ಹೊಸ ಬಸ್ ಸೇವೆಗೆ ಶಾಸಕ ಬಣಕಾರ ಚಾಲನೆ

KannadaprabhaNewsNetwork |  
Published : Mar 04, 2024, 01:21 AM IST
೩ಎಚ್‌ಕೆಆರ್೧ | Kannada Prabha

ಸಾರಾಂಶ

ಹೊಸದಾಗಿ ರಚನೆಯಾದ ರಟ್ಟೀಹಳ್ಳಿ ತಾಲೂಕಿಗೆ ಹೊಸ ಸಾರಿಗೆ ಘಟಕ ಸ್ಥಾಪಿಸಿವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದಕ್ಕೆ ಸಾರಿಗೆ ಇಲಾಖೆ ಸ್ಪಂದಿಸಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ವಾಯುವ್ಯ ಕರ್ನಾಟಕ ಸಾರಿಗೆ ಘಟಕಕ್ಕೆ ನೂತನವಾಗಿ ೨ ಹೊಸ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರೇಕೆರೂರು ಸಾರಿಗೆ ಘಟಕಕ್ಕೆ ೨ ವರ್ಷಗಳ ನಂತರ ಹೊಸ ಬಸ್‌ಗಳನ್ನು ಒದಗಿಸಲಾಗಿದೆ. ಹಿರೇಕೆರೂರು ಸಾರಿಗೆ ಘಟಕವನ್ನು ಹೆಚ್ಚು ಸದೃಢಗೊಳಿಸುವ ಸಲುವಾಗಿ ಇನ್ನು ೬ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸಿದ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಸದ್ಯ ೪ ಬಸ್‌ ನೀಡಿದ್ದಾರೆ. ಹೊಸದಾಗಿ ರಚನೆಯಾದ ರಟ್ಟೀಹಳ್ಳಿ ತಾಲೂಕಿಗೆ ಹೊಸ ಸಾರಿಗೆ ಘಟಕ ಸ್ಥಾಪಿಸಿವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ. ಜತೆಗೆ ಹಿರೇಕೆರೂರು ಸಾರಿಗೆ ಘಟಕದ ಒತ್ತಡ ಮತ್ತು ಸಾರ್ವಜನಿಕರಿಗೆ ವಿಶಾಲ ಬಸ್ ತಂಗುದಾಣ ನಿರ್ಮಿಸುವ ಸಲುವಾಗಿ ಈಗಿರುವ ಸಾರಿಗೆ ಘಟಕವನ್ನು ಬೇರೆ ಕಡೆ ಸ್ಥಳಾಂತರಿಸಲು ನಿರ್ಧರಿಸಿದ್ದು ಸೂಕ್ತ ಸ್ಥಳ ಸಿಕ್ಕ ಕೂಡಲೇ ಸ್ಥಳಾಂತರಿಸಲಾಗುವುದು ಎಂದರು.

ಮಧ್ಯಮ ವರ್ಗದ ಹಾಗೂ ದುಡಿಯುವ ಮಹಿಳೆಯರಿಗೆ ಶಕ್ತಿ ಯೋಜನೆಯು ಹೆಚ್ಚು ಸಹಕಾರಿಯಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಮಾತ್ರವಲ್ಲದೆ ಹಣ ಪಾವತಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಇದು ನಿಗಮಗಳು ಸ್ವಾವಲಂಬಿಯಾಗಲು ಸಹಾಯ ಮಾಡಿದೆ. ಶಕ್ತಿ ಯೋಜನೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರೊಂದಿಗೆ ಯೋಜನೆಯು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದೆ. ಹಿರೇಕೆರೂರು ಸಾರಿಗೆ ಘಟಕಕ್ಕೆ ಆರ್ಥಿಕ ಬಲವನ್ನು ಶಕ್ತಿ ಯೋಜನೆ ತುಂಬಿದೆ ಎಂದರು.

ಈ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥಾಪಕ ಮಂಜುನಾಥ ಹಡಪದ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಪಪಂ ಸದಸ್ಯ ಸನಾವುಲ್ಲಾ ಮಕಾನ್ದಾರ್, ಈರಪ್ಪ ಬಣಕಾರ,ರವಿ ನಾಯ್ಕರ್, ಆಂಜನೇಯ, ಸಾರಿಗೆ ಸಿಬ್ಬಂದಿ, ಸಾರ್ವಜನಿಕರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು