ತೋಟಗಾರಿಕೆ ಇಲಾಖೆ ಕಾರ್ಯಕ್ರಮ ಬಳಸಲು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ

KannadaprabhaNewsNetwork | Published : Aug 14, 2024 12:51 AM

ಸಾರಾಂಶ

ತರೀಕೆರೆ, ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಅಪ್ರಧಾನ ಹಣ್ಣುಗಳ ಪರಿಚಯ-ಬೇಸಾಯ ಪದ್ದತಿ ಬಗ್ಗೆ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ, ತರೀಕೆರೆ

ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಕಚೇರಿ ಆವರಣದಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಮ್.ಎಚ್. ಮರಿಗೌಡರ ಜನ್ಮದಿನದ ಸ್ಮರಣಾರ್ಥ ಏರ್ಪಡಿಸಿದ್ದ ಅಪ್ರಧಾನ ಹಣ್ಣುಗಳ ಪರಿಚಯ ಹಾಗೂ ಬೇಸಾಯ ಪದ್ದತಿ ಬಗ್ಗೆ ವಿಚಾರ ಸಂಕಿರಣ, ರೈತರ ಬೆಳೆ ಸಮೀಕ್ಷೆ, ಹವಾಮಾನ ಆಧಾರಿತ ಬೆಳೆ ವಿಮೆ, ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿರು.

ತೋಟಗಾರಿಕೆ ಪಿತಾಮಹ ಡಾ.ಎಮ್.ಎಚ್.ಮರಿಗೌಡರು ಅಧಿಕಾರಿಯಾಗಿ ಮಾಡಿದ ಕೆಲಸ ಎಲ್ಲರ ಮನಸ್ಸಿನಲ್ಲಿ ಇರುವ ಹಾಗೆ ಎಲ್ಲ ಅಧಿಕಾರಿಗಳು ಕೆಲಸ ಮಾಡಬೇಕು. ಎಲ್ಲಾ ರೈತರು ಹವಾಮಾನ ಅಧಾರಿತ ಬೆಳೆ ವಿಮೆ (ಅಡಕೆ ಮಾವು, ಮೆಣಸಿನಕಾಯಿ) ಆ.16 ಕೊನೆ ದಿನಾಂಕವಿದ್ದು, ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ತೋಟಗಾರಿಕೆ ಉಪ ನಿರ್ದೇಶಕಿ ಕೆ. ಪೂರ್ಣಿಮಾ ಮಾತನಾಡಿ ಅಪ್ರಧಾನ ಹಣ್ಣುಗಳ ಮಹತ್ವ, ಮಾರುಕಟ್ಟೆ , ಆರೋಗ್ಯ ಪೂರ್ವಕ ಹಣ್ಣುಗಳು, ಇಲಾಖೆ ಯೋಜನೆ, ಬೆಳೆ ವಿಮೆ ಹಾಗೂ ರೈತರ ಬೆಳೆ ಸಮೀಕ್ಷೆ ಇವುಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿದರು.

ತೋಟಗಾರಿಕೆ ವಿಜ್ಞಾನಿ ಸುರೇಶ್ ಕುಮಾರ್ ಉಪನ್ಯಾಸ ನೀಡಿ ವಿವಿಧ ಅಪ್ರಧಾನ ಹಣ್ಣುಗಳು ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಜಗದೀಶ್, ರಘು, ತರೀಕೆರೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಯತಿರಾಜ್, ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಅವಿನಾಶ್, ತರೀಕೆರೆ ಮತ್ತು ಅಜ್ಜ0ಪುರ ಹಾಗೂ ವಿವಿಧ ಭಾಗದ ರೈತರು ಭಾಗವಹಿಸಿದ್ದರು.

13ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ತೋಟಗಾರಿಕೆ ಇಲಾಖೆ ವತಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು.ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ತೋಟಗಾರಿಕೆ ಉಪ ನಿರ್ದೇಶಕಿ ಕೆ. ಪೂರ್ಣಿಮಾ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಮತ್ತಿತರರು ಇದ್ದರು.

Share this article