ಶಿಕ್ಷಣದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ: ಶಾಸಕ

KannadaprabhaNewsNetwork | Published : Jan 27, 2024 1:20 AM

ಸಾರಾಂಶ

ಶಿಕ್ಷಣದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಹೀಗಾಗಿ ನಿಗದಿತ ವೇಳೆಗೆ ಶಾಲೆಗೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವಂತೆ ಶಾಸಕ ಎಚ್‌.ವಿ. ವೆಂಕಟೇಶ್‌ ಶಿಕ್ಷಕರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಶಿಕ್ಷಣದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಹೀಗಾಗಿ ನಿಗದಿತ ವೇಳೆಗೆ ಶಾಲೆಗೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವಂತೆ ಶಾಸಕ ಎಚ್‌.ವಿ. ವೆಂಕಟೇಶ್‌ ಶಿಕ್ಷಕರಿಗೆ ಕರೆ ನೀಡಿದರು.

ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 75 ನೇ ಗಣರಾಜ್ಯೋತ್ಸವದ ಪಥ ಸಂಚಲನ ಹಾಗೂ ಧ್ವಜಾರೋಹಣ ನೆರೆವೇರಿಸಿದ ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಗ್ರಾಮ ಹಾಗೂ ದೇಶದ ಪ್ರಗತಿ ಸಾಧ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ರೂಪಿಸುವತ್ತ ಶಿಕ್ಷಕರು ಶ್ರದ್ಧೆ ವಹಿಸಬೇಕು. ಕೆಲ ಶಿಕ್ಷಕರು ಕರ್ತವ್ಯ ಪಾಲನೆಯಲ್ಲಿ ಬೇಜವಾಬ್ದಾರಿ ವಹಿಸಿರುವ ಬಗ್ಗೆ ದೂರುಗಳಿವೆ. ಸರ್ಕಾರ ನಿಗದಿತ ವೇಳೆಯಲ್ಲಿ ಶಾಲೆಗೆ ಹೋಗಿ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಹಾಗೂ ಪಾಠ-ಪ್ರವಚನ, ಕಲಿಕೆ ಬಗ್ಗೆ ಆಸಕ್ತಿವಹಿಸುವಂತೆ ಸಲಹೆ ನೀಡಿದರು.

ಇನ್ನೂ ತಾಲೂಕಿನ ಸಮಗ್ರ ಪ್ರಗತಿಗೆ ವಿಶೇಷ ಆಸಕ್ತಿವಹಿಸಲಾಗಿದೆ. ತಾಲೂಕಿನ ಸಮಗ್ರ ಪ್ರಗತಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು. ಉನ್ನತ ಶಿಕ್ಷಣ, ಉದ್ಯೋಗ ಹಾಗೂ ನಗರದ ರಸ್ತೆ ಪ್ರಗತಿಗೆ ಆಸಕ್ತಿ ವಹಿಸಲಿದ್ದು, ಈ ಬಗ್ಗೆ ಸಿಎಂ ಹಾಗೂ ಸರ್ಕಾರದ ಜತೆ ಚರ್ಚಿಸಿ ಮನವಿ ಮಾಡಿದ್ದೇನೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಸರ್ಕಾರ ಜನಪರವಾಗಿದ್ದು, ನುಡಿದಂತೆ ನಡೆಯುತ್ತಿದೆ. ತಾಲೂಕು ಪ್ರಗತಿ ಹಿನ್ನೆಲೆಯಲ್ಲಿ ಜನಸಾಮಾನ್ಯರ ಬೇಡಿಕೆಯ ಅನುಸಾರ ಕೆಲಸ ನಿರ್ವಹಿಸುತ್ತಿದ್ದು, ತಾಲೂಕಿನ ಸಮಸ್ತ ಜನತೆಗೆ 75ನೇ ವರ್ಷದ ಗಣರಾಜ್ಯೋತ್ಸವದ ಶುಭಾಶಯ ಕೋರುವುದಾಗಿ ಹೇಳಿದರು.

ಇದೇ ವೇಳೆ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ತಹಸೀಲ್ದಾರ್‌ ವರದರಾಜು ಗಣರಾಜ್ಯೋತ್ಸವ ಕುರಿತು ಮಾತನಾಡಿ ಸಮಸ್ತ ಜನತೆಗೆ 75ನೇ ವರ್ಷದ ಗಣರಾಜ್ಯೋತ್ಸವದ ಶುಭಾಶಯ ವ್ಯಕ್ತಪಡಿಸಿದರು.

ತಾಪಂ ಇಒ ಜಾನಕಿ ರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಣಮ್ಮ, ಮಾಜಿ ಪುರಸಭೆಯ ಅಧ್ಯಕ್ಷ ಎ. ಶಂಕರ್ ರೆಡ್ಡಿ, ರೈತ ಸಂಘದ ನರಸಿಂಹರೆಡ್ಡಿ ಕೃಷ್ಣರಾವ್‌, ಪುರಸಭೆ ಸದಸ್ಯರಾದ ಪಿ.ಎಚ್‌. ರಾಜೇಶ್, ತೆಂಗಿನಕಾಯಿ ರವಿ, ಮಾಜಿ ಪುರಸಭೆ ಅಧ್ಯಕ್ಷ ವೇಲುರಾಜು ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್, ನಗರ ವೃತ್ತ ನಿರೀಕ್ಷಕ ಸುರೇಶ್ ಪಶು ಇಲಾಖೆಯ ವರಕೇರಪ್ಪ, ದೈಹಿಕ ಶಿಕ್ಷಕ ಬಸವರಾಜು ಸಂಘ ಸಂಸ್ಥೆಗಳ ಪ್ರತಿನಿಧಿ ಆರ್‌.ಟಿ. ಖಾನ್‌, ಹನುಮಂತರಾಯಪ್ಪ, ಇತರೆ ಆನೇಕ ಮಂದಿ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Share this article