ಮೊಗಳ್ಳಿ ಗಣೇಶ್‌ ಜಾನಪದ ಸಾಹಿತ್ಯದ ನಾಡಿಮಿಡಿತ

KannadaprabhaNewsNetwork |  
Published : Jul 07, 2024, 01:22 AM IST
29ಎಚ್‌ಪಿಟಿ6- ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಪ್ರೊ.ಮೊಗಳ್ಳಿ ಗಣೇಶ್ ಅವರನ್ನುಬೀಳ್ಕೊಟ್ಟು ಸನ್ಮಾನಿಸಿದರು. | Kannada Prabha

ಸಾರಾಂಶ

ಜನಪದ ಸಾಹಿತ್ಯದ ಮೂಲಕ ಮಂಟೇಸ್ವಾಮಿ ಹಾಗೂ ಮಲೆಮಹದೇಶ್ವರ ಸ್ವಾಮಿಯ ಕುರಿತು ಅನೇಕ ಲೇಖನಗಳಿಂದ ನಾಡಿಗೆ ಪರಿಚಯವಾದವರು.

ಹೊಸಪೇಟೆ: ಕನ್ನಡ ಕಥಾ ಪರಂಪರೆಗೆ ಹೊಸತನ ನೀಡಿ, ಜಾನಪದ ಸಾಹಿತ್ಯ, ಕೃತಿ ಬರವಣಿಗೆ, ಸಂಶೋಧನೆ, ವಿಮರ್ಶೆ, ಮುಂತಾದ ಬರವಣಿಗೆಯ ಮೂಲಕ ಕನ್ನಡ ವಿಶ್ವವಿದ್ಯಾಲಯಕ್ಕೆ ಅಪಾರ ಹೆಸರು ತಂದುಕೊಟ್ಟ ಕೀರ್ತಿ ಡಾ. ಮೊಗಳ್ಳಿ ಗಣೇಶ್ ಅವರಿಗೆ ಸಲ್ಲುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಮೊಗಳ್ಳಿ ಗಣೇಶ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜನಪದ ಸಾಹಿತ್ಯದ ಮೂಲಕ ಮಂಟೇಸ್ವಾಮಿ ಹಾಗೂ ಮಲೆಮಹದೇಶ್ವರ ಸ್ವಾಮಿಯ ಕುರಿತು ಅನೇಕ ಲೇಖನಗಳಿಂದ ನಾಡಿಗೆ ಪರಿಚಯವಾದವರು. ಇವರ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ಪ್ರಮುಖ ಭಾಷೆಗಳಿಗೆ ಭಾಷಾಂತರವಾಗಿರುವುದು ಕನ್ನಡ ವಿಶ್ವವಿದ್ಯಾಲಯದ ಹೆಮ್ಮೆಯಾಗಿದೆ. ಇವರು ಸಾಹಿತ್ಯ ಲೋಕದಲ್ಲಿ ಕಟು ವಿಮರ್ಶೆಗೆ ಹೆಸರಾದವರು. ಇಂದು ಇವರು ವೃತ್ತಿಯಿಂದ ನಿವೃತ್ತರಾಗುತ್ತಿರುವುದು ನಮಗೆಲ್ಲ ಬೇಸರದ ಸಂಗತಿಯಾಗಿದೆ. ಇವರ ಮುಂದಿನ ನಿವೃತ್ತಿ ಜೀವನ ಆರೋಗ್ಯವಾಗಿರಲಿ ಎಂದರು.

ಸನ್ಮಾನ ಸ್ವೀಕರಿಸಿ ಮೊಗಳ್ಳಿ ಗಣೇಶ್ ಮಾತನಾಡಿ, ಡಾ. ಚಂದ್ರಶೇಖರ ಕಂಬಾರ ಅವರು ನನ್ನನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಬರಮಾಡಿಕೊಂಡವರು. ಅವರಿಗೆ ನಾನು ಚಿರಋಣಿಯಾಗಿರುವೆ. ಕಂಬಾರರು ನನಗೆ ವರ್ಷಕ್ಕೆ ಎರಡು ಕೃತಿಗಳನ್ನು ರಚಿಸಬೇಕು. ಆ ಕಾರ್ಯವನ್ನು ಸ್ವಲ್ಪ ಮಟ್ಟಿಗೆ ಮಾಡುವ ಪ್ರಯತ್ನವನ್ನು ಮಾಡಿರುವೆ. ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಸಂಶೋಧನೆ ಲೋಕದಲ್ಲಿ ಮಾಡಿದ ಸಾಧನೆ ವಿಶ್ವದ ಪ್ರಮುಖ ಭಾಷೆಗಳಿಗೆ ಭಾಷಾಂತರಿಸಿದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶ್ವದ ಯಾವುದೇ ವಿಶ್ವವಿದ್ಯಾಲಯ ಸರಿಸಾಟಿಯಿಲ್ಲ. ಕನ್ನಡ ವಿಶ್ವವಿದ್ಯಾಲಯ ನನಗೆ ತುಂಬಾ ಕೊಟ್ಟಿದೆ. ಇಲ್ಲಿನ ವಿದ್ಯಾರ್ಥಿಗಳು ನನ್ನ ಕುಟುಂಬದ ಸದಸ್ಯರೇ ಎಂದು ಭಾವಿಸಿರುವೆ. ಹಾಗೆಯೇ ಸಹೋದ್ಯೋಗಿಗಳು ಸಿಬ್ಬಂ,ದಿ ಪ್ರೀತಿಯಿಂದ ನಡೆದುಕೊಂಡಿದ್ದಾರೆ ಎಂದರು.ಉಪಕುಲಸಚಿವ ಡಾ. ಎ. ವೆಂಕಟೇಶ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಆಡಳಿತ ಸಿಬ್ಬಂದಿ ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ