ಅಂಕೋಲಾದಲ್ಲಿ ಬೀಡುಬಿಟ್ಟ ಎನ್‌ಐಎ

KannadaprabhaNewsNetwork |  
Published : Mar 07, 2024, 01:50 AM IST
444564 | Kannada Prabha

ಸಾರಾಂಶ

ಭಯೋತ್ಪಾದಕ ಸಂಘಟನೆ ಕುರಿತಾದ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳ 6 ಜನರ ತಂಡ ತಾಲೂಕಿನಲ್ಲಿ ಕಳೆದೆರಡು ದಿನದಿಂದ ಬೀಡು ಬಿಟ್ಟಿದ್ದು ಉಗ್ರ ಸಂಘಟನೆಯೊಂದಿಗೆ ಲಿಂಕ್ ಇರುವ ವ್ಯಕ್ತಿಗಳ ಶೋಧಕಾರ್ಯ ನಡೆಸಲಾಗಿದೆ.

ಅಂಕೋಲಾ:

ಭಯೋತ್ಪಾದಕ ಸಂಘಟನೆ ಕುರಿತಾದ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳ 6 ಜನರ ತಂಡ ತಾಲೂಕಿನಲ್ಲಿ ಕಳೆದೆರಡು ದಿನದಿಂದ ಬೀಡು ಬಿಟ್ಟಿದ್ದು ಉಗ್ರ ಸಂಘಟನೆಯೊಂದಿಗೆ ಲಿಂಕ್ ಇರುವ ವ್ಯಕ್ತಿಗಳ ಶೋಧಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾಗೆ ಸೇರಲು ಬೆಂಗಳೂರಿನ ಜೈಲಿನಲ್ಲಿ ಇರುವ ಕೈದಿಗಳಿಗೆ ಪ್ರಚೋದನೆ ನೀಡುತ್ತಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದರೆ ಅಧಿಕಾರಿಗಳು ಅಂಕೋಲಾದ ವ್ಯಕ್ತಿಯೊಬ್ಬನ ಕುರಿತಂತೆ ಕೆಲವೊಂದು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ತಾಲೂಕಿನಿಂದಲೇ ಎಲೆಕ್ಟ್ರಾನಿಕ್‌ ಉಪಕರಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಉಗ್ರ ಸಂಘಟನೆಯನ್ನು ಬಲಪಡಿಸುವ ಕೃತ್ಯಗಳು ದೇಶದಲ್ಲಿ ನಡೆಯುತ್ತಿರುವ ಕುರಿತು ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದು ರಾಜ್ಯದ ಮೂವರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಮಹತ್ವಪೂರ್ಣ ದಾಖಲೆ ಸಂಗ್ರಹಿಸಿದ್ದಾರೆ. ಬೆಂಗಳೂರು, ಮಂಗಳೂರು ಮತ್ತು ಅಂಕೋಲಾ ತಾಲೂಕಿನಲ್ಲಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕವಿರುವ ವ್ಯಕ್ತಿಗಳ ಶೋಧಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ಬೆಂಗಳೂರು ಜೈಲಿನಲ್ಲಿ ಇರುವ ಕೈದಿಗಳಿಗಲ್ಲಿ ಉಗ್ರವಾದದ ಮನೋಭಾವನೆ ಬೆಳೆಸಿ ಆತ್ಮಾಹುತಿ ದಾಳಿಯಂತಹ ಕೃತ್ಯಗಳಿಗೆ ಇಳಿಸುವುದು, ಶಸ್ತ್ರಾಸ್ತ್ರಗಳ ಪೂರೈಕೆ ಮೊದಲಾದ ಪಿತೂರಿ ನಡೆಸಲಾಗುತ್ತಿರುವ ಕುರಿತು ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ್ದಾರೆ. ಇದರ ತನಿಖೆಯ ಜಾಡು ಹಿಡಿದು ಅಂಕೋಲಾಕ್ಕೆ ಆಗಮಿಸಿದ ಎನ್‌ಐಎ ತಂಡ ಪ್ರಕರಣದಲ್ಲಿ ಶಾಮೀಲು ಇರುವ ಅಂಕೋಲಾದ ವ್ಯಕ್ತಿಯ ಕುರಿತು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.ಶಾಂತವಾಗಿದ್ದ ಅಂಕೋಲಾ ತಾಲೂಕಿನಲ್ಲಿಗ ಉಗ್ರ ಸಂಘಟನೆ ಕರಿನೆರಳು ಅಂಟುತ್ತಿರುವುದು ಜನತೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸುತ್ತಿದೆ. ಅಲ್ಲದೆ ಈ ತಾಲೂಕಿನಲ್ಲಿ ಕುಳಿತು ದೇಶದ್ರೋಹಿ ಕೃತ್ಯ ನಡೆಸಲಾಗುತ್ತಿದೆಯೇ ಎನ್ನುವ ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯತೊಡಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ