ಹುಮ್ನಾಬಾದ್‌ನಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ನೇತೃತ್ವ ಬೈಕ್ ರ್‍ಯಾಲಿ

KannadaprabhaNewsNetwork |  
Published : Aug 15, 2024, 01:48 AM IST
ಚಿತ್ರ 14ಬಿಡಿಆರ್52 | Kannada Prabha

ಸಾರಾಂಶ

MLA in Humnabad Dr. Bike rally led by Siddu Patil

-ಹರ್ ಘರ್ ತಿರಂಗಾ ಅಭಿಯಾನದಡಿ ಬಿಜೆಪಿ ಮಂಡಲ, ಗ್ರಾಮೀಣದಿಂದ ರ್‍ಯಾಲಿ

----

ಕನ್ನಡಪ್ರಭ ವಾರ್ತೆ, ಹುಮನಾಬಾದ್

ಬಿಜೆಪಿ ಹುಮನಾಬಾದ ಮಂಡಲ ಹಾಗೂ ಗ್ರಾಮೀಣ ಮಂಡಲ ವತಿಯಿಂದ 78ನೇ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಹರ್ ಘರ್ ತಿರಂಗಾ ಕಾರ್ಯಕ್ರಮ ಪ್ರಯುಕ್ತ ಬೃಹತ್ ಬೈಕ್ ರ್‍ಯಾಲಿ ನಡೆಯಿತು.

ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಿಂದ ಹುಮನಾಬಾದ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ಹಾಗೂ ಯುವ ಮೋರ್ಚಾ ಮಂಡಲ ಅಧ್ಯಕ್ಷ ಅನೀಲ ಪಸರ್ಗಿ ಅಧ್ಯಕ್ಷತೆಯಲ್ಲಿ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಯಿತು.

ಬಳಿಕ ನೂರಾರು ಕಾರ್ಯಕರ್ತರು ತಮ್ಮ ಬೈಕ್ ಗಳ ಮೇಲೆ ತ್ರಿವರ್ಣ ಧ್ವಜ ಹಿಡಿದು ಭಾರತ್ ಮಾತಾಕೀ ಜೈ ಎಂದು ಜೈಕಾರದೊಂದಿಗೆ ಪಟ್ಟಣದ ವೀರಭ್ರೇಶ್ವರ ದೇವಸ್ಥಾನದಿಂದ ಹೊರಟ ರ್‍ಯಾಲಿ ಪಂಡಿತ ಶಿವಚಂದ್ರ ನೆಲ್ಲಗಿ ಮಾರ್ಗ, ಬಸವೇಶ್ವರ ವೃತ್ತ, ಸರದಾರ ಪಟೇಲ್ ವೃತ್ತ, ವಾಂಜರಿ ಬಡಾವಣೆ, ಕಲ್ಲೂರ ರಸ್ತೆ ಮಾರ್ಗವಾಗಿ ಡಾ.ಅಂಬೇಡ್ಕರ್ ವೃತ್ತ ಮೂಲಕ ಪಂಡಿತ ಶಿವಚಂದ್ರ ನೆಲ್ಲಗಿ ವೃತ್ತದ ವರೆಗೆ ಜರುಗಿತು. ಬಳಿಕ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದರು.

ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಯುವ ಮೂರ್ಚಾ ಜಿಲ್ಲಾಧ್ಯಕ್ಷ ಸಂತೋಷರೆಡ್ಡಿ, ವಿಶ್ವನಾಥ ಪಾಟೀಲ್ ಮಾಡಗೋಳ, ಬಸವರಾಜ ಆರ್ಯ, ಗಜೇಂದ್ರ ಕನಕಟಕರ್, ವಿನಾಯಕ ಮಂಡಾ, ಅಭಿಮನ್ಯೂ ನಿರಗುಡೆ, ನಾರಾಯಣ ರಾಂಪೂರೆ, ರಮೇಶ ಕಲ್ಲೂರ, ರವಿಕುಮಾರ ಹೊಸಳ್ಳಿ, ಮಾಧವ ಹಸೂರೆ, ಗೋಪಾಲಕೃಷ್ಣ ಮೋಳೆ, ಡಿ.ಎನ್ ಪತ್ರಿ, ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ಮುಖಂಡರು ಹಾಗೂ ನೂರಾರು ಪಕ್ಷದ ಕಾರ್ಯಕರ್ತರು ಇದ್ದರು.

-------

ಚಿತ್ರ 14ಬಿಡಿಆರ್52

ಹುಮನಾಬಾದ್‌ನಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ನೇತೃತ್ವದಲ್ಲಿ ಹರ್ ಘರ ತಿರಂಗಾ ಅಭಿಯಾನದಡಿ ಬೈಕ್ ರ್‍ಯಾಲಿ ನಲ್ಲಿ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ