ಕನ್ನಡಪ್ರಭ ವಾರ್ತೆ ಚಾಮರಾಜನಗರ
₹೭ ಕೋಟಿ ಕೌಶಲ್ಯ ತರಬೇತಿ ಘಟಕ ಜಿಲ್ಲಾ ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಜಿಲ್ಲೆಯಲ್ಲಿ ಕರಿಕಲ್ಲು ಉದ್ದಿಮೆ ಹೆಚ್ಚಿದ್ದು ನಮ್ಮ ಕೈಗಾರಿಕಾ ವಲಯದಲ್ಲಿ ನಮ್ಮ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಾಗಿ ₹೭ಕೋಟಿ ವೆಚ್ಚದಲ್ಲಿ ಒಂದು ಕೌಶಲ್ಯ ತರಬೇತಿ ಘಟಕ ತೆರೆಯಲ್ಲಿ ಚಿಂತನೆ ನಡೆಸಿದ್ದು ಇದಕ್ಕೆ ಕಾಸಿಯಾ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಸಹಕಾರ ಅಗತ್ಯವಾಗಿದೆ. ಈ ಮೂಲಕ ನಮ್ಮ ಜಿಲ್ಲೆಯ ಯವಕರಿಗೆ ಉದ್ಯೋಗ ನೀಡುವ ಚಿಂತನೆ ಮಾಡಲಾಗಿದೆ ಎಂದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ಮಾತನಾಡಿ, ಚಾಮರಾಜನಗರ ಕೈಗಾರಿಕಾ ವಲಯ ರಫ್ತು ವಲಯವನ್ನಾಗಿ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ತಂತ್ರಜ್ಞಾನ ಅಳವಡಿಕೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಜನರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿಯೂ ವಾರ್ಷಿಕ ೫-೬ ಸಾವಿರ ಯುವಕ, ಯುವತಿಯರು ಪದವಿ, ೫ ಎಂಜಿನಿಯರ್, ಐಟಿಐ ಸೇರಿದಂತೆ ಇತರೆ ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಇವರಿಗೆಲ್ಲ ಉದ್ಯೋಗ ಅವಕಾಶ ಕೊಡಬೇಕು. ಆದರೆ, ಕೃಷಿ ಕ್ಷೇತ್ರದಲ್ಲಿ ಉದ್ಯೋಗ ನೀಡಲು ಆಗುತ್ತಿಲ್ಲ ಎಂದರು.
ಪ್ರತಿಯೊಬ್ಬರು ಉದ್ಯಮಿಗಳಾಗಿ ಉದ್ಯೋಗ ನೀಡುವಂತಾಗಬೇಕು. ಸಣ್ಣ ಕೈಗಾರಿಕೆಗಳು ಕೈಗಾರಿಕಾ ಕ್ಷೇತ್ರದ ಬೆನ್ನೆಲುಬು. ಆರ್‌ಎಎಂಪಿ ಯೋಜನೆ ಮೂಲಕ ಉದ್ಯಮಿದಾರು ಬಲವರ್ಧನೆಗೊಳಿಸಬೇಕು ಎಂದರು.ಮಾರುಕಟ್ಡೆಯಲ್ಲಿ ಬದಲಾವಣೆ, ಹವಮಾನ ಬದಲಾವಣೆಗಳಿಂದ ತಂತ್ರಜ್ಞಾನದಲ್ಲೂ ಬದಲಾವಣೆಗಳಿಗಾಗಿ ಪ್ರಸ್ತುತ ತಾಲೂಕು ಕೇಂದ್ರಗಳಲ್ಲಿಯೂ ಮಾಲ್‌ಗಳು ಪ್ರಾರಂಭವಾಗುತ್ತಿವೆ, ಕೃಷಿ ಕೇತ್ರ, ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಾಗುತ್ತಿದ್ದರೂ ರಫ್ತಿನ ಅರಿವಿನ ಕೊರತೆಯಿದೆ, ಆದ್ದರಿಂದ ರಫ್ತಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷ ಎ.ಜಯಸಿಂಹ, ಉಪಾಧ್ಯಕ್ಷ ಗಣೇಶ್‌ರಾವ್, ಜಂಟಿ ಕಾರ್ಯದರ್ಶಿ ಸತೀಶ್, ಖಜಾಂಚಿ ಮಂಜುನಾಥ್, ಜಿಲ್ಲಾಭಿವೃದ್ಧಿ ಸಮಿತಿಯ ಉಪಸಮಿತಿ ಅಧ್ಯಕ್ಷ ಮಂಜುನಾಥ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಟಿಪಿಸಿಯ ವೀಣಾ ವೆಂಕಟೇಶ್ ರಫ್ತು ಕುರಿತು ಅರಿವು ಮೂಡಿಸಿದರು.