ಕನ್ನಡಪ್ರಭ ವಾರ್ತೆ ಹೊಸನಗರ
ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ವಿಪರೀತವಾಗಿ ಹಬ್ಬುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಜಾಗೃತಿಯಿಂದ ಕೆಲಸ ಮಾಡಬೇಕು ಮತ್ತು ಡೆಂಘೀ ಕಾಯಿಲೆ ಹೋಗುವ ವರೆಗೆ ಒಂದು ದಿನವೂ ರಜೆ ಹಾಕದೆ ಆಸ್ಪತ್ರೆ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲ ಕೃಷ್ಣ ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದ ಅವರು, ಹೊಸನಗರ ತಾಲೂಕಿನಲ್ಲಿ ಒಂದು ತಿಂಗಳಲ್ಲಿ 43 ಡೆಂಘೀ ಪ್ರಕರಣಗಳು ದಾಖಲಾಗಿದ್ದು, ಅವರು ಗುಣ ಮುಖರಾಗಿ ಮನೆಗೆ ಹೋಗಿ ದ್ದಾರೆ. ತಾಲ್ಲೂಕಿನಲ್ಲಿ ವಾರಕ್ಕೆ ಒಮ್ಮೆ ಗ್ರಾಮ ಪಂಚಾಯಿತಿ ಯವರ ಸಹಾಯ ದಿಂದ ಔಷಧಿ ಸಿಂಪಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ತಾಲೂಕಿನಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಸುರೇಶ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಗುರುಮೂರ್ತಿ ಸಭೆಗೆ ತಿಳಿಸಿ ದರು.
ಮಳೆಗಾಲ ಮತ್ತು ಡೆಂಘೀ ವಿರುದ್ಧ ಎಲ್ಲ ಅಧಿಕಾರಿಗಳು ಹೋರಾಟ ನಡೆಸಿ ಸಾರ್ವಜನಿಕರಿಂದ ಪ್ರಶಂಸೆ ಪಡೆಯಿರಿ ನೀವು ಮೂರು ತಿಂಗಳು ಹಗಲಿರುಳು ಸೇವೆಸಲ್ಲಿಸು ವುದರಿಂದ ನಮ್ಮ ಸರ್ಕಾರಕ್ಕೆ ಮತ್ತು ನಮಗೆ ಹೆಮ್ಮೆ ಎನಿಸುತ್ತದೆ. ನೀವು ಮಾಡುತ್ತಿರುವ ಕೆಲಸ ಸಾರ್ವಜನಿಕರಿಗೆ ತೃಪ್ತಿಪಡಿಸುವಂತಿರಬೇಕು ಅದನ್ನು ಬಿಟ್ಟು ಜನರನ್ನು ಅಲೆದಾಡಿಸುವುದು ಮಾಡಿದರೆ, ಸಾರ್ವಜನಿಕರಿಂದ ದೂರು ಬಂದರೆ ತಕ್ಷಣ ಅಂಥಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಬೇಳೂರು ನೀಡಿದರು.ಶಾಸಕ ಜ್ಞಾನೇಂದ್ರ ಗುಡುಗು:
ಸುಮಾರು ಅಂದಾಜು ನೂರು ಕೋಟಿಯಷ್ಟು ಹಣವನ್ನು ವ್ಯಯ ಮಾಡಿ ಆಸ್ಪತ್ರೆ ಕಟ್ಟಿರುವುದು ಅಲಂಕಾರಕ್ಕಾಗಿ ಅಲ್ಲ, ಸಾರ್ವಜನಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಕಟ್ಟಿರು ವುದು. ಸರ್ಕಾರಿ ಆಸ್ಪತ್ರೆಗೆ ಬಂದರೇ ರೋಗಿಗಳ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ ಎಂದು ದೂರುಗಳು ಆಗಾಗ ಬರುತ್ತಿದೆ ಎಂದು ಕೆ.ಡಿ.ಪಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಗುಡುಗಿದರು.ಕೆಡಿಪಿ ಸಭೆಯಲ್ಲಿ ಹೊಸನಗರ ತಾಲೂಕಿನ ಕಾರ್ಮಿಕ ಇಲಾಖೆಯ ವತಿ ಯಿಂದ 81 ಜನ ಫಲಾನುಭ ವಿಗಳಿಗೆ ಹೊಲಿಗೆ ಯಂತ್ರ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಹೊಸನಗರ ತಾಲೂಕಿನಲ್ಲಿ ನಾಲ್ಕು ಅಂಬ್ಯುಲೆನ್ಸ್ ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಇಟ್ಟಿರುವುದು ತುರ್ತು ರೋಗಿಗಳನ್ನು ಕರೆದುಕೊಂಡು ಹೋಗುವಾಗ ನಗರದಿಂದ ರಿಪ್ಪನ್‌ಪೆಟೆಯವರೆಗೆ ಒಂದು ಅಂಬ್ಯುಲೆನ್ಸ್ ರಿಪ್ಪನ್‌ಪೇಟೆ ಯಿಂದ ಇನ್ನೊಂದು ಅಂಬ್ಯು ಲೆನ್ಸ್ ಬದಲಾವಣೆಗೆ ಆದೇಶ ನೀಡಿದವರು ಯಾರು ? ರೋಗಿಯ ಜೀವ ಉಳಿಸು ವುದು ನಿಮ್ಮ ಕೈಯಲ್ಲಿದ್ದು ಅವರನ್ನು ಉಳಿಸುವ ಪ್ರಯತ್ನ ಮಾಡಬೇಕು ಇಂದಿನಿಂದಲೇ ಯಾವ ಅಂಬ್ಯುಲೆನ್ಸ್ ತುರ್ತು ಇದ್ದಾಗ ಯಾವ ಆಸ್ಪತ್ರೆಗೆ ತಲುಪಿ ಸಬೇಕೋ ಅಲ್ಲಿಯವರೆಗೆ ರೋಗಿಯನ್ನು ಕರೆದು ಕೊಂಡು ಹೋಗಿ ಆಸ್ಪತ್ರೆಗೆ ತಲುಪಿಸಿ ರೋಗಿಯ ಜೀವ ಉಳಿಸಿ ಎಂದು ತಿಳಿಸಿದರು.ಈ ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್, ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ತಾ.ಪಂ. ವ್ಯವಸ್ಥಾಪಕರಾದ ಸಂತೋಷ್ ಕುಮಾರ್, ಅಬಕಾರಿ ಇನ್ಸ್ಪೆಕ್ಟರ್ ನಾಗ ರಾಜ್, ಬಿಇಓ ಕೃಷ್ಣಮೂರ್ತಿ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಹಾಗೂ ಬಸವ ರಾಜ್, ರೆವಿನ್ಯೂ ಇನ್ಸ್ಪೆಕ್ಟರ್ ರೇಣುಕಯ್ಯ, ಕೌಶಿಕ್ ತಾಲ್ಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ತಾಲ್ಲೂಕಿನ ಎಲ್ಲ ಅಧಿಕಾರಿಗಳ ವರ್ಗದ ವರು ಉಪಸ್ಥಿತರಿದ್ದರು.