ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿ ವಿಳಂಬ: ಸಿದ್ದರಾಮಯ್ಯ ಸ್ವಾಮಿ

KannadaprabhaNewsNetwork |  
Published : Jul 01, 2024, 01:45 AM IST
27 ಜಿಎನ್‌ ಜಿ2 | Kannada Prabha

ಸಾರಾಂಶ

ತಾಲೂಕಿನಲ್ಲಿ ನೆಡಯುತ್ತಿರುವ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿ ವಿಳಂಬವಾಗುತ್ತಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರೋಪ

ಕನ್ನಡಪ್ರಭ ವಾರ್ತೆ ಗಂಗಾವತಿ

ತಾಲೂಕಿನಲ್ಲಿ ನೆಡಯುತ್ತಿರುವ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ ಅರೋಪಿಸಿದರು.ಕಾಲುವೆ ಆಧುನೀಕರಣ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದೊಂದಿಗೆ ಎಸ್ ಬಿಎಚ್ (ಎಡಿಬಿ) ಅನುದಾನದಲ್ಲಿ 2019ರಲ್ಲಿ ವಿಜಯನಗರ ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು, ರೈತರಿಗೆ ಸಹಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಅನುದಾನ ಘೋಷಣೆ ಮಾಡಿತ್ತು. ಈ ಕಾಮಗಾರಿಯನ್ನು ಟೆಂಡರ್ ಮೂಲಕ ಆರ್.ಎನ್. ಶೆಟ್ಟಿ ಅವರಿಗೆ ನೀಡಲಾಗಿದೆ. ಸಾಣಪುರದಿಂದ ಸಂಗಾಪುರದವರೆಗೆ ಒಟ್ಟು ಕಾಮಗಾರಿ 19.5 ಕಿಮೀವರೆಗೆ ಇದ್ದು, ಸುಮಾರು 3800 ಎಕರೆ ರೈತರು ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ. ಈ ಕಾಮಗಾರಿ 2019ರಿಂದ ಪ್ರಾರಂಭ ಗೊಳ್ಳಬೇಕಾಗಿತ್ತು, ಆದರೆ ಅನಿರೀಕ್ಷಿತವಾಗಿ ಕರೋನ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದ್ದರಿಂದ, ಎರಡು ವರ್ಷಗಳ ಕಾಲ ಕಾಲುವೆಯ ಕಾಮಗಾರಿ ನೆನೆಗುದಿಗೆ ಬಿದ್ದು, ಕಳೆದ ಸಾಲಿನಿಂದ ಕೆಲಸ ಪ್ರಾರಂಭವಾಗಿದೆ. 2024ರ ಮಾರ್ಚ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗುತ್ತಿತ್ತು. ಆದರೆ ಸೆ. 31ರವರೆಗೆ ಅವಧಿ ಮುಂದುವರಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಹಳೆ ಮಾದರಿಯ ಕಾಲುವೆಗಳು ಆಧುನೀಕರಣ ಕಾಮಗಾರಿ ಇನ್ನು ಮುಗಿದಿಲ್ಲ, ತಿಂಗಳಲ್ಲಿ ಕೇವಲ 15ರಿಂದ 20 ದಿನಗಳ ಮಾತ್ರ ಕೆಲಸ ಮಾಡಿ ಉಳಿದ ದಿನಗಳಲ್ಲಿ ನೆಪ ಹೇಳುತ್ತಾ ಕಾಮಗಾರಿ ಕೆಲಸವನ್ನು ಮಾಡದೆ ಇರುವುದರಿಂದ, ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ ಎಂದು ದೂರಿದರು.

ಈ ಸಂದರ್ಭ ಸುದರ್ಶನ ವರ್ಮ ಆನೆಗುಂದಿ, ಮಲ್ಲಿಕಾರ್ಜುನ ಈಡಿಗರ, ಎಚ್.ಎಂ. ವಿರೂಪಾಕ್ಷಯ್ಯ ಸ್ವಾಮಿ, ಸುಬ್ಬರಾವ್, ತಿಪ್ಪಣ್ಣ, ಉಲ್ಲೇಶ್ ನಾಯಕ, ರಾಮಬಾಬು ಸಂಗಾಪುರ, ರಜನಿಕಾಂತ, ಚಂದ್ರಪ್ಪ, ಕಮರ್ ಪಾಶ, ರಾಘು, ಯಮನೂರ, ಹೇಮಸುಂದರ ರೆಡ್ಡಿ, ರವಿ ನಾಯ್ಕ್, ಕೃಷ್ಣಪ್ಪ, ಮಂಜುನಾಥ, ಶರಣಪ್ಪ, ಮೆಹಬೂಬ್ ಹುಸೇನ್ ಅನೇಕ ರೈತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ