ವೈಯಕ್ತಿಕವಾಗಿ 42 ಕೆರೆ ತುಂಬಿಸಲಾಗಿದೆ ಎಂದ ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Oct 26, 2025, 02:00 AM IST
25ಎಚ್ಎಸ್ಎನ್12 : ನುಗ್ಗೇಹಳ್ಳಿ ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್ ಲೈನ್ ಮೂಲಕ ನಿರೋದಗಿಸುವ ಯೋಜನೆಗೆ ಶಾಸಕ ಸಿಎನ್ ಬಾಲಕೃಷ್ಣ ಶುಕ್ರವಾರ ಗಂಗೆಪೂಜೆ ನೆರವೇರಿಸಿ  ಚಾಲನೆ ನೀಡಿದರು. | Kannada Prabha

ಸಾರಾಂಶ

ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್‌ಲೈನ್ ಮೂಲಕ ನಿರೋದಗಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ತಾವು ಕಳೆದ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಸುಮಾರು 13 ಲಕ್ಷ ರು. ವೈಯಕ್ತಿಕವಾಗಿ ಹಣ ನೀಡಿ ರಾಯಸಮುದ್ರ ಕಾವಲು ಕೆರೆಯಿಂದ ಸುಮಾರು 3 ಕಿ.ಮೀ ಪೈಪ್‌ಲೈನ್ ಮೂಲಕ ಮೋಟಾರ್‌ ಅಳವಡಿಸಿ ಕೆರೆಗೆ ನೀರು ಹರಿಸುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದರು. ಗ್ರಾಮದಲ್ಲಿ ಈಗಾಗಲೇ ಅಂಬೇಡ್ಕರ್‌ ಭವನ ನಿರ್ಮಾಣ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಟ್ಟಡವನ್ನು 60 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಜೊತೆಗೆ ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ಒಳ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಚನ್ನರಾಯಪಟ್ಟಣ ತಾಲೂಕಿನ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಅನುದಾನ ನೆಚ್ಚಿಕೊಳ್ಳದೆ ವೈಯಕ್ತಿಕವಾಗಿ 42 ಕೆರೆಗಳನ್ನು ತುಂಬಿಸಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್‌ಲೈನ್ ಮೂಲಕ ನಿರೋದಗಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ತಾವು ಕಳೆದ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಸುಮಾರು 13 ಲಕ್ಷ ರು. ವೈಯಕ್ತಿಕವಾಗಿ ಹಣ ನೀಡಿ ರಾಯಸಮುದ್ರ ಕಾವಲು ಕೆರೆಯಿಂದ ಸುಮಾರು 3 ಕಿ.ಮೀ ಪೈಪ್‌ಲೈನ್ ಮೂಲಕ ಮೋಟಾರ್‌ ಅಳವಡಿಸಿ ಕೆರೆಗೆ ನೀರು ಹರಿಸುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದರು. ಗ್ರಾಮದಲ್ಲಿ ಈಗಾಗಲೇ ಅಂಬೇಡ್ಕರ್‌ ಭವನ ನಿರ್ಮಾಣ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಟ್ಟಡವನ್ನು 60 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಜೊತೆಗೆ ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ಒಳ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಟಿಸಿ ರಸ್ತೆಯಿಂದ ಗ್ರಾಮದ ಹೊರಗಿನ ರಸ್ತೆ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಆದ್ಯತೆ ನೀಡುವುದು ತಿಳಿಸಿದ ಅವರು, ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಯಲ್ಲಮ್ಮ ದೇವಿ ಹಾಗೂ ಚಿಕ್ಕಮ್ಮ ದೇವಾಲಯಗಳ ನಿರ್ಮಾಣಕ್ಕೆ ತಲಾ 2 ಲಕ್ಷ ರು. ಅನುದಾನ ಕೊಡುವುದಾಗಿ ಭರವಸೆ ನೀಡಿದರು.ಗ್ರಾಮದ ಬಗ್ಗೆ ಅಸಮಾಧಾನ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮದಲ್ಲಿ ತಮ್ಮ ಶಾಸಕರ ಅವಧಿಯಲ್ಲಿ ಅಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದರು ಸಹ ತಮಗೆ ಹೆಚ್ಚು ಮತ ಬರಲಿಲ್ಲ ಆದರೂ ತಾವು ಕೊಟ್ಟ ಮಾತಿನಂತೆ ಕೆರೆ ತುಂಬಿಸುವ ಯೋಜನೆಗೆ ವೈಯಕ್ತಿಕವಾಗಿ ಹಣ ನೀಡಿ ಯೋಜನೆ ಪೂರ್ಣಗೊಳಿಸಿದ್ದೇನೆ ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದರು.ಹಾಸನ ಜಿಲ್ಲಾ ಯಾದವ ಸಂಘದ ಮಾಜಿ ಅಧ್ಯಕ್ಷ ಹುಲ್ಲೇನಹಳ್ಳಿ ನಾರಾಯಣ್ ಮಾತನಾಡಿ, ಗ್ರಾಮಸ್ಥರ ಮನವಿಯಂತೆ ಶಾಸಕರು ಈಗಾಗಲೇ 13 ಲಕ್ಷ ರುಪಾಯಿ ಖರ್ಚು ಮಾಡಿ ಯೋಜನೆ ಪೂರ್ಣಗೊಳಿಸಿದ್ದಾರೆ. ಇನ್ನು 4 ಲಕ್ಷದಲ್ಲಿ ಸಂಪೂರ್ಣ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿಗೂ ಸದ್ಯದಲ್ಲೇ ಅನುದಾನದ ಭರವಸೆ ನೀಡಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಮುಂಬರುವ ಚುನಾವಣೆಗಳಲ್ಲಿ ಶಾಸಕರ ಕೈ ಬಲ ಬಡಿಸುವಂತೆ ಮನವಿ ಮಾಡಿದರು.ಜೆಡಿಎಸ್ ಯುವ ಮುಖಂಡ ಅಣತಿ ಯೋಗೀಶ್ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿದರು. ಯೋಜನೆಗೆ ಚಾಲನೆ ನೀಡುವ ಮುನ್ನ ಗ್ರಾಮದ ಶ್ರೀ ಸಂಗಮೇಶ್ವರ ಶ್ರೀ ಲಕ್ಷ್ಮಿ ದೇವಿ ಯಲ್ಲಮ್ಮ ದೇವಿ ಚಿಕ್ಕಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯೋಜನೆಗೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಟಿ ಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷ ಹೊನ್ನೇಗೌಡ, ಮಾಜಿ ಅಧ್ಯಕ್ಷ ಎನ್ಎಸ್ ಮಂಜುನಾಥ್, ಕೃಷಿ ಪತ್ತಿನ ಅಧ್ಯಕ್ಷರುಗಳಾದ ವಿಕ್ಟರ್, ಮಧು, ಗ್ರಾಪಂ ಸದಸ್ಯರಾದ ಕಮಲಾಕ್ಷಿ ಗಿರೀಶ್, ನಟರಾಜ್ ಯಾದವ್, ಉದ್ಯಮಿ ಚಿಪ್ಪಿನ ಚಂದ್ರು, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಶಂಕರ್, ಅಮಾಸಯ್ಯ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ರಂಗಪ್ಪ, ಮುಖಂಡರಾದ ದುಗ್ಗೇನಹಳ್ಳಿ ವೀರೇಶ್, ಪುಟ್ಟಸ್ವಾಮಿ, ಹೊಸೂರು ಚಂದ್ರಪ್ಪ, ಕುಳೇಗೌಡ, ಹುಲಿಕೆರೆ ಸಂಪತ್ ಕುಮಾರ್, ಎಂ ಎಸ್ ಸುರೇಶ್, ಮೊದಲಗೆರೆ ದಿಲೀಪ್, ನವೀನ್ ಕುಮಾರ್, ಗುಡಿ ಗೌಡ್ರು ರವೀಶ್, ಯಲ್ಲಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

PREV

Recommended Stories

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರ್ಭಟ : ಬೆಳೆ ಹಾನಿ ಆತಂಕದಲ್ಲಿ ರೈತರು
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌