ಮೂರ್ನಾಡು: ಆಟೋ ಮಾಲೀಕ-ಚಾಲಕರ ಕುಟುಂಬ ಸಮ್ಮಿಲನ

KannadaprabhaNewsNetwork | Published : Feb 21, 2024 2:03 AM

ಸಾರಾಂಶ

ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಟೋ ಮಾಲೀಕರ ಹಾಗೂ ಚಾಲಕರ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಮೂರ್ನಾಡು ಪಾಂಡಾಣೆ ಮೈದಾನದಲ್ಲಿ ಭಾನುವಾರ ಜರುಗಿತು. ಕ್ರೀಡಾಕೂಟದಲ್ಲಿ ಸಂಘದ ಪುರುಷ ಸದಸ್ಯರಿಗೆ ಕ್ರಿಕೆಟ್ ಪಂದ್ಯಾಟ ಹಗ್ಗ ಜಗ್ಗಾಟ ಮತ್ತು ಮಹಿಳೆಯರಿಗೆ ನಿಂಬೆಹಣ್ಣಿನ ಓಟ ಇನ್ನಿತರ ಆಟೋ ಮತ್ತು ಮಕ್ಕಳಿಗೆ ವಿವಿಧ ಬಗ್ಗೆ ಆಟೋಟಗಳನ್ನು ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮೂರ್ನಾಡಿನ ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಟೋ ಮಾಲೀಕರ ಹಾಗೂ ಚಾಲಕರ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಮೂರ್ನಾಡು ಪಾಂಡಾಣೆ ಮೈದಾನದಲ್ಲಿ ಭಾನುವಾರ ಜರುಗಿತು.

ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಡಿ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಬಿ.ಎಸ್ ,ತ್ರಿನೇತ್ರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕರವಂಡ ಸಜನ್ ಗಣಪತಿ , ಫ್ರೆಂಡ್ಸ್ ವಾಹನ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ರಿಯಾಜ್, ನಾಪೋಕ್ಲು ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ರಾಜೀವ್, ಅಮ್ಮತ್ತಿಯ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಭಿಜಿತ್, ಮೂರ್ನಾಡು ಪೋಲಿಸ್ ಉಪಠಾಣೆಯ ಪಿ.ಟಿ ಶ್ರೀನಿವಾಸ್ ,ಮೂರ್ನಾಡು ಪೊಲೀಸ್ ಉಪಠಾಣೆ ಸಿಬ್ಬಂದಿ ರಾಜೇಂದ್ರ, ಕಾಂತೂರು ಗ್ರಾಮ ಪಂಚಾಯತಿ ಸದಸ್ಯ ಎಚ್ .ಎನ್ ರಘು, ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ತಿಮ್ಮಪ್ಪ , ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೆ ಚಂದ್ರ, ಕಾರ್ಯದರ್ಶಿ ಎಚ್ಎಸ್ ಸತೀಶ್ ಸದಸ್ಯರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ಸನ್ಮಾನ: ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಹಿರಿಯ ಚಾಲಕರಾದ ವೇಣುಗೋಪಾಲ್, ಗಣೇಶ್ ಬಿ.ಆರ್.,ಚೆಟ್ಟಿಮಾಡ ದಿವಿ, ಭೋಜಣ್ಣ , ಅಂಥೋನಿ, ರಘುಪತಿ ಇವರನ್ನು ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರಾದ ಸುಬಾನ್ ಅವರ ಮಗಳಾದ ಇನ್ಷ ಎಂ.ಎ, ದೇರಜೆ ಸತೀಶ್ ಅವರ ಮಗಳಾದ ಭವಿತ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕ್ರೀಡಾಕೂಟದಲ್ಲಿ ಸಂಘದ ಪುರುಷ ಸದಸ್ಯರಿಗೆ ಕ್ರಿಕೆಟ್ ಪಂದ್ಯಾಟ ಹಗ್ಗ ಜಗ್ಗಾಟ ಮತ್ತು ಮಹಿಳೆಯರಿಗೆ ನಿಂಬೆಹಣ್ಣಿನ ಓಟ ಇನ್ನಿತರ ಆಟೋ ಮತ್ತು ಮಕ್ಕಳಿಗೆ ವಿವಿಧ ಬಗ್ಗೆ ಆಟೋಟಗಳನ್ನು ಹಮ್ಮಿಕೊಳ್ಳಲಾಯಿತು.

ಕ್ರೀಡಾ ವಿಜೇತರು: ಕ್ರಿಕೆಟ್ ಪಂದ್ಯದಲ್ಲಿ ಖಜಾಂಚಿ 9, ತಂಡ ಪ್ರಥಮ ಸ್ಥಾನವನ್ನು ಅಧ್ಯಕ್ಷ 9 ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅನಿತಾ ಮತ್ತು ತಂಡದವರು ಪ್ರಥಮ ಸ್ಥಾನ ಗಳಿಸಿದರು ಶೋಭಾ ಮತ್ತು ತಂಡದವರು ದ್ವಿತೀಯ ಸ್ಥಾನ ಗಳಿಸಿದರು.

Share this article