ಮಂಗನ ಕಾಯಿಲೆ ತಡೆಗೆ ಔಷಧಿ: ಸಿಎಂ

KannadaprabhaNewsNetwork | Published : Mar 7, 2024 1:45 AM

ಸಾರಾಂಶ

ಮಂಗನ ಕಾಯಿಲೆಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಅವರಿಗೆ ಪರಿಹಾರ ನೀಡಲಾಗುತ್ತದೆ. ಅಲ್ಲದೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ.

ಶಿರಸಿ:ಮಂಗನ ಕಾಯಿಲೆ ತಡೆಗಟ್ಟುವ ಜೌಷಧಿ ಕಂಡುಹಿಡಿಯುವ ಕುರಿತು ಸರ್ಕಾರ ಗಂಭೀರ ಕ್ರಮ ವಹಿಸುತ್ತದೆ. ಕಾಯಿಲೆಯಿಂದ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲು ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರುನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗನ ಕಾಯಿಲೆಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಅವರಿಗೆ ಪರಿಹಾರ ನೀಡಲಾಗುತ್ತದೆ. ಅಲ್ಲದೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಯಾರೂ ಸಾಯಬಾರದು. ಔಷಧಿ ಕಂಡುಹಿಡಿಯುತ್ತೇವೆ. ರೋಗ ನಿವಾರಣೆ ಮತ್ತು ಪರಿಹಾರ ಕಂಡುಹಿಡಿಯುತ್ತೇವೆ. ಮಂಗನ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಭರಿಸುವ ಕುರಿತು ಸಹ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.ವಾಸ್ತವಿಕ ನೆಲೆಗಟ್ಟಿನಲ್ಲಿ, ಚಿಂತಕ, ಹಿರಿಯ ಸಾಹಿತಿ ನಾ. ಡಿಸೋಜಾ ಅವರಿಗೆ ಈ ಬಾರಿಯ ಪಂಪ ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನಲ್ಲಿ ಕೊಟ್ರೂ ಒಂದೇ, ಉತ್ತರಕನ್ನಡ ಜಿಲ್ಲೆಯಲ್ಲಿ ಕೊಟ್ರು ಒಂದೇ, ಪ್ರಶಸ್ತಿಗೆ ಅದರದ್ದೇ ಆದ ಗೌರವವಿದೆ ಎಂದರು.

ರಾಜ್ಯದಲ್ಲಿ ₹ ೧೪೦ ಕೋಟಿ ನೀರು ಸರಬರಾಜಿಗೆ ಮೀಸಲಿಡಲಾಗಿದ್ದು, ₹ ೭೦ ಕೋಟಿ ಹೆಚ್ಚುವರಿಯಾಗಿ ನೀಡುತ್ತೇನೆ ಎಂದು ಹೇಳಿದ್ದೇನೆ. ಕೊಳವೆ ಬಾವಿ ಕೊರತೆ, ಪೈಪ್ ಜೋಡಣೆ, ಖಾಸಗಿ ಕೊಳವೆ ಬಾವಿ ಪಡೆಯಲು ಹಣ ಸಾಕಷ್ಟು ಇದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ₹ ೮೫೪ ಕೋಟಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಹಾಯವಾಣಿ ತೆರೆದಿದ್ದೇವೆ. ವಾರಕ್ಕೊಮ್ಮೆ ಗ್ರಾಮ ಲೆಕ್ಕಾಧಿಕಾರಿ, ಅಭಿವೃದ್ಧಿ ಅಧಿಕಾರಿ ಸಭೆ ನಡೆಸಬೇಕು ಎಂದು ಹೇಳಿದ್ದೇನೆ. ಲೋಪವಾದರೆ ಜಿಲ್ಲಾಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಡಕೆ ಎಲೆ ಚುಕ್ಕೆ ರೋಗಕ್ಕೆ ಪರಿಹಾರ ನೀಡುವ ಕುರಿತು ವರದಿ ಆಧರಿಸಿ, ಪರಿಶೀಲಿಸುತ್ತೇವೆ. ಸಾಕಷ್ಟು ಹಾನಿಯಾದರೆ ಪರಿಹಾರ ನೀಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

Share this article