ತಾಲೂಕಿನ ನರೇಗಾ ಗುರಿ ಸಾಧಿಸುವಲ್ಲಿ ವಿಫಲ

KannadaprabhaNewsNetwork | Published : Jun 9, 2024 1:40 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಯೋಜನೆ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮೀಣ ಭಾಗದ ಜನರ ಕೈಗೆ ಕೆಲಸ ನೀಡುವ ಮೂಲಕ ನೆರವಿಗೆ ಪೂರಕವಾಗಿದೆ. ಆದರೆ, ಕಳೆದ ವರ್ಷ ತಾಲೂಕಿನಲ್ಲಿ ಶೇ.೯೫.೫೦ರಷ್ಟು ಮಾನವ ದಿನಗಳ ಗುರಿ ಸಾಧಿಸುವ ಮೂಲಕ ಗ್ರಾಮೀಣ ಜನರ ಉದ್ಯೋಗ ನೀಡುವ ಪ್ರಮಾಣದಲ್ಲಿ ಶೇ.೧೦೦ ರಷ್ಟು ಗುರಿ ತಲುಪುವಲ್ಲಿ ಸಫಲವಾಗಿಲ್ಲ.

ಬಸವರಾಜ ನಂದಿಹಾಳಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಯೋಜನೆ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮೀಣ ಭಾಗದ ಜನರ ಕೈಗೆ ಕೆಲಸ ನೀಡುವ ಮೂಲಕ ನೆರವಿಗೆ ಪೂರಕವಾಗಿದೆ. ಆದರೆ, ಕಳೆದ ವರ್ಷ ತಾಲೂಕಿನಲ್ಲಿ ಶೇ.೯೫.೫೦ರಷ್ಟು ಮಾನವ ದಿನಗಳ ಗುರಿ ಸಾಧಿಸುವ ಮೂಲಕ ಗ್ರಾಮೀಣ ಜನರ ಉದ್ಯೋಗ ನೀಡುವ ಪ್ರಮಾಣದಲ್ಲಿ ಶೇ.೧೦೦ ರಷ್ಟು ಗುರಿ ತಲುಪುವಲ್ಲಿ ಸಫಲವಾಗಿಲ್ಲ.ಶೇ.೯೫.೫೦ ರಷ್ಟು ಮಾತ್ರ:

ರಾಜ್ಯ ಸರ್ಕಾರ ೨೦೨೩-೨೪ ನೇ ಆರ್ಥಿಕ ವರ್ಷದಲ್ಲಿ ತಾಲೂಕಿಗೆ ೧೫ ಗ್ರಾಮ ಪಂಚಾಯಿತಿ ಸೇರಿ ಒಟ್ಟು ೨,೩೫,೨೫೦ ಮಾನವ ದಿನ ಸೃಜನೆಯ ಗುರಿಯನ್ನು ನಿಗದಿಪಡಿಸಿತ್ತು. ಆದರೆ ೨,೨೪,೬೭೨ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.೯೫.೫೦ ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ೧೫ ಗ್ರಾಮ ಪಂಚಾಯಿತಿ ಮೂಲಕ ನರೇಗಾ ಯೋಜನೆಯಡಿ ಅಕುಶಲ ಉದ್ಯೋಗವನ್ನು ಹಾಗೂ ಗ್ರಾಮೀಣ ಜನತೆಯ ಜೀವನೋಪಾಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವುದು ಹಾಗೂ ಗ್ರಾಮೀಣ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಈ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಬಹುದು. ಗುರಿ ಮೀರಿ ಸಾಧನೆ:

ತಾಲೂಕಿನ ಮುತ್ತಗಿ, ನರಸಲಗಿ, ಉಕ್ಕಲಿ, ಹುಣಶ್ಯಾಳ ಪಿಬಿ, ಡೊಣೂರು, ಇಂಗಳೇಶ್ವರ ಗ್ರಾಮ ಪಂಚಾಯಿತಿಗಳಿಗೆ ನೀಡಲಾದ ಮಾನವ ದಿನಗಳ ಸೃಜನೆ ಗುರಿಗಿಂತಲೂ ಶೇ.೧೦೦ಕ್ಕಿಂತ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ. ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿಯಲ್ಲಿ ಶೇ. ೫೦.೪೯ ಗುರಿ ಮುಟ್ಟಿದರೆ, ಮಸಬಿನಾಳ(ಶೇ.೪೮.೭೯) ವಡವಡಗಿ ಗ್ರಾಮ ಪಂಚಾಯಿತಿಯಲ್ಲಿ ಶೇ.೪೨.೭೫ ರಷ್ಟು ಮಾತ್ರ ಗುರಿ ಮುಟ್ಟಲಾಗಿದೆ. ಪುರುಷ-ಮಹಿಳೆಗೆ ಸಮಾನ ವೇತನ:

೨೦೨೩-೨೪ ನೇ ಸಾಲಿನಲ್ಲಿ ೨೨,೧೮೭ ಕುಟುಂಬಗಳು ನರೇಗಾ ಯೋಜನೆಯ ಉದ್ಯೋಗ ಚೀಟಿ ಪಡೆದುಕೊಂಡಿವೆ. ಇದರಲ್ಲಿ ೪,೮೬೭ ಕುಟುಂಬಗಳು ಸಕ್ರಿಯವಾಗಿ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ. ಈ ವರ್ಷ ಹೊಸದಾಗಿ ೪೦೩ ಕುಟುಂಬಗಳು ಯೋಜನೆಯ ಉದ್ಯೋಗ ಚೀಟಿ ಪಡೆದುಕೊಂಡಿವೆ. ಈ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದ್ದು, ಸರ್ಕಾರ ದಿನವೊಂದಕ್ಕೆ ಕೂಲಿ ಹೆಚ್ಚಿಸಿ ₹೩೪೯ ಕೂಲಿ ನಿಗದಿಪಡಿಸಿದೆ. ಈ ಯೋಜನೆಯಡಿ ವೈಯಕ್ತಿಕವಾಗಿ ಕೃಷಿ ಹೊಂಡ, ಬದು ನಿರ್ಮಾಣವನ್ನು ರೈತರು ಮಾಡಿಕೊಳ್ಳಬಹುದು. ಅಲ್ಲದೇ ಬಾಂದಾರ ಹೂಳು ಎತ್ತುವುದು, ಕೆರೆ ಹೂಳು ತೆಗೆಯುವುದು, ಶಾಲಾ ಆವರಣ ಗೋಡೆ, ಶಾಲೆಯಲ್ಲಿ ಶೌಚಾಲಯ ನಿರ್ಮಾಣ, ಅಡುಗೆ ಕೋಣೆ, ರಸ್ತೆ, ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲು ಅವಕಾಶವಿದೆ.ಈ ಯೋಜನೆಯಡಿಯಲ್ಲಿ ಯರನಾಳ, ಮುತ್ತಗಿ, ಕಣಕಾಲ, ವಡವಡಗಿ, ಕುದರಿಸಾಲವಾಡಗಿ, ಉಕ್ಕಲಿ, ಬ್ಯಾಕೋಡ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣಗಳು ನಿರ್ಮಾಣವಾಗಿವೆ. ಹುಣಶ್ಯಾಳ ಪಿಬಿ, ಮಸಬಿನಾಳ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣ ಆರಂಭವಾಗಬೇಕಿದೆ. ಕೋಟ್............

೨೦೨೪-೨೫ ನೇ ಸಾಲಿನಲ್ಲಿ ಸರ್ಕಾರ ೨,೪೭,೦೦೦ ಮಾನವ ದಿನಗಳ ಸೃಜನೆ ಮಾಡಲು ಗುರಿ ನಿಗದಿ ಪಡಿಸಿದೆ. ಮೇ ತಿಂಗಳ ಅಂತ್ಯದವರೆಗೆ ೪೧,೬೫೬ ಮಾನವ ದಿನ ಸೃಜಿಸಲಾಗಿದೆ. ಈಗಾಗಲೇ ತಾಲೂಕಿನ ಹುಣಶ್ಯಾಳ ಪಿಬಿ, ಮುತ್ತಗಿ, ಬ್ಯಾಕೋಡ, ದಿಂಡವಾರ, ನರಸಲಗಿ ಗ್ರಾಮ ಪಂಚಾಯಿತಿಗಳಲ್ಲಿ ಗುರಿಗಿಂತಲೂ ಶೇ.೧೦೦ ಕ್ಕಿಂತಲೂ ಹೆಚ್ಚು ಮಾನವ ದಿನ ಸೃಜಿಸುವ ಗುರಿ ಮುಟ್ಟಿ ಪ್ರಗತಿಯಲ್ಲಿದೆ. ಹೀಗಾಗಿ, ಜೂ.೭ರವರೆಗೆ ಮಾನವ ದಿನ ಸೃಜನೆ ಶೇ. ೯೪.೭೮ ರಷ್ಟು ಪ್ರಗತಿ ಸಾಧಿಸಲಾಗಿದೆ. ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಪ್ರಕಾಶ ದೇಸಾಯಿ, ತಾಪಂ ಪ್ರಬಾರ ಇಒ.

Share this article