ಈ ದೇಶ ಕಂಡ ಹಮ್ಮೆಯ ಪ್ರಧಾನಿ ಮೋದಿ: ಡಿ.ಎಸ್.ಸುರೇಶ್

KannadaprabhaNewsNetwork |  
Published : Sep 18, 2025, 02:00 AM IST
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನ ಸೇವಾ ಪಾಕ್ಷಿಕ ಕಾರ್ಯಕ್ರಮ | Kannada Prabha

ಸಾರಾಂಶ

ನರೇಂದ್ರ ಮೋದಿ ಅವರು ದೇಶ ಕಂಡಂತಹ ಹೆಮ್ಮೆಯ ಪ್ರಧಾನಿಗಳಾಗಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ನರೇಂದ್ರ ಮೋದಿ ಅವರು ದೇಶ ಕಂಡಂತಹ ಹೆಮ್ಮೆಯ ಪ್ರಧಾನಿಗಳಾಗಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್‌ ಹೇಳಿದರು.

ಭಾರತೀಯ ಜನತಾ ಪಾರ್ಟಿ ತರೀಕೆರೆ ತಾಲೂಕು ಮಂಡಲ ವತಿಯಿಂದ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಾಡಾಗಿದ್ದ ರೋಗಿಗಳಿಗೆ ಬ್ರೆಡ್, ಹಾಲು, ಹಣ್ಣು ವಿತರಣೆ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುಜರಾತ್‌ನಲ್ಲಿ 13 ವರ್ಷ ಮುಖ್ಯಮಂತ್ರಿಗಳಾಗಿ, 11 ವರ್ಷಗಳಿಂದ ದೇಶದ ಪ್ರಧಾನಿಗಳಾಗಿ ಒಂದೂ ಕಪ್ಪುಚುಕ್ಕೆ ಇಲ್ಲದೆ. ರಸ್ತೆ ಅಭಿವೃದ್ದಿ, ರೈತರ ಅಭಿವೃದ್ಧ ಇತ್ಯಾದಿಗಳನ್ನು ನಿರ್ವಹಿಸುತ್ತಿದ್ದು, ದೇಶಾದ್ಯಂತ ಅಭಿವೃದ್ದಿಯ ಕ್ರಾಂತಿ ಮಾಡುತ್ತಿದ್ದಾರೆ, ಉಗ್ಹರ ವಿರುದ್ದ, ಭ್ರಷ್ಠಾಚಾರದ ವಿರುದ್ದ, ಪೆಹಲ್ಗಾಂ ಪ್ರಕರಣದಲ್ಲಿ ದಿಟ್ಟ ಉತ್ತರ ನೀಡಿದ್ದಾರೆ, ಸೆ.17ರಿಂದ ಅ.2 ರ ವರೆಗೆ ಪ್ರತಿದಿನ ಸೇವಾ ಪಾಕ್ಷಿಕ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಇತ್ಯಾದಿ ಹಲವು ಕಾರ್ಯಕ್ರಮಗಳನ್ನು ಕ್ಷೇತ್ರದ ಎಲ್ಲಾ ಬೂತ್.ಗಳಲ್ಲೂ ಆಯೋಜಿಸಲಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯವನ್ನು ಈಡೇರಿಸಬೇಕು, ಅವರು ಇನ್ನೂ ಹೆಚ್ಚು ಅಭಿವೃದ್ದಿ ಕಾರ್ಯ ನಿರ್ವಹಿಸಲು ಭಗವಂತ ಆಶೀರ್ವದಿಸಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ, ನವಯುಗದ ವಿವೇಕಾನಂದರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮ್ಮ ರಾಷ್ಟ್ರವನ್ನು ಬಲಿಷ್ಠ ರಾಷ್ಟ್ವನ್ನಾಗಿ ಹೊರಹೊಮ್ಮಿಸಿದ ರಾಜಕೀಯ ಸಂತ, ಸಂಘಟನಾ ಚತುರರು, ವಿಶ್ವವೇ ಭಾರತ ದೇಶವನ್ನು ತಿರುಗಿ ನೋಡುವ ಹಾಗೆ ಅಭಿವೃದ್ಧಿ ಪಥದಲ್ಲಿ ಕೊಂಡುಯ್ಯುತ್ತಿದ್ದಾರೆ, ಅನೇಕ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ, ದೇಶಾದ್ಯಂತ ಹೆದ್ದಾರಿ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿ, ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಗವಂತನು ಆರೋಗ್ಯ ಆಯಸ್ಸು ನೀಡಿ ಭಾರತೀಯರ ಕನಸುಗಳನ್ನು ನನಸು ಮಾಡುವ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.

ಭಾರತೀಯ ಜನತಾ ಪಾರ್ಟಿ ತರೀಕೆರೆ ಮಂಡಲ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಬಿಜೆಪಿ ಮುಖಂಡರಾದ ಟಿ.ಜಿ.ಸದಾನಂದ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶ್ವರಿ ರಾಜಶೇಖರ್, ನಗರಾಧ್ಯಕ್ಷರು ರೇಣುಕಪ್ಪ, ಸೊಸೈಟಿ ಮೋಹನ್, ಬಸವರಾಜ್, ರಾಜಶೇಖರ್, ಟಿ.ಕೆ.ಶಿವಮೂರ್ತಿ, ಯುವ ಮೋರ್ಚಾ, ವಿವಿಧ ಮೋರ್ಚದ ಪದಾದಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ