ಕನ್ನಡಪ್ರಭ ವಾರ್ತೆ ಕುಷ್ಟಗಿಗ್ರಾಮೀಣ ಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಬಡವರಿಗೆ ಆರ್ಥಿಕ ಸ್ವಾವಲಂಬನೆ ನೀಡುವ ಜೊತೆಗೆ ಪದವೀಧರರ ಶೈಕ್ಷಣಿಕ ಅಭ್ಯಾಸಕ್ಕೂ ಅನುಕೂಲವಾಗಿದೆ.ತಾಲೂಕಿನ ತಳುವಗೇರಿ ಗ್ರಾಪಂ ವ್ಯಾಪ್ತಿಯ ನಿಡಶೇಸಿ ಗ್ರಾಮದ ಪದವೀಧರೆಯಾದ ಚೈತ್ರಾ ಬಸಪ್ಪ ಕಂದಕೂರ ಎಂಬ ಯುವತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಡೆಯುವ ಕಾಮಗಾರಿಯಲ್ಲಿ ಕೆಲಸ ಮಾಡುವ ಮೂಲಕ ಕುಟುಂಬದ ಆರ್ಥಿಕ ಸ್ವಾಲಂಬನೆ ಹಾಗೂ ತನ್ನ ಪದವಿಯ ವ್ಯಾಸಂಗಕ್ಕೂ ಅನುಕೂಲವಾಗಿದೆ.ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡಿ ಮನೆಯಲ್ಲಿ ಕುಳಿತುಕೊಳ್ಳುವ ನಿರುದ್ಯೋಗಿ ವಿದ್ಯಾವಂತರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಬಹಳಷ್ಟು ಅನುಕೂಲವಾಗಿದೆ ಎನ್ನಬಹುದು.ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಪಂ ವ್ಯಾಪ್ತಿಯ ನೀಡಶೇಸಿ ಗ್ರಾಮದ ಜೈತ್ರಾ ಕಂದಕೂರ ಎಂಬ ಯುವತಿಯು ನರೇಗಾ ಯೋಜನೆಯಡಿ ನಡೆಯುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿ ಬಂದ ಕೂಲಿ ಹಣದಲ್ಲಿ ತನ್ನ ಪದವಿ ವಿದ್ಯಾಭ್ಯಾಸಕ್ಕೆ ಪಠ್ಯ-ಪುಸ್ತಕ ಹಾಗೂ ಕಾಲೇಜು ಫೀ ಕಟ್ಟುತ್ತಿದ್ದಾರೆ.ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ತಾಲೂಕಿನ 36 ಗ್ರಾಪಂ ವ್ಯಾಪ್ತಿಯ ಪದವೀಧರರ ಭಾಗವಹಿಸುವಿಕೆ ಹೆಚ್ಚಳವಾಗುತ್ತಿದೆ. ನರೇಗಾ ಕೂಲಿಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅಲ್ಲದೇ ಸ್ಥಳೀಯವಾಗಿ ನರೇಗಾದಲ್ಲಿ ಉದ್ಯೋಗ ನೀಡುತ್ತಿವುದರಿಂದ ಪದವೀಧರರು ಭಾಗವಹಿಸಿ ಕೂಲಿ ಪಡೆಯುತ್ತಿರುವುದು ಯೋಜನೆಯ ಸಾರ್ಥಕತೆಯಾಗಿದೆ ಎನ್ನುತ್ತಾರೆ ತಾಪಂ ಅಧಿಕಾರಿಗಳು.ಚೈತ್ರಾ ಕಂದಕೂರ ಎಂಬ ಯುವತಿಯು ತನ್ನ ವಿದ್ಯಾಭ್ಯಾಸಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣ ಬಳಸಿಕೊಂಡಿರುವುದು ಬೇರೆ ವಿದ್ಯಾರ್ಥಿಗಳಿಗೆ ಮಾದರಿ ಆಗಿದ್ದಾಳೆ. ನಿಂಗಪ್ಪ ಮಸಳಿ, ತಾಪಂ ಇಒ ಕುಷ್ಟಗಿಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವುದರಿಂದ ಬರುವ ಕೂಲಿ ಹಣವು ನನ್ನ ವಿದ್ಯಾಭ್ಯಾಸಕ್ಕೆ ತುಂಬ ಸಹಕಾರಿಯಾಗಿದೆ. ನನ್ನ ಓದಿಗೆ ನರೇಗಾ ಯೋಜನೆ ದಾರಿದೀಪವಾಗಿದೆ.-ಚೈತ್ರಾ ಕಂದಕೂರು, ಪದವೀಧರೆ ಕೂಲಿಕಾರ್ಮಿಕರು.