ಆಯುರ್ವೇದ ಮುಂದಿನ ಪೀಳೆಗೆಯ ಅವಲಂಬನೆ ಆಗಬೇಕು

KannadaprabhaNewsNetwork | Published : Apr 3, 2025 2:49 AM

ಸಾರಾಂಶ

ಅಲೋಪತಿ ಚಿಕಿತ್ಸೆಯಲ್ಲಿ ಆಯುರ್ವೇದ ಔಷಧ ಹೇಗೆ ಬಳಸಬಹುದು ಎಂಬ ಬಗ್ಗೆ ಸಂಸತ್‌ನಲ್ಲಿ ಅರ್ಧಗಂಟೆ ಕಾಲ ಚರ್ಚೆ ನಡೆದಿದೆ

ಕನ್ನಡಪ್ರಭ ವಾರ್ತೆ ಮೈಸೂರುಡ್ರಗ್‌ ಮಾಫಿಯಾದ ಈ ಸಂದರ್ಭದಲ್ಲಿ ಮುಂದಿನ ಪೀಳಿಗೆ ಆಯುರ್ವೇದವನ್ನು ಮಾತ್ರ ಅವಲಂಬಿತರಾಗುವ ವಾತಾವರಣ ನಿರ್ಮಿಸಬೇಕು ಎಂದು ಆಯುರ್ವೇದ ತಜ್ಞ ವೈದ್ಯ ಡಾ.ಎ.ಎಸ್‌. ಚಂದ್ರಶೇಖರ್‌ ಹೇಳಿದರು.ನ್ಯಾಷನಲ್‌ ಇಂಟಿಗ್ರೇಟೆಡ್‌ ಮೆಡಿಕಲ್‌ ಅಸೋಸಿಯೇಷನ್‌ ನಗರದ ಜೆ.ಕೆ. ಮೈದಾನದ ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಎನ್‌ಐಎಂಎ- ಆಯುರ್‌ವೈದ್ಯ ಸಮ್ಮಿಲನ - 2025 ದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.ಅಲೋಪತಿ ಚಿಕಿತ್ಸೆಯಲ್ಲಿ ಆಯುರ್ವೇದ ಔಷಧ ಹೇಗೆ ಬಳಸಬಹುದು ಎಂಬ ಬಗ್ಗೆ ಸಂಸತ್‌ನಲ್ಲಿ ಅರ್ಧಗಂಟೆ ಕಾಲ ಚರ್ಚೆ ನಡೆದಿದೆ. ಭಾರತೀಯ ಔಷಧ ಪದ್ಧತಿಯಲ್ಲಿ ಎಲ್ಲಾ ರೋಗಗಳಿಗೂ ಪರಿಹಾರ ಇದೆ. ಅದನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕಿದೆ. ಕಾಮಾಲೆ ರೋಗಕ್ಕೆ ನಮ್ಮಲ್ಲಿ ಬೇಗ ಗುಣಪಡಿಸುವ ಔಷಧ ಇದ್ದರೂ, ತಿಂಗಳ ಕಾಲ ಚಿಕಿತ್ಸೆ ಕೊಡಲಾಗುತ್ತಿದೆ. ಇದನ್ನು ಬಿಡಬೇಕು ಎಂದರು.ಈ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸೆಗೆ ಉತ್ತಮ ಅವಕಾಶವಿದೆ. ಸೂಕ್ಷ್ಮ ಮುದ್ರೆಗಳನ್ನು ಬಳಸಿ ಚಿಕಿತ್ಸೆ ಕೊಡಬಹುದು. ಅಲೋಪತಿ ಮತ್ತು ಡ್ರಗ್‌ ಮಾಫಿಯಾದ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಳ್ಳಬೇಕು. ದೀರ್ಘಕಾಲೀನ‌ ವ್ಯಾಧಿಗಳಿಗೆ ಸೂಕ್ತ ಚಿಕಿತ್ಸೆ ಕೊಡಬೇಕು. ಆಯುರ್ವೇದ ಅಳಿವಿನ ಅಂಚಿನಲ್ಲಿದೆ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಆಯುರ್ವೇದ ಅಳಿವಿನ ಅಂಚಿನಲ್ಲಿ ಇಲ್ಲ. ಅನೇಕರು ಆಯುರ್ವೇದ ಔಷಧ ಕೊಡಿ ಬೇರೆ ಬೇಡ ಎಂದು ಬರುತ್ತಿದ್ದಾರೆ. ಇದನ್ನು ಗಮನಿಸಬೇಕು ಎಂದು ಅವರು ಹೇಳಿದರು.ಮುಂದಿನ ಪೀಳಿಗೆ ಆಯುರ್ವೇದ ಅವಲಂಬಿತರಾಗಬೇಕು ಅಂತಹ ಸಂದರ್ಭ ನಿರ್ಮಾಣ ಮಾಡಬೇಕು. ಆಯುರ್ವೇದದಲ್ಲಿ ನ್ಯಾನೋ ಟೆಕ್ನಾಲಜಿ ಬಗ್ಗೆ ದೊಡ್ಡ ಚರ್ಚೆ ಇದೆ. ಮಾಜಿ ಸಚಿವ ಅನಂತಕುಮಾರ್ ಹೆಗಡೆ ಅವರು ಈ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಯಾವುದೇ ರೋಗವನ್ನು ಮೂಲದಲ್ಲೇ ಗುರುತಿಸಿ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಎನ್‌ಐಎಂಎನ ಅಧ್ಯಕ್ಷ ಡಾ. ಅಶುತೋಷ್‌ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಡಾ. ಶ್ರೀರಾಮ್‌ ಕಲ್ಯಾಣಶಂಕರ್, ಖಜಾಂಚಿ ಡಾ. ಶಾಂತಿ ಲಾಲ್‌ ಶರ್ಮ, ಮಹಿಳಾ ಘಟಕದ ಅಧ್ಯಕ್ಷೆ ಡಾ. ವೈಶಾಲಿ ಪದ್ಗನ್‌, ಕಾರ್ಯದರ್ಶಿ ಡಾ. ಮೃಣ್ಮಯಿ, ಐಪಿಪಿನ ಡಾ. ವಿನಾಯಕ್‌ ತೆಂಬುರ್ನಿಕರ್‌ ಮೊದಲಾದವರು ಇದ್ದರು.

Share this article