ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ

KannadaprabhaNewsNetwork | Published : Feb 21, 2024 2:01 AM

ಸಾರಾಂಶ

ಬಂಕನಹಳ್ಳಿ ಗ್ರಾಮ ವ್ಯಾಪ್ತಿಗೆ 39 ಲಕ್ಷ ರು., ವಿ.ಸಿ.ಫಾರಂ ಹಾಗೂ ಮೊಡಚಾಕನಹಳ್ಳಿ ಗ್ರಾಮಕ್ಕೆ ಪ್ಯಾಕೇಜ್ ಕಾಮಗಾರಿ 98ಲಕ್ಷ ರು. ಮತ್ತು ಮಾದೇಗೌಡನಕೊಪ್ಪಲು ಗ್ರಾಮಕ್ಕೆ 72 ಲಕ್ಷ ರು. ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಾಗೇ ಹೊಸಕೋಟೆ ಗ್ರಾಮ ವ್ಯಾಪ್ತಿಗೆ ₹50 ಲಕ್ಷ ಹಾಗೂ ಮೇನಾಗರ ಗ್ರಾಮಕ್ಕೆ ₹40 ಲಕ್ಷ ಸೇರಿ ಒಟ್ಟು ₹9 ಲಕ್ಷ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರಮೇಲುಕೋಟೆ ಕ್ಷೇತ್ರ ವ್ಯಾಪ್ತಿಯ ಬಂಕನಹಳ್ಳಿ,ವಿ.ಸಿ.ಫಾರಂ, ಮೊಡಚಾಕನಹಳ್ಳಿ ಹಾಗೂ ಮಾದೇಗೌಡನಕೊಪ್ಪಲು ಗ್ರಾಮದಲ್ಲಿ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.

ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು 2.09 ಕೋಟಿ ರು. ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಈ ಯೋಜನೆಯಿಂದ ಪ್ರತಿಯೊಂದು ಮನೆ ಮನೆಗೂ ಕಾವೇರಿ ನೀರು ಸರಬರಾಜಾಗುತ್ತದೆ. ಇದನ್ನು ಜನತೆ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದರು.

ಬಂಕನಹಳ್ಳಿ ಗ್ರಾಮ ವ್ಯಾಪ್ತಿಗೆ 39 ಲಕ್ಷ ರು., ವಿ.ಸಿ.ಫಾರಂ ಹಾಗೂ ಮೊಡಚಾಕನಹಳ್ಳಿ ಗ್ರಾಮಕ್ಕೆ ಪ್ಯಾಕೇಜ್ ಕಾಮಗಾರಿ 98ಲಕ್ಷ ರು. ಮತ್ತು ಮಾದೇಗೌಡನಕೊಪ್ಪಲು ಗ್ರಾಮಕ್ಕೆ 72 ಲಕ್ಷ ರು. ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಇ ಸಚಿನ್, ಗುತ್ತಿಗೆದಾರರಾದ ವೆಂಕಟೇಶ್, ರಣಜಿತ್, ದರ್ಶನ್, ನವೀನ್, ರೈತಸಂಘದ ಮುಖಂಡರಾದ ಸುಚೇಂದ್ರ, ರಾಘವೇಂದ್ರ ಹಾಗೂ ಗ್ರಾಮಸ್ಥರು ಇದ್ದರು.ಹೊಸಕೋಟೆ ಹಾಗೂ ಮೇನಾಗರ ಗ್ರಾಮದಲ್ಲಿ ಭೂಮಿ ಪೂಜೆಪಾಂಡವಪುರ:

ತಾಲೂಕಿನ ಹೊಸಕೋಟೆ ಹಾಗೂ ಮೇನಾಗರ ಗ್ರಾಮದಲ್ಲಿ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು.

ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 2023-24ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯಡಿ ಹೊಸಕೋಟೆ ಗ್ರಾಮ ವ್ಯಾಪ್ತಿಗೆ ₹50 ಲಕ್ಷ ಹಾಗೂ ಮೇನಾಗರ ಗ್ರಾಮಕ್ಕೆ ₹40 ಲಕ್ಷ ಸೇರಿ ಒಟ್ಟು ₹9 ಲಕ್ಷ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಈ ಯೋಜನೆಯಿಂದ ಪ್ರತಿಯೊಂದು ಮನೆ ಮನೆಗೂ ಕಾವೇರಿ ನೀರು ಸರಬರಾಜಾಗುತ್ತದೆ. ಇದನ್ನು ಜನತೆ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದರು.

ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಹದೇವಸ್ವಾಮಿ, ಗುತ್ತಿಗೆದಾರ ಹರಳಹಳ್ಳಿ ಹರ್ಷವರ್ಧನ, ರೈತಸಂಘದ ಮುಖಂಡರಾದ ಹೊಸಕೋಟೆ ಸುರೇಶ್, ಹಳೇಬೀಡು ತಿಮ್ಮೇಗೌಡ, ಕುಮಾರ್, ರೈತಸಂಘದ ತಾಲೂಕು ಮಹಿಳಾಧ್ಯಕ್ಷೆ ಕೋಕಿಲಾ ಜ್ಞಾನೇಶ್ ಡೇರಿ ಅಧ್ಯಕ್ಷ ನಾರಾಯಣಗೌಡ, ನರಸಿಂಹೇಗೌಡ, ಕೃಷ್ಣೇಗೌಡ, ಹೊಸಕೋಟೆ ಹಾಗೂ ಮೇನಾಗರ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

Share this article