ಕನಕಪುರ: ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದರೂ ಮೈಕ್ರೋ ಫೈನಾನ್ಸ್ ಕಿರುಕುಳ: ಯುವಕ ಆತ್ಮಹತ್ಯೆ

KannadaprabhaNewsNetwork | Updated : Mar 03 2025, 11:38 AM IST

ಸಾರಾಂಶ

ಕನಕಪುರ: ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದರೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಧಾರಣ ಘಟನೆ ತಾಲೂಕಿನ ಕಸಬಾ ಹೋಬಳಿಯಲ್ಲಿ ನಡೆದಿದೆ.

ಕನಕಪುರ: ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದ್ದರೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಧಾರಣ ಘಟನೆ ತಾಲೂಕಿನ ಕಸಬಾ ಹೋಬಳಿಯಲ್ಲಿ ನಡೆದಿದೆ.

ತಾಲೂಕಿನ ಗೌಡಹಳ್ಳಿ ಗ್ರಾಮದ ಅರುಣ್(28) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ಈತ ನಗರದ ಮುತ್ತೂಟ್ ಪಿನ್ ಕಾರ್ಪ್ ಕಂಪನಿಯುಲ್ಲಿ 3 ಲಕ್ಷ ರು. ಸಾಲ ಮಾಡಿದ್ದ. ಕಳೆದ ಎರಡು-ಮೂರು ತಿಂಗಳಿನಿಂದ ತನ್ನ ಸಂಪಾದನೆ ಆದಾಯದಲ್ಲಿ ಏರು-ಪೇರಾಗಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೊನ್ನೆ ರಾತ್ರಿ ಮನೆಯ ಬಳಿ ಪೈನಾನ್ಸ್ ಸಿಬ್ಬಂದಿ ಬಂದು ಸಾಲದ ಹಣ ಪಾವತಿಸುವಂತೆ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಸಿದ್ದರಿಂದ ಮನನೊಂದು ಅರುಣ್ ವಿಷ ಸೇವಿಸಿದ್ದಾರೆನ್ನಲಾಗಿದೆ.

ತಕ್ಷಣ ಆತನನ್ನು ಕುಟುಂಬಸ್ಥರು ದಯಾನಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಅರುಣ್ ಮೃತಪಟ್ಟಿದ್ದಾರೆ. ನಮ್ಮ ಮಗನ ಸಾವಿಗೆ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಗಳೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಗ್ರಾಮಸ್ಥರ ಆಕ್ರೋಶ: ಖಾಸಗಿ ಮೈಕ್ರೋ ಪೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದರೂ ಯಾವುದೇ ಭಯವಿಲ್ಲದಂತಾಗಿದೆ. ಮೈಕ್ರೋ ಪೈನಾನ್ಸ್ ಸಿಬ್ಬಂದಿಯ ಕಿರುಕುಳ ದಿನದಿನವೂ ಹೆಚ್ಚುತ್ತಲೇ ಇದೆ. ಜನರು ತಮ್ಮ ಕಷ್ಟಕ್ಕೆ ಸಾಲ ತೆಗೆದುಕೊಂಡಿದ್ದರೂ ಸಹ ಕೆಲವೊಮ್ಮೆ ಮನೆಯಲ್ಲಿ ಸಂಪಾದನೆಯ ಏರು- ಪೇರುಗಳಿಂದ ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಿರುವುದಿಲ್ಲ. ಅದನ್ನೇ ನೆಪ ಮಾಡಿಕೊಂಡು ಫೈನಾನ್ಸ್ ಕಂಪನಿಗಳು

ಸಾಲಗಾರರ ಖಾಸಗಿ ಬದುಕಿನ ಜೊತೆಗೆ ಆಟವಾಡುತ್ತಿವೆ. ಅಮಾಯಕ ಜೀವಗಳು ಬಲಿಯಾಗುತ್ತಿವೆ. ಪೊಲೀಸರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸು ಅಮಾಯಕ ಬಡ ಜೀವಗಳನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. 

Share this article