- ಹಾವೇರಿ ಬಗ್ಗೆ ಅರಿವಿದೆ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಬಗ್ಗೆ ತಿಳಿಯುವೆ - ತೆಲಂಗಾಣ ಮೂಲದ 2009ರ ಐಪಿಎಸ್ ಬ್ಯಾಚ್‌ನ ಕರ್ನಾಟಕ ಕೇಡರ್ ಅಧಿಕಾರಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕರಾಗಿ ಬಿ.ರಮೇಶ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.ನಗರದ ಜಿಲ್ಲಾ ಪೊಲೀಸ್ ಕಚೇರಿಯ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರ ಕಚೇರಿಯಲ್ಲಿ ಇಲ್ಲಿಂದ ವರ್ಗಾವಣೆಯಾದ ಡಾ. ಕೆ.ತ್ಯಾಗರಾಜನ್ ನೂತನ ಐಜಿಪಿ ಬಿ.ರಮೇಶ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು.
ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ ಬಿ.ರಮೇಶ ಅಧಿಕಾರ ವಹಿಸಿಕೊಂಡರು. ನೂತನ ಐಜಿಪಿಗೆ ನಿರ್ಗಮಿತ ಐಜಿ ಡಾ.ತ್ಯಾಗರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್‌ಕುಮಾರ ಎಂ.ಸಂತೋಷ್, ಜಿ.ಮಂಜುನಾಥ, ತೇಜೋವತಿ, ಇಮ್ರಾನ್ ಬೇಗ್, ಉಪಾಧೀಕ್ಷಕರು, ಕಚೇರಿ ಸಿಬ್ಬಂದಿ ಶುಭ ಕೋರಿದರು.ತೆಲಂಗಾಣ ರಾಜ್ಯದ ವಾರೆಂಗಲ್ ಮೂಲ:
ಮೂಲತಃ ತೆಲಂಗಾಣದ ವಾರೆಂಗಲ್ ಜಿಲ್ಲೆಯವರಾದ ನೂತನ ಐಜಿಪಿ ಬಿ.ರಮೇಶ, 2009ರ ಐಪಿಎಸ್ ಬ್ಯಾಚ್‌ನ ಕರ್ನಾಟಕ ಕೇಡರ್ ಅಧಿಕಾರಿ. ಕರ್ನಾಟಕದ ರಾಯಚೂರು, ಚಿಂತಾಮಣಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಬೆಂಗಳೂರು ಸಿಟಿ, ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರಿನ ಕಮಿಷನರ್ ಆಗಿ 2022ರಿಂದ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಪೂರ್ವ ವಲಯಕ್ಕೆ ಐಜಿಪಿಯಾಗಿ ವರ್ಗವಾಗಿದ್ದಾರೆ.- - -
ಬಾಕ್ಸ್ ಹಾವೇರಿ ಗೊತ್ತು, ಉಳಿದ 3 ಜಿಲ್ಲೆ ತಿಳಿಯುವೆದಾವಣಗೆರೆ: ಹಾವೇರಿ ಜಿಲ್ಲೆಯಲ್ಲಿ 7 ತಿಂಗಳು ಜಿಲ್ಲಾ ರಕ್ಷಣಾಧಿಕಾರಿ ಆಗಿದ್ದ ಹಿನ್ನೆಲೆಯಲ್ಲಿ ಅದರ ಬಗ್ಗೆ ಒಂದಷ್ಟು ಮಾಹಿತಿ ಇದೆ. ಚಿತ್ರದುರ್ಗ ಬಗ್ಗೆಯೂ ಒಂದಿಷ್ಟು ಮಾಹಿತಿ ಇದೆ. ದಾವಣಗೆರೆ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಪೂರ್ವ ವಲಯದ ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆದು, ನಾಲ್ಕೂ ಜಿಲ್ಲೆಗಳ ರಕ್ಷಣಾಧಿಕಾರಿಗಳ ಸಹಕಾರದೊಂದಿಗೆ ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದು ನೂತನ ಐಜಿಪಿ ಬಿ.ರಮೇಶ ಭರವಸೆ ನೀಡಿದರು.
ಪೂರ್ವ ವಲಯದ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವುದೇ ಸಮಾಜಘಾತುಕ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಕಡಿವಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಮತ್ತು ಸುವ್ಯಸ್ಥೆಗೆ ಹೆಚ್ಚಿನ ಪ್ರಥಮಾದ್ಯತೆ ನೀಡಲಾಗುವುದು. ಮಟ್ಕಾ, ಇಸ್ಪೀಟ್ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ಶೇ.100ರಷ್ಟು ನಿಯಂತ್ರಿಸಲಾಗುವುದು ಎಂದು ಹೇಳಿದರು.ಚನ್ನಗಿರಿ ಘಟನೆ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ಒಟ್ಟಾರೆ ಜನರ ವಿಶ್ವಾಸಕ್ಕೆ ತಕ್ಕಂತೆ ಎಲ್ಲೆಡೆ ಕಾರ್ಯ ನಿರ್ವಹಿಸಲಾಗುವುದು. ಜನ ಸ್ನೇಹಿ ಪೊಲೀಸ್ ಇಲಾಖೆಯಾಗಿಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಕಾರ್ಯ ನಿರ್ವಹಿಸಲಾಗುವುದು ಎಂದು ಅವರು ಐಜಿಪಿ ರಮೇಶ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - - -5ಕೆಡಿವಿಜಿ20:ದಾವಣಗೆರೆಯಲ್ಲಿ ಶುಕ್ರವಾರ ನೂತನ ಐಜಿಪಿಯಾಗಿ ಬಿ.ರಮೇಶ ಅಧಿಕಾರ ವಹಿಸಿಕೊಂಡರು. -5ಕೆಡಿವಿಜಿ21:
ಪೂರ್ವ ವಲಯದ ನೂತನ ಐಜಿಪಿ ಬಿ.ರಮೇಶ್ ಅವರಿಗೆ ನಿರ್ಗಮಿತ ಐಜಿಪಿ ಡಾ. ಪಿ.ತ್ಯಾಗರಾಜನ್ ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು.