ಶಿಕ್ಷಕರ ಬಲವರ್ಧನೆಗೆ ಕಾರ್ಯಾಗಾರಗಳ ಅಗತ್ಯತೆ ಇದೆ: ರಡ್ಡೇರ

KannadaprabhaNewsNetwork |  
Published : Mar 11, 2024, 01:18 AM IST
ಗದಗ ರೋಟರಿ ಹಾಲ್‌ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗಾಗಿ ಒಂದು ದಿನದ  ಶೈಕ್ಷಣಿಕ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಶಿಕ್ಷಕರು ಬದಲಾಗುತ್ತಿರುವ ಸಾಮಾಜಿಕ ಅಗತ್ಯತೆ ಹಾಗೂ ಇಲಾಖೆಯ ಮಾನದಂಡಗಳಂತೆ ಶಿಶು ಕೇಂದ್ರಿತ ಶಿಕ್ಷಣ ನಮ್ಮ ಆದ್ಯತೆಯಾಗಬೇಕು. ಮುಖ್ಯ ಶಿಕ್ಷಕರ ಬಲವರ್ಧನೆಗೆ ನಿಯಮಿತವಾಗಿ ಇಂತಹ ಕಾರ್ಯಾಗಾರಗಳ ಅಗತ್ಯತೆ ಇದೆ.

ಗದಗ: ಶಿಕ್ಷಕರು ಬದಲಾಗುತ್ತಿರುವ ಸಾಮಾಜಿಕ ಅಗತ್ಯತೆ ಹಾಗೂ ಇಲಾಖೆಯ ಮಾನದಂಡಗಳಂತೆ ಶಿಶು ಕೇಂದ್ರಿತ ಶಿಕ್ಷಣ ನಮ್ಮ ಆದ್ಯತೆಯಾಗಬೇಕು. ಮುಖ್ಯ ಶಿಕ್ಷಕರ ಬಲವರ್ಧನೆಗೆ ನಿಯಮಿತವಾಗಿ ಇಂತಹ ಕಾರ್ಯಾಗಾರಗಳ ಅಗತ್ಯತೆ ಇದೆ. ಈ ಪ್ರಯತ್ನಕ್ಕೆ ಕಾರಣರಾದ ಸರ್ವರನ್ನು ಅಭಿನಂದಿಸುತ್ತೇನೆ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ನಗರದ ರೋಟರಿ ಹಾಲ್‌ನಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿಕ್ಷಣಾಧಿಕಾರಿಗಳ ಸಂಘ ಜಿಲ್ಲಾ ಘಟಕ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗಾಗಿ ನಡೆದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಂದ್ರಮೌಳಿ ಜಾಲಿ ಹಾಗೂ ಶ್ರೀಧರ ಸುಲ್ತಾನಪುರ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಾ ಬಂದಿದೆ. ಈ ವರ್ಷ ಆರ್.ಎಸ್. ಬುರಡಿ ಅವರ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೇನು? ವೃತ್ತಿಪರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳನ್ನು ಪ್ರೇರಣೆ, ಸಂಕಲ್ಪ, ಸಂಜೀವಿನಿ ಎಂದು ವಿಂಗಡಿಸಿ ಅವರ ಪ್ರಗತಿಯನ್ನಾಧರಿಸಿ ವರ್ಗಗಳ ನಡೆಸಿ, ಹಲವು ಪ್ರಯತ್ನಗಳನ್ನು ಮಾಡಲಾಗಿದೆ ಎಂದರು.

ಈ ವೇಳೆ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿದರು. ಜಿಲ್ಲಾ ಸಕಾಲ ಸಮಾಲೋಚಕರಾದ ಇಂಚಲ ಅವರು ಸಕಾಲ ಸೇವೆಗಳ ಅನುಷ್ಠಾನ ಕುರಿತು ಮಾಹಿತಿ ನೀಡಿದರು.

ಸಂಘಟನಾ ಕಾರ್ಯದರ್ಶಿ ಎಚ್.ಬಿ. ರಡ್ಡೇರ, ಎಂ.ಎಚ್. ಕಂಬಳಿ, ಮಂಗಳಾ ತಾಪಸ್ಕರ, ಎಸ್.ಡಿ. ಕನವಳ್ಳಿ, ಎಚ್.ಎಂ. ಪಡ್ನೇಶಿ, ಪಿ.ಸಿ. ಕಲಹಾಳ, ಎಂ.ಬಿ. ಹೊಸಮನಿ, ಎಸ್.ಆರ್. ನದಾಫ, ಗಂಗಾಧರ ಅಣ್ಣಿಗೇರಿ, ಮಜ್ಜಗಿ, ಬಿರಾದಾರ, ಕವಿತಾ ದಂಡಿನ ಹಾಗೂ ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಗದಗ ಗ್ರಾಮೀಣ ವಿ.ವಿ. ನಡುವಿನಮನಿ ಸ್ವಾಗತಿಸಿದರು. ಶಿವಕುಮಾರ ಕುರಿಯವರ ನಿರೂಪಿಸಿದರು. ಶಂಕರ ಹಡಗಲಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ