ರೈತರ ಕ್ಷಮೆ ಕೇಳದಿದ್ದರೆ ಶಾಸಕ ಕೋನರೆಡ್ಡಿ ಮುಖಕ್ಕೆ ಮಸಿ

KannadaprabhaNewsNetwork | Updated : Oct 05 2024, 01:40 AM IST

ಸಾರಾಂಶ

ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಕೋನರೆಡ್ಡಿ ಕೂಡಲೇ ರೈತರ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ಮುಖಕ್ಕೆ ಕಂಡಲ್ಲಿ ಮಸಿ ಬಳಿಯುತ್ತೇವೆ. ಮತ್ತು ಅವರ ನಿವಾಸಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಮುಂದಿನ ಸೋಮವಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ವರಿಷ್ಠರಾದ ಇಂಗಲಗುಪ್ಪೆ ಕೃಷ್ಣಗೌಡ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಕೋನರೆಡ್ಡಿ ಕೂಡಲೇ ರೈತರ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ಮುಖಕ್ಕೆ ಕಂಡಲ್ಲಿ ಮಸಿ ಬಳಿಯುತ್ತೇವೆ. ಮತ್ತು ಅವರ ನಿವಾಸಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಮುಂದಿನ ಸೋಮವಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ವರಿಷ್ಠರಾದ ಇಂಗಲಗುಪ್ಪೆ ಕೃಷ್ಣಗೌಡ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅಣ್ಣೀಗೇರಿ ಪಟ್ಟಣದ ಸರ್ಕಾರಿ ಉಗ್ರಾಣದದಲ್ಲಿ ಬೀಜ ಕಳ್ಳತನ ಪ್ರಕರಣದಲ್ಲಿ ಸರಿಯಾಗಿ ತನಿಖೆಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ರೈತ ನಾಯಕರಿಗೆ ಕಾಂಗ್ರೆಸ್ ಪಕ್ಷದ ಶಾಸಕ ಎನ್.ಎಚ್.ಕೋನರೆಡ್ಡಿ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ್ದು, ಶಾಸಕ ಕೋನರೆಡ್ಡಿ ಕೂಡಲೇ ರಾಜ್ಯದ ರೈತರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಆತನ ಮುಖಕ್ಕೆ ಕಂಡಲ್ಲಿ ಮಸಿ ಬಳಿಯಲಾಗುವುದು. ಅಖಿಲ ಕರ್ನಾಟಕ ರೈತ ಸಂಘಟನೆಯ ಮಹಾ ಒಕ್ಕೂಟದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾಗಿರುವ ಮಹಾದೇವಿ ಹುಯಿಲಗೋಳ ಇವರ ನೇತೃತ್ವದಲ್ಲಿ ಅಣ್ಣಿಗೇರಿಯಲ್ಲಿ ಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಆಗಮಿಸಿದ್ದ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎಚ್. ಕೋನರೆಡ್ಡಿ ಮನವಿ ಪತ್ರ ಪಡೆಯುವ ವೇಳೆ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ವರ್ತನೆ ಮಾಡಿ, ರೈತ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದರು.

ಸ್ವತಃ ಹಸಿರು ಟವಲ್ ಧರಿಸುವ ಶಾಸಕ ಕೋನರೆಡ್ಡಿ ರೈತರನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ನಿಂದಿಸಿರುವುದನ್ನು ನೋಡಿದರೆ ಆತನ ಮನಸ್ಸಿನಲ್ಲಿ ರೈತರ ಬಗ್ಗೆ ಎಂತಹ ಕ್ರೋಧ ಇರುತ್ತದೆ ಎಂಬುದನ್ನು ತಿಳಿಯಬಹುದು. ಹಸಿರು ಟವಲ್ ಅಭಿವೃದ್ಧಿಯ ಸಂಕೇತ, ರೈತರ ಗುರುತು. ಶಾಸಕ ಕೋನರೆಡ್ಡಿಗೆ ಹಸಿರು ಟವಲ್ ಧರಿಸುವ ನೈತಿಕತೆ, ಅರ್ಹತೆ ಇಲ್ಲ. ಕೂಡಲೇ ಆತ ತಮ್ಮ ಹೆಗಲಿನ ಮೇಲಿರುವ ಹಸಿರು ಟವಲ್ ತೆಗೆದು ಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ. ಶೀಘ್ರದಲ್ಲೆ ಕೋನರೆಡ್ಡಿ ಮನೆಗೆ ಮುತ್ತಿಗೆ ಹಾಕಲಾಗುವುದು. ರೈತರನ್ನು ಅತ್ಯಂತ ಕೀಳು ಭಾಷೆಯಲ್ಲಿ ನಿಂದಿಸಿರುವ ಕೋನರೆಡ್ಡಿ ಒಬ್ಬ ಶಾಸಕ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಕೂಡಲೇ ಈತನ ಶಾಸಕತ್ವವನ್ನು ವಿಧಾನ ಸಭಾ ಸ್ಪೀಕರ್ ಅವರು ರದ್ದುಗೊಳಿಸಬೇಕು ಎಂದು ರೈತಸಂಘ ಒತ್ತಾಯಿಸುತ್ತದೆ. ಶಾಸಕ ಕೋನರೆಡ್ಡಿ ರೈತ ಹೋರಾಟಗಾರನಿಗೆ ಸೂ..ಮಕ್ಕಳು ಎಂದು ನಿಂದಿಸಿರುವ ವೀಡಿಯೋ ಇದೀಗ ರಾಜ್ಯದೆಲ್ಲೆಡೆ ವೈರಲ್ ಆಗಿದ್ದು, ಈತನ ಮುಖಕಂಡಲ್ಲಿ ಮಸಿ ಬಳಿಯುತ್ತೇವೆ. ಅದಕ್ಕೂ ತಕ್ಷಣ ರೈತರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ರೈತ ಸಂಘದ ಹಸಿರು ಸೇನೆಯ ವತಿಯಿಂದ ಅಣ್ಣಿಗೇರಿಯಲ್ಲಿ ರಾಜ್ಯಾಧ್ಯಕ್ಷರಾಗಿರುವ ಮಹಾದೇವಿ ಹುಯಿಲಗೋಳ ಇವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಆಗಮಿಸಿದ್ದ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಹೆಚ್. ಕೋನರೆಡ್ಡಿ ಮನವಿ ಪತ್ರ ಸ್ವೀಕರಿಸುವ ವೇಳೆ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಇದು ತಪ್ಪು ಆತ ಶಾಸಕ ಅಷ್ಟೇ. ಸರ್ವಾಧಿಕಾರಿ ಅಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಬಣದ ಜಿಲ್ಲಾಧ್ಯಕ್ಷ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೇಶ್ ಪಟೇಲ್, ಸಂಚಾಲಕ ನಾಗರಾಜು, ಚಿಕ್ಕಮಗಳೂರು ಮಹಿಳಾ ಅಧ್ಯಕ್ಷೆ ಜಯಶೀಲಾ ಇತರರು ಉಪಸ್ಥಿತರಿದ್ದರು.

Share this article