ರೇಷ್ಮೆ ಜೊತೆಗೆ ತೆಂಗು, ಅಡಿಕೆ, ವಿವಿಧ ಜಾತಿಯ ಹಣ್ಣುಗಳ ಬೆಳೆ

KannadaprabhaNewsNetwork | Published : May 22, 2025 1:31 AM
ರೇಷ್ಮೆಯಲ್ಲಿ ವರ್ಷಕ್ಕೆ 9 ಬೆಳೆ ತೆಗೆದು, ಮೈಸೂರಿನಲ್ಲಿ ಮಾರಾಟ ಮಾಡುತ್ತಾರೆ. ಮೊದಲು ರೇಷ್ಮೆಗೂಡು ಮಾರಾಟಕ್ಕೆ ರಾಮನಗರ ಅಥವಾ ಕೊಳ್ಳೇಗಾಲದ ಮುಡಿಗುಂಡಕ್ಕೆ ಹೋಗಬೇಕಿತ್ತು.
Follow Us

ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ತಾಲೂಕು ದುದ್ದಗೆರೆಯ ಬಿ.ಸಿ. ವಸಂತ ಅವರು ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿದ್ದವರು. ನಿವೃತ್ತಿಯ ನಂತರ ಸಂಪೂರ್ಣವಾಗಿ ಕೃಷಿಯಲ್ಲಿ ನಿರತರಾಗಿದ್ದಾರೆ.ಅವರಿಗೆ ಮೂರು ಎಕರೆ ಜಮೀನಿದೆ. ಇವರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಪ್ರಮುಖವಾಗಿ ರೇಷ್ಮೆ, ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಕಾಳ ಮೆಣಸು, ವಿವಿಧ ಜಾತಿಯ ಹಣ್ಣುಗಳನ್ನು ಬೆಳೆಯುತ್ತಾರೆ. ತೆಂಗು- 110, ಅಡಿಕೆ- 700, ಕಾಳಮೆಣಸು-30 ಗಿಡಗಳಿವೆ. ಸೀತಾಫಲ, ರಾಮಫಲ, ಮಾವು, ಹಲಸು, ದಾಳಿಂಬೆ, ನೇರಳೆ, ಸೀಬೆ, ಕಿತ್ತಳೆ, ಮೊಸಂಬಿ, ಪನ್ನೀರ್‌ಗಿಡಗಳಿವೆ.ರೇಷ್ಮೆಯಲ್ಲಿ ವರ್ಷಕ್ಕೆ 9 ಬೆಳೆ ತೆಗೆದು, ಮೈಸೂರಿನಲ್ಲಿ ಮಾರಾಟ ಮಾಡುತ್ತಾರೆ. ಮೊದಲು ರೇಷ್ಮೆಗೂಡು ಮಾರಾಟಕ್ಕೆ ರಾಮನಗರ ಅಥವಾ ಕೊಳ್ಳೇಗಾಲದ ಮುಡಿಗುಂಡಕ್ಕೆ ಹೋಗಬೇಕಿತ್ತು. ಮೈಸೂರಿನಲ್ಲಿ ಮಾರುಕಟ್ಟೆ ಆರಂಭವಾದ ನಂತರ ಸಾಕಷ್ಟು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಿದೆ. ಒಂದು ಬೆಳೆಗೆ 50 ರಿಂದ 70 ಸಾವಿರ ರು.ವರೆಗೂ ಆದಾಯ ಬರುತ್ತದೆ. ತೆಂಗು ಮಾರಾಟದಿಂದ 40 ಸಾವಿರ ರು. ಆದಾಯ ಇದೆ.ವಸಂತ ಅವರು ಸಾವಯವ ಕೃಷಿಗೆ ಪೂರಕವಾಗಿ ಎರೆಹುಳು ಗೊಬ್ಬರ, ಜೀವಾಮೃತ ತಯಾರಿಸಿ, ಜಮೀನಿಗೆ ನೀಡುತ್ತಾರೆ.ಉಪ ಕಸುಬಾಗಿ ಮೇಕೆ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಕೋಳಿಗಳನ್ನು ಕೀರಗಳು ತಿಂದು ಹಾಕುತ್ತಿವೆ. ಆದ್ದರಿಂದ ಈಗ ಇಲ್ಲ. ವಸಂತ ಅವರನ್ನು 2023ನೇ ಸಾಲಿನ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ಇದಲ್ಲದೇ ಹೆಚ್ಚು ತೋಟಗಾರಿಕೆ ಬೆಳೆ ಪೂರೈಸಿದ್ದಕ್ಕಾಗಿ ಹಾಪ್‌ಕಾಮ್ಸ್‌ನಿಂದ ಸನ್ಮಾನಿತರಾಗಿದ್ದಾರೆ.ಸಂಪರ್ಕ ವಿಳಾಸಃ ಬಿ.ಸಿ. ವಸಂತ ಡಾಟರ್‌ ಆಫ್‌ಲೇಟ್‌ಚಿಕ್ಕವೀರಯ್ಯದುದ್ದಗೆರೆವರುಣ ಹೋಬಳಿಮೈಸೂರು ತಾಲೂಕುಮೈಸೂರು ಜಿಲ್ಲೆಮೊ.99026 22211-- ಕೋಟ್‌ಕೃಷಿ ನಾವೇ ಮಾಡಿದರೆ ಕಷ್ಟವಾಗಲ್ಲ. ಸಂಪೂರ್ಣವಾಗಿ ಆಳುಕಾಳುಗಳನ್ನು ನಂಬಿದರೆ ಕಷ್ಟ. - ಬಿ.ಸಿ. ವಸಂತ, ದುದ್ದಗೆರೆ