ವಿನಿಮಯ ಮಾಡಿಕೊಳ್ಳುವುದು ಹಾಗೂ ಡಿಜಿಟಲ್ ಬ್ಯಾಂಕಿಂಗ್, ಕಾರ್ಯಾಚರಣಾ ದಕ್ಷತೆ ಮತ್ತು ತಾಂತ್ರಿಕ ಆಧುನೀಕರಣದ ಬೆಳವಣಿಗೆಗಳನ್ನು ಅನ್ವೇಷಿಸುವ ಉದ್ದೇಶದಿಂದ ಭೇಟಿ ಆಯೋಜಿಸಲಾಗಿತ್ತು.ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ೧೩ ಮಂದಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರು ಈ ಸಂದರ್ಭದಲ್ಲಿ ಇದ್ದರು. ಡ್ಯಾಶೆನ್ ಬ್ಯಾಂಕ್ ದೇಶದಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳು, ೯ ವಿದೇಶಿ ವಿನಿಮಯ ಕೇಂದ್ರಗಳು, ೧೧೦೦ಕ್ಕೂ ಅಧಿಕ ಎಟಿಎಂಗಳು ಹಾಗೂ ೨,೦೦೦ಕ್ಕೂ ಅಧಿಕ ಪಾಯಿಂಟ್-ಆಫ್-ಸೇಲ್ ಟರ್ಮಿನಲ್‌ಗಳ ಜಾಲವನ್ನು ಹೊಂದಿದೆ.ಎಂ.ಸಿ.ಸಿ.ಬ್ಯಾಂಕ್‌ನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೋ ಅವರ ಚುರುಕಾದ ನಾಯಕತ್ವ ಮತ್ತು ಪರಿವರ್ತನಾ ದೃಷ್ಟಿಕೋನವನ್ನು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು. ಬ್ಯಾಂಕ್‌ನ ಕಾರ್ಯಾಚರಣಾ ದಕ್ಷತೆ, ತಾಂತ್ರಿಕ ಸಮನ್ವಯ, ಶಾಖೆಗಳ ವಿಸ್ತರಣೆ ಹಾಗೂ ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್ ಸೇವೆಗಳನ್ನು ಬಲಪಡಿಸುವಲ್ಲಿ ಅವರ ಪ್ರಯತ್ನಗಳನ್ನು ಉಲ್ಲೇಖಿಸಲಾಯಿತು. ಈ ಪ್ರಯತ್ನಗಳಿಂದ ಎಂ.ಸಿ.ಸಿ. ಬ್ಯಾಂಕ್ ಕರ್ನಾಟಕದ ಪ್ರಮುಖ ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಒಂದಾಗಿದೆ ಎಂಬುದನ್ನು ಗಮನಕ್ಕೆ ತರಲಾಯಿತು.ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೋ ಮಾತನಾಡಿ, ಕರಾವಳಿ ಕರ್ನಾಟಕದ ಪ್ರಮುಖ ಬ್ಯಾಂಕಿಂಗ್ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ ಮಂಗಳೂರಿನ ಐತಿಹಾಸಿಕ ಮತ್ತು ಸಾಮಾಜಿಕ-ಆರ್ಥಿಕ ಮಹತ್ವದ ಕುರಿತು ವಿವರಣಾತ್ಮಕ ಮಾಹಿತಿ ನೀಡಿದರು.ಎಂಸಿಸಿ ಬ್ಯಾಂಕಿನ ೧೧೪ ವರ್ಷಗಳ ಪರಂಪರೆಯನ್ನು ಪರಿಚಯಿಸುವ ಡಾಕ್ಯುಮೆಂಟರಿಯನ್ನು ಪ್ರತಿನಿಧಿಗಳಿಗೆ ಪ್ರದರ್ಶಿಸಲಾಯಿತು. ೨೦೧೮ರ ನಂತರ ಅನಿಲ್ ಲೋಬೋ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಎಂ.ಸಿ.ಸಿ. ಬ್ಯಾಂಕ್‌ನಲ್ಲಿ ನಡೆದ ಪರಿವರ್ತನಾ ಹಂತದ ಕುರಿತಾದ ಮಾಹಿತಿಯನ್ನೂ ಪ್ರಸ್ತುತಪಡಿಸಲಾಯಿತು.ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ ಜಾರಿ, ಡಿಜಿಟಲ್ ಬ್ಯಾಂಕಿಂಗ್ ವೇದಿಕೆಗಳ ಪರಿಚಯ, ಮೊಬೈಲ್ ಬ್ಯಾಂಕಿಂಗ್ ಸೇವೆಗಳು, ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಮೂಲಸೌಕರ್ಯ, ಗ್ರಾಹಕಕೇಂದ್ರಿತ ಡಿಜಿಟಲ್ ಸೇವೆಗಳು ಹಾಗೂ ಸುಧಾರಿತ ಆಂತರಿಕ ಕಾರ್ಯಾಚರಣಾ ವ್ಯವಸ್ಥೆಗಳಂತಹ ಬ್ಯಾಂಕಿನ ಆಧುನೀಕರಣ ಯೋಜನೆಗಳಿಗೆ ವಿಶೇಷ ಮಹತ್ವ ನೀಡಲಾಯಿತು.

ಎಂ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕರಾದ ಐರಿನ್ ರೆಬೆಲ್ಲೋ, ಹೆರಾಲ್ಡ್ ಜೆ. ಮೊಂತೇರೋ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೋ, ಸುಶಾಂತ್ ಸಲ್ದಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್.ಮಿನೇಜಸ್ ಇದ್ದರು.

ಎಂ.ಸಿ.ಸಿ. ಬ್ಯಾಂಕ್‌ನ ಐಟಿ ವಿಭಾಗದ ಮುಖ್ಯಸ್ಥ ಅಲ್ವಿನ್ ಡಿಸೋಜಾ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಎನ್ನುವುದು ನಿರಂತರ ಹವ್ಯಾಸವಾಗಲಿ
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಕ್ಕೆ ತೆರೆ