ರಾಣಿಬೆನ್ನೂರು: ದೇಶಕ್ಕೆ ಪ್ರಧಾನಿ ಮೋದಿ ಅವಶ್ಯಕತೆಯಿದ್ದು, ಮತ್ತೊಮ್ಮೆ ಅವರನ್ನು ಗೆಲ್ಲಿಸುವ ಮೂಲಕ ದೇಶವನ್ನು ಉಳಿಸೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ನಗರದ ಸ್ಟೇಷನ್ ರಸ್ತೆ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಕಳೆದ ಹತ್ತು ವರ್ಷಗಳಿಂದ ದೇಶದ ಅಭ್ಯುದಯಕ್ಕಾಗಿ ಉತ್ತಮ ಆಡಳಿತ ನೀಡುವ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮೋದಿ ಈ ದೇಶದ ಶಕ್ತಿ, ಅದರಂತೆ ಬಿಜೆಪಿ ಕಟ್ಟಿದ್ದ ಎಲ್ಲ ಮಹನೀಯರ ಶ್ರಮ ನಮಗೆ ಸದಾ ಪ್ರೇರಕವಾಗಿದೆ ಎಂದು ಹೇಳಿದರು.ಯಾರೇ ಪಕ್ಷದ ಅಭ್ಯರ್ಥಿಯಾದರೂ ಮೋದಿ ಅವರೇ ನಮ್ಮ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಭಾವಿಸಿಕೊಂಡು ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ರಾಷ್ಟ್ರೀಯ ನಾಯಕರು ನೀಡಿದ ಕೆಲಸ ನಿರ್ವಹಣೆಯಲ್ಲಿ ಹಾವೇರಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು, ಅದನ್ನು ಪ್ರಥಮ ಸ್ಥಾನಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡೋಣ. ಕಾರ್ಯಕರ್ತರ ಬಲವೇ ಪಕ್ಷದ ಶಕ್ತಿಯಾಗಿದ್ದು, ಇಡಿ ಜಿಲ್ಲೆಯಲ್ಲಿ ತಾಲೂಕಿನದು ದೊಡ್ಡ ಸಂಘಟನೆ. ನಗರ ಮತ್ತು ಗ್ರಾಮೀಣ ಮಂಡಲದ ಎಲ್ಲ ಪದಾಧಿಕಾರಿಗಳು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮವಹಿಸಬೇಕು ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಜಿಲ್ಲಾ ಪ್ರಭಾರಿ ಕಲ್ಲೇಶ, ನಗರ ಘಟಕ ಅಧ್ಯಕ್ಷ ರಮೇಶ ಗುತ್ತಲ, ತಾಲೂಕಾಧ್ಯಕ್ಷ ಪರಮೇಶ ಗೂಳಣ್ಣನವರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಭಾರತಿ ಜಂಬಗಿ, ಚೋಳಪ್ಪ ಕಸವಾಳ, ಭಾರತಿ ಅಳವಂಡಿ, ಎ.ಬಿ. ಪಾಟೀಲ, ದೀಪಕ ಹರಪನಹಳ್ಳಿ, ಮಂಜುನಾಥ ಓಲೇಕಾರ, ಬಸವರಾಜ ಚಳಗೇರಿ, ಎಸ್.ಎಸ್. ರಾಮಲಿಂಗಣ್ಣನವರ, ಪ್ರಕಾಶ ಪೂಜಾರ, ವಿಜಯಕುಮಾರ ನಲವಾಗಲ, ಸುಭಾಸ ಶಿರಗೇರಿ ಮತ್ತಿತರರು ಇದ್ದರು.