ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿಗಳಿಗೆ ಮುದ್ದುರಾಮ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 03, 2025, 01:00 AM IST
10 | Kannada Prabha

ಸಾರಾಂಶ

ಎಲ್ಲರಿಗೂ ಒಳಿತು ಬಯಸುವುದೇ ಕಾವ್ಯದ ಉದ್ದೇಶ. ಅದನ್ನು ಗ್ರಹಿಸುವುದು ಆಯಾ ಕಾಲಘಟ್ಟವನ್ನು ಅವಂಬಿಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಮುದ್ದುರಾಮ ಪ್ರತಿಷ್ಠಾನದ ಪ್ರತಿಷ್ಠಿತ ಮುದ್ದುರಾಮ ಪ್ರಶಸ್ತಿಯನ್ನು ಕನ್ನಡದ ಹಿರಿಯ ವಿದ್ವಾಂಸ ಹಾಗೂ ವಿಮರ್ಶಕ ಟಿ.ವಿ. ವೆಂಕಟಾಚಲಶಾಸ್ತ್ರಿ ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮುದ್ದುರಾಮ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿತ್ತು.ಇದೇ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ ಅವರ 1,008 ಚೌಪದಿಗಳನ್ನು ಒಳಗೊಂಡ ‘ಮುದ್ದುರಾಮ ಮಂಜರಿ’ ಕೃತಿಯನ್ನೂ ಬಿಡುಗಡೆಗೊಳಿಸಲಾಯಿತು.ಅಭಿನಂದನಾ ನುಡಿಗಳನ್ನಾಡಿದ ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜ ರಾವ್, 1995 ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದಲ್ಲಿದ್ದ ಶೆಲ್ಡನ್ ಪೋಲಕ್ ಎಂಬ ವಿದ್ವಾಂಸ, ಪಂಪನ ವಿಕ್ರಮಾರ್ಜುನ ವಿಜಯ ಕುರಿತು ತಿಳಿದುಕೊಳ್ಳಲು ಮೈಸೂರಿಗೆ ಬಂದು ವೆಂಕಟಾಚಲ ಶಾಸ್ತ್ರಿ ಅವರ ಬಳಿ 8 ತಿಂಗಳು ಅಭ್ಯಾಸ ಮಾಡಿದ್ದರು.‌ಇದು ಶಾಸ್ತ್ರಿಗಳ ವಿದ್ವತ್ತಿಗೆ ಹಿಡಿದು ಕೈಗನ್ನಡಿ ಎಂದರು.ಕೃತಿ ಕುರಿತು ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಎಲ್ಲರಿಗೂ ಒಳಿತು ಬಯಸುವುದೇ ಕಾವ್ಯದ ಉದ್ದೇಶ. ಅದನ್ನು ಗ್ರಹಿಸುವುದು ಆಯಾ ಕಾಲಘಟ್ಟವನ್ನು ಅವಂಬಿಸುತ್ತದೆ ಎಂದರು.ಕಾವ್ಯ ಓದಿದರೆ ಏನು ಸಿಗುತ್ತದೆ ಎಂಬ ಪ್ರಶ್ನೆ ಇಂದು ಹೆಚ್ಚುತ್ತಿದೆ. ಮುದ್ದುರಾಮ ಕೃತಿಗಳನ್ನು ಓದಿದಾಗ ಬದುಕಿನಲ್ಲಿ ಯಾವುದು ಆನಂದ, ಜೀವನದ ಗುರಿಯೇನು ಎಂಬುದು ತಿಳಿಯುತ್ತದೆ. ಮನುಷ್ಯ ಜೀವನದ ಸಾರ್ಥಕತೆಗೆ ಅಗತ್ಯವಾದ ಕವನಗಳು ಇಲ್ಲಿವೆ. ಕೃತಿಯು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಅವರು ಶ್ಲಾಘಿಸಿದರು. ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಕಾವ್ಯಾಸಕ್ತಿಯಿದ್ದಾಗ ಮಾತ್ರ ಕಾವ್ಯದ ಆಸ್ವಾಧನೆ ಲಭ್ಯವಾಗುತ್ತದೆ. ಮುದ್ದುರಾಮ ಚೌಪದಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿವೆ ಎಂದರು.

ಕಾರ್ಯಕ್ರಮದಲ್ಲಿ ಕೆ.ಸಿ. ಶಿವಪ್ಪ, ಚೇತನ್‌ರಾಮ್, ಪ್ರೊ. ನೀಲಗಿರಿ ತಳವಾರ್ ಮೊದಲಾದವರು ಇದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ