ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಸುರಿದ ರಣಭೀಕರ ಮಳೆಗೆ ಉತ್ತರ ಬೆಂಗಳೂರು ತತ್ತರಿಸಿ ಹೋಗಿದ್ದು, ಯಲಹಂಕ, ಮಹದೇವಪುರ, ದಾಸರಹಳ್ಳಿ ಹಲವು ಬಡಾವಣೆಗಳು ಅಕ್ಷರಶಃ ದ್ವೀಪಗಳಂತೆ ಮಾರ್ಪಟ್ಟು ರಸ್ತೆ ಸಂಪರ್ಕ ಕಳೆದುಕೊಂಡು ದೋಣಿಯಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು.ಬೆಂಗಳೂರಿನಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ಸುರಿದ ಮಳೆಯಿಂದ ದೊಡ್ಡ ಬೊಮ್ಮಸಂದ್ರ ಕೆರೆ, ನರಸಾಪುರ ಕೆರೆ, ಯಲಹಂಕ ಕೆರೆ, ಪುಟ್ಟೇನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ರಾಜಕಾಲುವೆಯ ನೀರಿನ ಮಟ್ಟ ಹೆಚ್ಚಾಗಿ ಹೆಬ್ಬಾಳ-ನಾಗವಾರ ಕಣಿವೆಯ ಅಕ್ಕ-ಪಕ್ಕದ ಬಡಾವಣೆಗಳಿಗೆ ನೀರು ನುಗ್ಗಿದೆ.
ಒಟ್ಟಾರೆ ಮಂಗಳವಾರ ಬೆಂಗಳೂರಿನ ಸುಮಾರು 45ಕ್ಕೂ ಅಧಿಕ ಬಡಾವಣೆಗಳು ಮುಳುಗಡೆಯ ಭೀತಿ ಎದುರಿಸಿದ್ದು, ಈ ಪೈಕಿ ಸುಮಾರು 30 ಬಡಾವಣೆಗಳು ಯಲಹಂಕ ಭಾಗದ ಬಡಾವಣೆಗಳಾಗಿವೆ. ಸುಮಾರು ಮೂರು ಅಡಿಗೂ ಅಧಿಕ ಪ್ರಮಾಣ ಮಳೆ ನೀರು ಬಡಾವಣೆಯ ರಸ್ತೆಗಳಲ್ಲಿ ನಿಂತುಕೊಂಡ ಪರಿಣಾಮ ಸಂಪರ್ಕ ಕಳೆದುಕೊಂಡಿದ್ದವು. ಬಡಾವಣೆಗಳಲ್ಲಿ ಜನರು ಓಡಾಟಕ್ಕೆ ದೋಣಿ ಬಳಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮಂಗಳವಾರ ಮಧ್ಯಾಹ್ನದ ವೇಳೆ ಪ್ರವಾಹ ಪರಿಸ್ಥಿತಿ ತಗ್ಗಿತು. ಆದರೆ, ಮತ್ತೆ ಸಂಜೆ ಸುರಿದ ಮಳೆಯಿಂದ ಬಡಾವಣೆಗಳು ಮತ್ತೇ ಜಲಾವೃತಗೊಂಡವು. ಕ್ರಮೇಣ ನೀರಿನ ಪ್ರಮಾಣ ಇಳಿಕೆ ಆಗಿತ್ತು.ಯಲಹಂಕದ ಸುರಭಿ ಲೇಔಟ್‌ನಲ್ಲಿ ಬಿಎಂಟಿಸಿ ಬಸ್ ಸೇರಿದಂತೆ ಆಟೋ, ಕಾರು, ಬೈಕ್ ಸೇರಿದಂತೆ ಮೊದಲಾದ ವಾಹನಗಳು ನಡು ರಸ್ತೆಯಲ್ಲಿಯೇ ಮುಳುಗಡೆಯಾದ ದೃಶ್ಯಗಳು ಕಂಡು ಬಂದವು.
ಬಾಕ್ಸ್...1,100 ಮನೆಗಳಿಗೆ ನುಗ್ಗಿದ ನೀರು
ಮಳೆಯಿಂದ ಯಲಹಂಕ ಭಾಗದ 30 ಬಡಾವಣೆಗಳಲ್ಲಿಯೇ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಉಳಿದಂತೆ ಮಹದೇವಪುರ, ದಾಸರಹಳ್ಳಿ, ಆರ್ ಆರ್ ನಗರದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸೋಮವಾರ ತಡರಾತ್ರಿ ಮಳೆಗೆ 1100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ದೋಣಿ ಬಳಸಿ ಜನರ ಸ್ಥಳಾಂತರಯಲಹಂಕ ಕರೆ ಪಕ್ಕದಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಕೆರೆಯ ಮಟ್ಟಕ್ಕಿಂತ ಕೆಳಗಿದ್ದು, ಕೆರೆ ಕೋಡಿ ಹೊರಹರಿವಿನಿಂದಾಗಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದೆ. ನೀರಿನ ಹರಿವು ಹೆಚ್ಚಿದ್ದ ಪರಿಣಾಮ ಅಪಾರ್ಟ್‌ಮೆಂಟ್ ಹಾಗೂ ರಸ್ತೆ ಸಂಪರ್ಕ ಕಡಿತವಾಗಿತ್ತು. ನಿರಂತರವಾಗಿ ಮಳೆ ಸುರಿದ ನೀರು ನಿಂತುಕೊಂಡಿರುವುದರಿಂದ ಒಂದು ವಾರ ಅಪಾರ್ಟ್‌ಮೆಂಟ್ ಖಾಲಿ ಮಾಡುವಂತೆ ನಿವಾಸಿಗಳಿಗೆ ಸೂಚಿಸಲಾಗಿದೆ.
ಸುಮಾರು 2,500 ಸಾವಿರಕ್ಕೂ ಅಧಿಕ ಮಂದಿ ನಿವಾಸಿಗಳಿದ್ದು, ಅನಾರೋಗ್ಯ ಪೀಡಿತರು, ವೃದ್ದರನ್ನು ಅಗ್ನಿ ಶಾಮದಳ ಮತ್ತು ವಿಪತ್ತು ಪರಿಹಾರ ತಂಡಗಳ ಸಿಬ್ಬಂದಿಯು 16 ದೋಣಿ ಬಳಸಿಕೊಂಡು ಅಪಾರ್ಟ್‌ಮೆಂಟ್ ನಿಂದ ಹೊರಗೆ ಕರೆ ತಂದರು.ಪುಟ್ಟೇನಹಳ್ಳಿ ಕೆರೆ ಪಕ್ಕದ ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್ ನಲ್ಲಿ ನೀರುಗಾಲುವೆ ನೀರು ಹರಿದು ಜಲಾವೃತವಾಗಿದೆ. ನೀರು ಬೇರೆ ಕಡೆ ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲ. ಹೀಗಾಗಿ, ಪ್ರವಾಹ ಪರಿಸ್ಥಿತಿ ಉಂಟಾಗಿ 25 ಮನೆಗಳಿಗೆ ನೀರು ನುಗ್ಗಿತ್ತು. ಸಹಕಾರ ನಗರದ ಚಿತ್ರಕೂಟ ಅಪಾರ್ಟ್ಮೆಂಟ್‌ನ ಕಾಂಪೌಂಡ್ ಕುಸಿದು ರಾಜಕಾಲುವೆಯ ಚರಂಡಿ ನೀರು ಅಪಾಟ್‌ಮೆಂಟ್ ನುಗ್ಗಿತ್ತು. ಪಕ್ಕದ ಕೈಸರ್ ರೆಸಿಡೆನ್ಸಿ ಕೂಡ ಜಲಾವೃತಗೊಂಡಿತ್ತು. ಬಿಬಿಎಂಪಿ ಸಿಬ್ಬಂದಿ ನೀರನ್ನು ಪಂಪ್ ಮೂಲಕ ತೆರವುಗೊಳಿಸಲು ನಿರತರಾಗಿದ್ದರು.
ಯಲಹಂಕ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಸಾಯಿಬಾಬಾ ಲೇಔಟ್ ಮತ್ತು ಗೆದ್ದಲಹಳ್ಳಿ ಬಳಿಯ ವಡ್ಡರಪಾಳ್ಯದಲ್ಲಿ ಹೆಬ್ಬಾಳ ವ್ಯಾಲಿಯಿಂದ ನೀರು ಹಿಮ್ಮುಖವಾಗಿ ಚಲಿಸಿ ಜಲಾವೃತವಾಗಿದೆ. ಬೈರತಿ ಗ್ರಾಮ ಮತ್ತು ಬ್ಲೆಸ್ಸಿಂಗ್ ಗಾರ್ಡನ್ ಪ್ರದೇಶ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿದೆ. ಹಾಲನಾಯಕನಹಳ್ಳಿ ಕೆರೆ ಕೋಡಿ ತುಂಬಿ ರೇನ್ಬೋ ಡ್ರೈವ್ ಅಪಾರ್ಟ್‌ಮೆಂಟ್ ಪ್ರದೇಶ ಹಾಗೂ ಜುನ್ನಸಂದ್ರದಲ್ಲಿ ನೀರು ನುಗ್ಗಿದೆ. ದಾಸರಹಳ್ಳಿ ವಲಯದ ಅಬ್ಬಿಗೆರೆ ಕೆರೆ ಕೋಡಿ ಬಿದ್ದ ಪರಿಣಾಮ ಸಪ್ತಗಿರಿ ಮತ್ತು ನಿಸರ್ಗ ಲೇಔಟ್‌ಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.ಅಟೋ ಮೇಲೆ ಬಿದ್ದ ಮರಮಲ್ಲೇಶ್ವರದಲ್ಲಿ ಸುರಿದ ಮಳೆಯಿಂದ ಬೃಹತ್ ಮರವೊಂದು ಆಟೋ ಬೈಕ್ ಗಳ ಮೇಲೆ ಬಿದ್ದಿದೆ. ಈ ವೇಳೆ ಕೆಲ ವಾಹನಗಳು ನುಜ್ಜುಗುಜ್ಜಾಗಿವೆ. ಆಟೋದಲ್ಲಿ ಒಬ್ಬರು ಮಹಿಳೆ ಹಾಗೂ ಇಬ್ಬರೂ ಪುರುಷರು ಇದ್ದಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.ನೀರು-ಆಹಾರ ವಿತರಣೆ
ಯಲಹಂಕ ವಿಭಾಗದಲ್ಲಿ 1500 (5 ಲೀಟರ್) ನೀರಿನ ಬಾಟಲ್ ಹಾಗೂ ಒಂದು ಸಾವಿರ ತಿಂಡಿ ಪೊಟ್ಟಣ ಹಾಗೂ 3100 ಊಟದ ಪೊಟ್ಟಣ ವಿತರಿಸಲಾಗಿದೆ. ಬ್ಯಾಟರಾಯನಪುರ ವಿಭಾಗದಲ್ಲಿ 2 ಸಾವಿರ ನೀರಿನ ಬಾಟಲ್ ಹಾಗೂ 3500 ಊಟದ ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.ಟಾಟಾನಗರಕ್ಕೆ ಕೃಷ್ಣಬೈರೇಗೌಡ
ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡ ಟಾಟಾ ನಗರಕ್ಕೆ ಸಚಿವ ಕೃಷ್ಟ ಬೈರೇಗೌಡ, ಬಿಬಿಎಂಪಿಯ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.ಬಾಕ್ಸ್...
ಅಬ್ದುಲ್ ಕಲಾಂಕುಟುಂಬಕ್ಕೆ ಸಂಕಷ್ಟ
ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಡಿ.6 ಬ್ಲಾಕ್‌ನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಂಬಂಧಿ ಹಾಗೂ ಅವರ ಮಗಳು ನಾಗು ರೋಜಾ ಎಂಬುವರು ವಾಸವಾಗಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 80 ವರ್ಷ ಆಗಿರುವುದರಿಂದ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.-----
ಈ ಬಡಾವಣೆಗಳಲ್ಲಿ ಪ್ರವಾಹಯಲಹಂಕದ ಭಾಗದ ವೆಂಕಟಸ್ವಾಮಪ್ಪ ಲೇಔಟ್, ಯರ್ರಪ್ಪ ಗಾರ್ಡನ್, ಎಂಎಸ್ ಪಾಳ್ಯ, ಸಪ್ತಗಿರಿ ಲೇಔಟ್, ಬಸವ ಸಮಿತಿ, ಎಂಸಿಇಎಚ್‌ಎಸ್ ಲೇಔಟ್, ಶಬರಿನಗರ, ಹೆಗಡೆ ನಗರ, ದ್ವಾರಕನಗರ, ಟಾಟಾನಗರ, ಭದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಕೊರಪ್ಪ ಗಾರ್ಡನ್, ಸುರಭಿ ಲೇಔಟ್, ಕೊಂಡಪ್ಪ ಗಾರ್ಡನ್, ಕೊಂಡಪ್ಪ ಲೇಔಟ್, ಚಿತ್ರಾ ಲೇಔಟ್, ಆಟ್ಟೂರು, ಚಿಕ್ಕ ಬೆಟ್ಟಹಳ್ಳಿ, ಸೋಮೇಶ್ವರ ನಗರ ಮುಖ್ಯ ರಸ್ತೆ, ಚಿಕ್ಕಬೊಮ್ಮಸಂದ್ರ, ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ, ಟಾಟಾ ಇನ್‌ಸ್ಟಿಟ್ಯೂಟ್ ಬಾರ್ಡರ್, ಹೊಯ್ಸಳ ಗ್ರೌಂಡ್ ಶಾರದ ನಗರ, ಉದಯ ಲೇಔಟ್, ಎಲ್‌ಬಿಎಸ್ ನಗರ, ಶಾರದಾ ನಗರ ಆರ್ಚ್, ಅಂಬೇಡ್ಕರ್ ಕಾಲೋನಿ, ಅಗರವಾಲ್ ಹಾಸ್ಟಿಟಲ್ ಹಿಂಭಾಗ, ನಂಜಪ್ಪ ಲೇಔಟ್. ಮಹದೇವಪುರದ ಸಾಯಿ ಬಾಬಾ ಲೇಔಟ್, ವಡ್ಡರ ಪಾಳ್ಯ, ಹೊರಮಾವು, ಮಾರತಹಳ್ಳಿ, ಆರ್.ಬಿ.ಡೈ ರೈಂಬೋ, ಕೊತ್ತನೂರು-ಬಾಲಾಜಿ ಲೇಔಟ್, ವಿಪ್ರೋ ಪ್ರದೇಶ- ಸರ್ಜಾಪುರ ರಸ್ತೆ. ದಾಸರಹಳ್ಳಿಯ ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಪಾರ್ವತಿ ಲೇಔಟ್, ಮಿತ್ರಾ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಬೆಲ್‌ಮಾರ್ಗ್ ಲೇಔಟ್.
---ಚೌಡೇಶ್ವರಿನಗರಕ್ಕೆ
160 ಮಿ.ಮೀ. ಮಳೆ!ಯಲಹಂಕ, ಮಹದೇವಪುರ, ದಾಸರಹಳ್ಳಿ ಭಾಗದಲ್ಲಿ ಕಳೆದ ಮೂರು ದಿನ ಭಾರೀ ಮಳೆಯಾಗಿದ್ದರಿಂದ ಕೆರೆಗಳೆಲ್ಲವು ತುಂಬಿ ಕೋಡಿ ಬಿದ್ದು, ಹೆಚ್ಚಿನ ಪ್ರಮಾಣ ನೀರು ರಾಜಕಾಲುವೆಗಳಿಗೆ ಬರುತ್ತಿರುವ ಕಾರಣ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚೌಡೇಶ್ವರಿ ನಗರದಲ್ಲಿ 160ಮಿ.ಮೀ ಮಳೆಯಾಗಿದ್ದು, ಚೌಡೇಶ್ವರಿ ನಗರದ ಇತಿಹಾಸದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.--- ಬಾಕ್ಸ್--
ಹಂಪಿನಗರದಲ್ಲಿ ಅತೀಹೆಚ್ಚು 6.30 ಸೆಂ.ಮೀ.
ಮಂಗಳವಾರ ನಗರದ ಹಂಪಿನಗರದಲ್ಲಿ ಅತಿ ಹೆಚ್ಚು 6.3 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಮಾರುತಿ ಮಂದಿರ 5.7, ಕೆಂಗೇರಿ 5.2, ಆರ್‌ಆರ್‌ನಗರ 5.1, ಹಗದೂರು 4.9, ಬಸವೇಶ್ವರ ನಗರ 4.1, ಕಾಡುಗೂಡಿ 4, ಈಸ್ಟ್ ಬಾಣಸವಾಡಿ ಹಾಗೂ ವಿ ನಾಗೇನಹಳ್ಳಿಯಲ್ಲಿ ತಲಾ 3.7, ಬಾಗಲಗುಂಟೆ 3.6, ನಾಗಪುರ ಹಾಗೂ ರಾಮಮೂರ್ತಿ ನಗರದಲ್ಲಿ ತಲಾ 3.4, ರಾಜಾಜಿನಗರ 3.1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.---
ತಡರಾತ್ರಿ ಆರು ತಾಸಿನಲ್ಲಿಭಾರೀ ಪ್ರಮಾಣದ ಮಳೆ
ಸೋಮವಾರ ಮಧ್ಯರಾತ್ರಿ 12ರಿಂದ ಮಂಗಳವಾರ ಬೆಳಗ್ಗೆ 6ರವರೆಗೆ ಕೇವಲ 6 ತಾಸಲ್ಲಿ ನಗರದಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಅದರಲ್ಲಿ ಅತೀ ಹೆಚ್ಚು ಚೌಡೇಶ್ವರಿಯಲ್ಲಿ 15.7 ಸೆಂ.ಮೀ ಮಳೆಯಾಗಿದೆ. ವಿದ್ಯಾರಣ್ಯಪುರದಲ್ಲಿ 10.9, ಜಕ್ಕೂರು 9.8, ಕೊಡಿಗೇಹಳ್ಳಿಯಲ್ಲಿ 7.2, ಹೊರಮಾವು 7.3, ಶೆಟ್ಟಿಹಳ್ಳಿಯಲ್ಲಿ 6.6, ಬಾಗಲಗುಂಟೆ 5.6, ಪೀಣ್ಯ 4 ಸೆಂ.ಮೀ ಮಳೆಯಾಗಿದೆ.