ಮೂಡುಬಿದಿರೆ: ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗಮನಾರ್ಹ ಸಾಧನೆಯ ಜತೆಗೆ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಮನ ಸೆಳೆಯುವ ಸಾಧನೆ ಮೂಲಕ ಹಲವಾರು ಉನ್ನತ ಶಿಕ್ಷಣದ ಅವಕಾಶಗಳನ್ನು ಪಡೆದವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿ ನಿಶಾಂತ್ ಪಿ.ಹೆಗ್ಡೆ.
ಕಾಲೇಜಿನಲ್ಲಿ ಕೋಚಿಂಗ್ ವಿಭಾಗದ ನಿರ್ದೇಶಕ ಡಾ. ಪ್ರಶಾಂತ್ ಹೆಗ್ಡೆ- ಕೋಮಲ ದಂಪತಿಯ ಪುತ್ರ ನಿಶಾಂತ್ ಎರಡು ವರ್ಷಗಳ ಪಿಯುಸಿ ಕಲಿಕೆಯ ಅವಧಿಯಲ್ಲಿ ಏಕಕಾಲದಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಮೆಡಿಕಲ್ ನೀಟ್ ಹಾಗೂ ತಾಂತ್ರಿಕ ಐಐಟಿ ಶಿಕ್ಷಣದ ಪರೀಕ್ಷೆಯಲ್ಲಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆಯುವ ಅಪರೂಪದ ಸಾಧನೆ ಅವರದ್ದು. ನಿಶಾಂತ್ ಇದೀಗ ತಮ್ಮ ಆಸಕ್ತಿಯ ಇಂಟಿಗ್ರೇಟೆಡ್ ಸರ್ಕ್ಯೂಟ್ ಡಿಸೈನ್ ಟೆಕ್ನಾಲಜಿ ಶಿಕ್ಷಣಕ್ಕಾಗಿ ಗುಜರಾತ್ ಗಾಂಧೀನಗರದ ಐಐಟಿಗೆ ಪ್ರವೇಶ ಪಡೆದಿದ್ದಾರೆ.ಎಸ್ಸೆಸ್ಸೆಲ್ಸಿಯಲ್ಲಿ ಶೇ ೯೯.೫, ಪಿಯುಸಿಯಲ್ಲಿ ಶೇ ೯೫.೧೬ ,ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಐಟಿ ಪ್ರವೇಶ ಪರೀಕ್ಷೆಜೆಇಇ- ಮೈನ್ಸ್ ೧ರಲ್ಲ್ಲಿ ೯೯.೩೨ ಪರ್ಸೆಂಟೈಲ್, ಜೆಇಇ- ಮೈನ್ಸ್ ೨ರಲ್ಲ್ಲಿ ೯೯.೫೫ ಪರ್ಸೆಂಟೈಲ್, ಜೆಇಇ ಮೈನ್ಸ್ ಬಿ ಪ್ಲಾನಿಂಗ್‌ನಲಿ ರಾಷ್ಟ್ರಮಟ್ಟದಲ್ಲಿ ೩೭೮ನೇ ರ‍್ಯಾಂಕ್, ರಾಷ್ಟ್ರೀಯ ನೀಟ್ ಪರೀಕ್ಷೆಯಲ್ಲಿ ೬೮೫ ಅಂಕಗಳು, ಜೆಇಇ ಅಡ್ವಾನ್ಸ್ಡ್ ಜನರಲ್ ಮೆರಿಟ್ ವಿಭಾಗದಲ್ಲಿ ಎಐಆರ್‌ನಲ್ಲಿ ೪೩೪೯ ನೇ ಸ್ಥಾನ, ಐಐಎಸ್‌ಇಆರ್ ಜನರಲ್ ಮೆರಿಟ್‌ನಲ್ಲಿ ಎಐಆರ್-೩೩ ನೇ ಸ್ಥಾನ ಹಾಗೂ ಬಿಟ್‌ಸ್ಯಾಟ್ ಪರೀಕ್ಷೆಯಲ್ಲಿ ೨೮೭ನೇ ಸ್ಥಾನಗಳಿಸಿ ಬಿ.ಟೆಕ್‌ಗೆ ಪಿಲಾನಿಯಲ್ಲಿ ಸೀಟು ಗಳಿಸಿದರು. ಇಂಜಿನಿಯರಿಂಗ್ ಐಐಟಿ ಕಾಲೇಜಿನಲಿ ಐಐಎಸ್‌ಸಿ ಆರ್. ರ‍್ಯಾಂಕ್ ಮೂಲಕ ಮೊದಲ ಸುತ್ತಲ್ಲೇ ಅರ್ಹತೆ, ಬಿಟ್ ಸ್ಯಾಟ್ ನಲ್ಲಿ ೨೮೭ ನೇ ಸ್ಥಾನದೊಂದಿಗೆ ಬಿಟೆಕ್‌ಗೆ ಅರ್ಹತೆ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ೪ ವರ್ಷಗಳ ಬಿಎಸ್‌ಗೆ ಪ್ರಥಮ ಸುತ್ತಿನಲ್ಲೇ ಅರ್ಹತೆ ಗಳಿಸಿದ್ದರು. ಹೀಗೆ ಎಕ್ಸಲೆಂಟ್ ವಿದ್ಯಾರ್ಥಿಯಾಗಿ ಹಲವು ಪ್ರಥಮಗಳ ಸರದಾರನೆನಿಸಿಕೊಂಡಿದ್ದಾರೆ. ಇವರ ಅತ್ಯುನ್ನತ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್ ಅಭಿನಂದಿಸಿದ್ದಾರೆ.