ಪಾರಂಪರಿಕ ತಾಣಕ್ಕೆ ರಾಜ್ಯದ ಅನುದಾನವಿಲ್ಲ: ಶಾಸಕ ಸುರೇಶ್‌ ಆರೋಪ

KannadaprabhaNewsNetwork |  
Published : Jan 27, 2024, 01:15 AM IST
26ಎಚ್ಎಸ್ಎನ್4 : ಬೇಲೂರು ತಾಲ್ಲೂಕು ಆಡಳಿತದಿಂದ ನಡೆದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಯುನೆಸ್ಕೊ ಪಟ್ಟಿಗೆ ಸೇರಿರುವ ಬೆಲೂರು ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಿಂದ ಕಿಂಚಿತ್ತು ಅನುದಾನ ಬಂದಿಲ್ಲ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು. ಬೇಲೂರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾಗಿರುವ ಬೇಲೂರುಕನ್ನಡಪ್ರಭ ವಾರ್ತೆ ಬೇಲೂರು

ಯುನೆಸ್ಕೊ ಪಟ್ಟಿಗೆ ಸೇರಿರುವ ಬೆಲೂರು ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಿಂದ ಕಿಂಚಿತ್ತು ಅನುದಾನ ಬಂದಿಲ್ಲ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಅವರಣದಲ್ಲಿ ನಡೆದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಪಟ್ಟಣದಲ್ಲಿ ಕಿರಿದಾದ ಮುಖ್ಯರಸ್ತೆಯಿಂದ ಟ್ರಾಫಿಕ್ ಉಂಟಾಗುತ್ತಿದೆ. ಪರ್ಯಾಯವಾಗಿ ಹೊಳೆಬೀದಿ ರಸ್ತೆ ಅಗಲೀಕರಣ, ೨೩ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು, ಸಮಪರ್ಕ ಯುಜಿಡಿ, ನೀರಾವರಿಯಿಂದ ವಂಚಿತವಾದ ಗ್ರಾಮಗಳಿಗೆ ಹೆಬ್ಬಾಳು ಏತನೀರಾವರಿ ಯೋಜನೆ ಅನುಷ್ಠಾನ, ರಣಘಟ್ಟ ಯೋಜನೆ ಪೂರ್ಣ, ಯುವಕ ಮತ್ತು ಯುವತಿಯರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ನೀಡಲು ಕೈಗಾರಿಕೆ ಸ್ಥಾಪನೆ, ತೆಂಗಿನ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ, ಬೇಲೂರು ಪಟ್ಟಣಕ್ಕೆ ಹೈಟೆಕ್ ಬಸ್ ನಿಲ್ದಾಣ, ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ, ಕನ್ನಡ ಶಿಲಾ ಶಾಸನ ನೀಡಿದ ಹಲ್ಮಿಡಿ ಗ್ರಾಮಕ್ಕೆ ರಸ್ತೆ ಅಭಿವೃದ್ಧಿ, ಗ್ರಾಮೀಣ ಮಟ್ಟಕ್ಕೆ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯ, ಮುಖ್ಯರಸ್ತೆ ಅಗಲೀಕರಣ, ಆಸ್ಪತ್ರೆಗಳಿಗೆ ಸವಲತ್ತು, ಮಲೆನಾಡು ಭಾಗದಲ್ಲಿ ಕಾಡಾನೆ ಶಾಶ್ವತ ಪರಿಹಾರ, ಆನೆ ಕಾರಿಡಾರ್, ಕಾಫಿ ಬೆಳೆಗಾರರಿಗೆ ಸಂಕಷ್ಟಕ್ಕ ಸ್ಪಂದನೆ, ಮಹಿಳಾ ಸಬಲೀಕರಣ ಹೀಗೆ ಹತ್ತಾರು ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದರು.

ತಹಸೀಲ್ದಾರ್ ಎಂ.ಮಮತ ಮಾತನಾಡಿ, ೭೫ನೇ ವರ್ಷದ ಗಣರಾಜ್ಯೋತ್ಸವ ನಾಡಿನಲ್ಲಿ ವಿಭಿನ್ನ ಬಗೆಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಸಮಾಜದ ಅಸಮಾನತೆ, ನಿರುದ್ಯೋಗ, ಶೋಷಣೆ, ದೌರ್ಜನ್ಯ, ಮೌಢ್ಯತೆ, ಬಡವತನ, ಹಸಿವು ಇನ್ನು ಸವಾಲು ಆಗಿವೆ. ಸಂವಿಧಾನ ಆಶಯಗಳನ್ನು ಯಾಥವತ್ತಾಗಿ ಯುವ ಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕಿದೆ. ದೇಶದಲ್ಲಿ ಎಂದಿಗೂ ಸಂವಿದಾನದ ಆಶೋತ್ತರಗಳನ್ನು ಗೌರವಿಸುವ ಜೊತೆಗೆ ಸಹಭಾಳ್ವೆ, ಸಮಾನತೆ, ಸಾಮರಸ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಭಾರತದ ಪ್ರಜೆಗಳಾದ ನಾವು ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದನೆ ಸಲ್ಲಿಸಲಾಯಿತು.

ರಾಷ್ಟ್ರೀಯ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ, ಇಒ ಸತೀಶ್, ಬಿಇಒ ಕೆ.ಪಿ.ನಾರಾಯಣ್, ಸಿಪಿಐ ಜಯಾರಾಮ್, ಮುಖ್ಯಾಧಿಕಾರಿ ಸುಜಯ್, ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಪುರಸಭಾ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ವರ್ಗ ಹಾಜರಿದ್ದರು. ಬೇಲೂರು ತಾಲೂಕು ಆಡಳಿತದಿಂದ ನಡೆದ ೭೫ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ