ಟಿವಿ ವರದಿಗಾರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿದ ಸಚಿವ, ಶಾಸಕ

KannadaprabhaNewsNetwork |  
Published : Sep 16, 2025, 01:00 AM IST
ಟಿವಿ ವರದಿಗಾರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿದ ಸಚಿವ ಸಂತೋಷ ಲಾಡ್‌ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ. | Kannada Prabha

ಸಾರಾಂಶ

ಸೋಮವಾರ ಇಲ್ಲಿ ಆರಂಭವಾದ "ಕರ್ನಾಟಕ ಎಲೆಕ್ಟ್ರಾನಿಕ್‌ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್‌ " ಉದ್ಘಾಟನೆ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಿದ ಸಚಿವ ಸಂತೋಷ ಲಾಡ್, ಕ್ಯಾಮೆರಾ ಹಿಡಿದರೆ, ಶಾಸಕ ಮಹೇಶ ಟೆಂಗಿನಕಾಯಿ ಲೋಗೋ ಹಿಡಿದು ಥೇಟ ವಾಹಿನಿ ಪತ್ರಕರ್ತರಂತೆ ಮುಖ್ಯಮಂತ್ರಿಗಳ ಸಂದರ್ಶನ ಮಾಡಿ ಗಮನ ಸೆಳೆದರು.

ಹುಬ್ಬಳ್ಳಿ: ಕ್ಯಾಮೆರಾಮೆನ್‌ ಸಂತೋಷ್ ಲಾಡ್‌ ಜತೆ ಮಹೇಶ್‌ ಟೆಂಗಿನಕಾಯಿ... ಟಿವಿ..!

ಸಚಿವ ಸಂತೋಷ ಲಾಡ್‌ ಕ್ಯಾಮೆರಾ ಹಿಡಿದು ಓಡಾಡಿ ಶೂಟ್‌ ಮಾಡಿದರೆ, ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಸುದ್ದಿ ವಾಹಿನಿಯ ಲೋಗೋ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿ, ಕೊನೆಯಲ್ಲಿ ಕ್ಯಾಮೆರಾಮೆನ್‌ ಸಂತೋಷ್ ಲಾಡ್‌ ಜತೆ ಮಹೇಶ್‌ ಟೆಂಗಿನಕಾಯಿ... ಟಿವಿ.. ಎಂದಾಗ ಕಿವಿಗಡಚಿಕ್ಕುವ ಕರತಾಡಣ.

ಸೋಮವಾರ ಇಲ್ಲಿ ಆರಂಭವಾದ "ಕರ್ನಾಟಕ ಎಲೆಕ್ಟ್ರಾನಿಕ್‌ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್‌ " ಉದ್ಘಾಟನೆ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಿದ ಸಚಿವ ಸಂತೋಷ ಲಾಡ್, ಕ್ಯಾಮೆರಾ ಹಿಡಿದರೆ, ಶಾಸಕ ಮಹೇಶ ಟೆಂಗಿನಕಾಯಿ ಲೋಗೋ ಹಿಡಿದು ಥೇಟ ವಾಹಿನಿ ಪತ್ರಕರ್ತರಂತೆ ಮುಖ್ಯಮಂತ್ರಿಗಳ ಸಂದರ್ಶನ ಮಾಡಿ ಗಮನ ಸೆಳೆದರು.

ಮಹೇಶ ಟೆಂಗಿನಕಾಯಿ ಕೇಳಿದ "ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳೆನು? " ಎನ್ನುವ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ "ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳಿಗೆ ಬಜಟ್‌ನಲ್ಲಿ ಸೂಕ್ತ ಅನುದಾನ ಇಟ್ಟಿರುವ ಸರ್ಕಾರ, ಅವುಗಳನ್ನು ಪೂರ್ತಿಗೊಳಿಸುವ ಬದ್ದತೆ ಹೊಂದಿದೆ " ಎಂದು ಸುಧೀರ್ಘ ಉತ್ತರ ನೀಡಿದರು.

ಪಕ್ಕದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ "ಇತ್ತೀಚೆಗೆ ಹೆಚ್ಚು ಸ್ಮಾರ್ಟ್ ಆಗುತ್ತಿದ್ದೀರಲ್ಲ " ಎಂದು ಮುಖ್ಯಮಂತ್ರಿಗಳ ಕಾಲೆಳೆದರೆ, ಸಚಿವ ಲಾಡ್ ಈ ವಯಸ್ಸಿನಲ್ಲೂ ಇಡೀ ದಿನ ಲವಲವಿಕೆಯಲ್ಲಿ ಇರುತ್ತೀರಲ್ಲ, ಏನದರ ಗುಟ್ಟು ಎಂದು ಪ್ರಶ್ನಿಸಿ ನಗೆಯ ಅಲೆ ಎಬ್ಬಿಸಿದರು.

ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಎಂ.ಆರ್. ಪಾಟೀಲ, ವಿಜಯಾನಂದ ಕಾಶಪ್ಪನವರ, ಶ್ರೀನಿವಾಸ ಮಾನೆ, ಎಫ್.ಎಚ್. ಜಕ್ಕಪ್ಪನವರ, ಎಂ.ವಿ.ಪಠಾಣ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಅಜ್ಜೀಂಪೀರ್‌ ಖಾದ್ರಿ, ಎಸ್. ರವಿಕುಮಾರ್, ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಹುಡಾ ಆಯುಕ್ತ ಸಂತೋಷಕುಮಾರ್ ಬಿರಾದಾರ್, ಸತೀಶ್ ಅಂಜನಪ್ಪ, ಪ್ರಕಾಶ್ ನೂಲ್ವಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಶಿವರಾಮ ಅಸುಂಡಿ ಸ್ವಾಗತಿಸಿದರು. ಗುರುರಾಜ ಹೂಗಾರ, ಯಲ್ಲಪ್ಪ ಸೋಲಾರಗೊಪ್ಪ, ಮೆಹಬೂಬ ಮುನವಳ್ಳಿ, ಸಂತೋಷ ಪಾಟೀಲ್‌, ಮಹೇಂದ್ರ ಚವ್ಹಾಣ, ಕಿರಣ ಬಾಕಳೆ ಮತ್ತಿತರರು ಇದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ