ಸಂತೆ ಹೊಂಡಕ್ಕೆ ಗಪ್ಪಿ ಮೀನುಗಳ ಬಿಟ್ಟ ಶಾಸಕ ಪಪ್ಪಿ

KannadaprabhaNewsNetwork |  
Published : Jul 09, 2024, 12:48 AM IST
ಚಿತ್ರದುರ್ಗ ಮೂರನೇ ಪುಟಕ್ಕೆ | Kannada Prabha

ಸಾರಾಂಶ

MLA veerindra keep fishes in Santhehonda pond

-ಡೆಂಘೀ ಜ್ವರ ನಿಯಂತ್ರಣಕ್ಕೆ ಪೌರಾಯುಕ್ತೆ ರೇಣುಕಾ ಅವರಿಗೆ ಸೂಚನೆ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಜಿಲ್ಲೆಯಾದ್ಯಂತ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಸೋಮವಾರ ಶಾಸಕ ವೀರೇಂದ್ರ ಪಪ್ಪಿ ಐತಿಹಾಸಿಕ ಸಂತೆ ಹೊಂಡಕ್ಕೆ ಗಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳನ್ನು ಬಿಟ್ಟರು.

ಈ ವೇಳೆ ಮಾತನಾಡಿದ ಅವರು ಚಿತ್ರದುರ್ಗ ನಗರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಡೆಂಘೀ ಜ್ವರ ಮತ್ತಷ್ಟು ಬಾಧಿಸದಂತೆ ಎಚ್ಚರ ವಹಿಸಬಪೇಕು. ನಗರದ 35 ವಾರ್ಡ್‍ಗಳಲ್ಲಿಯೂ ಸಂಚರಿಸಿ ಸ್ವಚ್ಚತೆಯನ್ನು ಕಾಪಾಡಬೇಕು. ಚರಂಡಿಗಳನ್ನು ಸ್ವಚ್ಚಗೊಳಿಸಿ ಫಾಗಿಂಗ್ ಯಂತ್ರಗಳ ಮೂಲಕ ಸೊಳ್ಳೆಗಳನ್ನು ನಾಶಪಡಿಸಬೇಕು. ಎಲ್ಲೆಲ್ಲಿ ಪುಷ್ಕರಣಿಗಳಿವೆಯೋ ಅಲ್ಲೆಲ್ಲಾ ಮೀನು ಮರಿಗಳನ್ನು ಬಿಡುವಂತೆ ತಿಳಿಸಿದರು.

ನಗರಸಭೆ ಪೌರಾಯುಕ್ತೆ ರೇಣುಕ ಮಾತನಾಡಿ, ಗಪ್ಪಿ ಹಾಗೂ ಗಾಂಬೂಸಿಯ ಮೀನುಗಳನ್ನು ಹೊಂಡದಲ್ಲಿ ಬಿಡುವುದರಿಂದ ಅವುಗಳು ಲಾರ್ವಗಳನ್ನು ತಿಂದು ಸೊಳ್ಳೆಗಳ ಸಂತತಿ ಕಡಿಮೆ ಮಾಡುತ್ತವೆ. ಮಳೆಗಾಲವಾದ್ದರಿಂದ ಚಿತ್ರದುರ್ಗ ನಗರಗದ ನಾಗರಿಕರು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ನಗರಸಭೆ ಜೊತೆ ಕೈಜೋಡಿಸಬೇಕೆಂದು ವಿನಂತಿಸಿದರು.

ಶುದ್ಧ ತಿಳಿ ನೀರಿನಲ್ಲಿ ಈಜಿಪ್ಟೆ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಹಾಗಾಗಿ, ಮನೆ ಸುತ್ತ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಹಳೆ ಟೈರ್, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲಿಸಬಾರದು. ಮನೆಯ ತೊಟ್ಟಿಗಳನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಚಗೊಳಿಸಿ. ಹಗಲು ವೇಳೆ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸುವಂತೆ ಮನವಿ ಮಾಡಿದರು.

ಡೆಂಘೀ ಮುಂಜಾಗ್ರತೆ ಕ್ರಮ ಅನುಸರಿಸುವುದರ ಬಗ್ಗೆ ನಗರಸಭೆ ಕಸ ಸಾಗಿಸುವ ವಾಹನಗಳ ಮೂಲಕ ಜಾಗೃತಿ ಮೂಡಸಲಾಗುತ್ತಿದೆ. ಆರೋಗ್ಯ ಇಲಾಖೆಯವರು ಈಗಾಗಲೇ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಮಾಡಿದ್ದಾರೆ. ಅದರ ಅನುಸಾರ ನಾಗರಿಕರಿಗೆ ಡೆಂಘೀ ನಿಯಂತ್ರಕ್ಕೆ ಕೈಜೋಡಿಸಲು ವಿನಂತಿಸಿದ್ದೇವೆ ಎಂದು ರೇಣುಕಾ ಹೇಳಿದರು.

ಪರಿಸರ ಇಂಜಿನಿಯರ್ ಜಾಫರ್, ನಗರಸಭೆ ಹೆಲ್ತ್ ಇನ್ಸ್‍ಪೆಕ್ಟರ್ ಗಳಾದ ಸರಳ, ಭಾರತಿ, ನಾಗರಾಜ್, ನಾಮ ನಿರ್ದೇಶನ ಸದಸ್ಯ ಹೆಚ್.ಶಬ್ಬೀರ್ ಭಾಷಾ ಈ ಸಂದರ್ಭದಲ್ಲಿ ಇದ್ದರು.

------------------

ಫೋಟೋ:8 ಸಿಟಿಡಿ8

ಡೆಂಘೀ ನಿಯಂತ್ರಣದ ಸಂಬಂಧ ಸೋಮವಾರ ಶಾಸಕ ವೀರೇಂದ್ರ ಪಪ್ಪಿ ಐತಿಹಾಸಿಕ ಚಿತ್ರದುರ್ಗದ ಸಂತೆ ಹೊಂಡಕ್ಕೆ ಗಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳ ಬಿಟ್ಟರು.

-------

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ