ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ

KannadaprabhaNewsNetwork |  
Published : Jul 08, 2024, 12:34 AM IST
ಬೀದಿ ನಾಯಿ ಕಡಿತದಿಂದ ಗಾಯಗೊಂಡ ಬಾಲಕನಕುಟುಂಬದ ಪೋಷಕರಿಗೆ ಸೂಲಿಬೆಲೆ ಗ್ರಾಪಂನಲ್ಲಿ ಇಒಡಾ.ಸಿ.ಎನ್ ನಾರಾಯಣಸ್ವಾಮಿ ಚಿಕಿತ್ಸೆಗಾಗಿ ಪರಿಹಾರವನ್ನುವಿತರಣೆ ಮಾಡಿದರು.ಗ್ರಾಪಂ ಅಧ್ಯಕ್ಷ ಎ.ಜನಾರ್ಧನ್ರೆಡ್ಡಿ,ಪಿಡಿಒ ಟಿ.ಎಸ್. ಮಂಜುನಾಥ್ ಹಾಗೂ ಗ್ರಾಪಂ ಸದಸ್ಯರುಹಾಜರಿದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಸೂಲಿಬೆಲೆಯಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ನಿಯಂತ್ರಣಕ್ಕೆ ಶೀಘ್ರ ಎಬಿಸಿ ಕಾರ್‍ಯಕ್ರಮ ಕೈಗೊಳ್ಳಲಾಗುವುದು. ಎಬಿಸಿ ಕಾರ್‍ಯಕ್ರಮ ಅನುಷ್ಠಾನಕ್ಕಾಗಿ ಹೊಸಕೋಟೆ ನಗರಸಭೆ ಈಗಾಗಲೇ ಟೆಂಡರ್ ಕರೆದಿದ್ದು, ಅದೇ ಮಾದರಿಯನ್ನು ಸೂಲಿಬೆಲೆ ಹಾಗೂ ಅಗತ್ಯ ಗ್ರಾಮ ಪಂಚಾಯಿತಿಗಳಲ್ಲಿ ಅನುಸರಿಸಲಾಗುವುದು ಎಂದು ಹೊಸಕೋಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್‍ಯನಿವಾರ್ಹಣಾಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ ತಿಳಿಸಿದರು.

ಸೂಲಿಬೆಲೆ: ಸೂಲಿಬೆಲೆಯಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ನಿಯಂತ್ರಣಕ್ಕೆ ಶೀಘ್ರ ಎಬಿಸಿ ಕಾರ್‍ಯಕ್ರಮ ಕೈಗೊಳ್ಳಲಾಗುವುದು. ಎಬಿಸಿ ಕಾರ್‍ಯಕ್ರಮ ಅನುಷ್ಠಾನಕ್ಕಾಗಿ ಹೊಸಕೋಟೆ ನಗರಸಭೆ ಈಗಾಗಲೇ ಟೆಂಡರ್ ಕರೆದಿದ್ದು, ಅದೇ ಮಾದರಿಯನ್ನು ಸೂಲಿಬೆಲೆ ಹಾಗೂ ಅಗತ್ಯ ಗ್ರಾಮ ಪಂಚಾಯಿತಿಗಳಲ್ಲಿ ಅನುಸರಿಸಲಾಗುವುದು ಎಂದು ಹೊಸಕೋಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್‍ಯನಿವಾರ್ಹಣಾಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ ತಿಳಿಸಿದರು.

ಸೂಲಿಬೆಲೆಯಲ್ಲಿ ಭಾನುವಾರ ಬೀದಿ ನಾಯಿ ಕಡಿತಕ್ಕೊಳಗಾಗಿ ಗಾಯಗೊಂಡಿರುವ ಬಾಲಕನ ಚಿಕಿತ್ಸೆಗಾಗಿ ಪರಿಹಾರ ವಿತರಿಸಿ ಮಾತನಾಡಿದ ಅವರು, ಸೂಲಿಬೆಲೆಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಕಡಿತದಿಂದ ಸಾರ್ವಜನಿಕರು ಗಾಯಗೊಳ್ಳುತ್ತಿರುವ ಘಟನೆಗಳು ಪದೇಪದೇ ಮರುಕಳಿಸುತ್ತಿವೆ. ಬೀದಿ ನಾಯಿಗಳನ್ನು ನಿಯಂತ್ರಣಕ್ಕೆ ಕಾನೂನಾತ್ಮಕವಾಗಿ ಎಬಿಸಿ ಕಾರ್‍ಯಕ್ರಮವೊಂದೇ ದಾರಿಯಾಗಿದೆ. ಇದನ್ನು ಸೂಲಿಬೆಲೆ ಗ್ರಾಪಂಯಲ್ಲಿ ಶೀಘ್ರ ಕೈಗೊಂಡು ಬೀದಿ ನಾಯಿಗಳನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಬಿಸಿ ಕಾರ್‍ಯಕ್ರಮ ಅನುಷ್ಠಾನಕ್ಕೆ ಹೊಸಕೋಟೆ ನಗರಸಭೆ ಟೆಂಡರ್ ಕರೆದಿದ್ದು, ಜು.೧೮ರಂದು ನವದೆಹಲಿಯಿಂದ ತಂಡ ಬರಲಿದೆ. ಇದೇ ತಂಡವನ್ನು ಸೂಲಿಬೆಲೆಗೂ ಕರೆಯಿಸಿ ಟೆಂಡರ್ ಮೂಲಕವೇ ಎಬಿಸಿ ಕಾರ್‍ಯಕ್ರಮ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.

ಸೂಲಿಬೆಲೆಯಲ್ಲಿರುವ ಕೋಳಿ ಮಾಂಸದ ಅಂಗಡಿ ಮಾಲೀಕರು ಮಾಂಸದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಎಲ್ಲೆಂದರಲ್ಲಿ ಬಿಸಾಡಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬಾರದು ಎಂದರು.

ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ ಮಾತನಾಡಿ, ಕಾನೂನು ಬದ್ಧವಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವವರಿಗೂ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಹೇಳಿದರು.

ಇದೇ ವೇಳೆ ಇಒ, ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಮಾಂಸದ ಅಂಗಡಿಗಳನ್ನು ಪರಿಶೀಲಿಸಿದರು. ಪಿಡಿಒ ಮಂಜುನಾಥ್, ಲೆಕ್ಕಾಧಿಕಾರಿ ರಂಗಸ್ವಾಮಿ, ಗ್ರಾಪಂ ಸದಸ್ಯರಾದ ಶಿವರುದ್ರಪ್ಪ, ಸಾಬೀರ್ ಬೇಗ್, ರಿಯಾಜ್, ಜಿಯಾವುಲ್ಲಾ ಸೇರಿದಂತೆ ಹಲವರು ಹಾಜರಿದ್ದರು.

ಚಿತ್ರ-೦೭ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

ಚಿತ್ರ;

ಚಿತ್ರ; ೦೭ ಸೂಲಿಬೆಲೆ ೨ ಜೆಪಿಜೆ ನಲ್ಲಿದೆ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...