ರಾಮನಗರ: ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ)ಅನುಷ್ಠಾನ ಮಾಡುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಕೆಯಾದ ಸಾಮಗ್ರಿಗಳಿಗೆ ಭರಿಸಬೇಕಾದ 43.61 ಕೋಟಿ ರು.ಗಳನ್ನು ಕಳೆದ 10 ತಿಂಗಳಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿವೆ.
ಬರ ಪರಿಹಾರ ಕಾಮಗಾರಿ ನಡೆಯಬೇಕು, ಗುಳೆ ಹೋಗದಂತೆ ಗ್ರಾಮೀಣರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಬೇಕು, ಜಲಸಂರಕ್ಷಣೆ ಮಾಡಬೇಕೆಂದೆಲ್ಲ ಹೇಳುವ ಸರ್ಕಾರ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಗ್ರಿ ವೆಚ್ಚ ಬಿಡುಗಡೆ ಮಾಡದಿರುವುದು ಯೋಜನೆ ಪ್ರಗತಿ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ.ಜಿಲ್ಲೆಯ ನಾಲ್ಕು ತಾಲೂಕುಗಳ 126 ಗ್ರಾಮ ಪಂಚಾಯಿತಿಗಳಿಗೆ ನರೇಗಾದಲ್ಲಿ ಒಟ್ಟಾರೆ ಪಾವತಿಸಬೇಕಿದ್ದ ಸಾಮಗ್ರಿ ವೆಚ್ಚವೇ 43.61 ಕೋಟಿ ರು. ಬಾಕಿ ಉಳಿದಿದೆ. ಇದರಲ್ಲಿ ಕುಶಲ ಬಾಬ್ತು - 26.3 ಲಕ್ಷ , ಸಾಮಗ್ರಿ ಬಾಬ್ತು - 3990.08 ಲಕ್ಷ ಹಾಗೂ ತೆರಿಗೆ 191.68 ಲಕ್ಷ ರು.ಸೇರಿದೆ.
ಸಾಮಗ್ರಿ ವೆಚ್ಚದಲ್ಲಿ ಕುಶಲ ಕಾರ್ಮಿಕರ ಕೂಲಿ, ಯಂತ್ರಗಳ ಬಾಡಿಗೆ, ಸಾಮಗ್ರಿಗೆ ತಗಲುವ ವೆಚ್ಚ ಒಳಗೊಂಡಿರುತ್ತದೆ. ಒಟ್ಟು ಸಾಮಗ್ರಿ ಅನುದಾನದಲ್ಲಿ ಕೇಂದ್ರ ಸರ್ಕಾರ ಶೇ. 75 ಮತ್ತು ರಾಜ್ಯ ಸರ್ಕಾರ ಶೇ. 25ರಷ್ಟು ಹಣ ಭರಿಸಬೇಕಿರುತ್ತದೆ.ಯಾವ್ಯಾವ ಕಾಮಗಾರಿಗಳು ?
ಕಿರು ಮತ್ತು ಸಣ್ಣ ನೀರಾವರಿ ಕಾಮಗಾರಿ, ಕೆರೆಗಳ ಹೂಳು ತೆಗೆಯುವುದು, ಸರ್ವಋತು ಗ್ರಾಮೀಣ ರಸ್ತೆ, ಗೋದಾಮು, ಅಂಗನವಾಡಿ ಕೇಂದ್ರ ನಿರ್ಮಾಣ, ಕೊಟ್ಟಿಗೆ, ಧಾನ್ಯಗಳ ಒಕ್ಕಣೆ ಕಣ, ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಸೇರಿದಂತೆ ಮುಖ್ಯಮಂತ್ರಿಗಳ 21 ಅಂಶಗಳ ಕಾಮಗಾರಿಗಳ ಜತೆಗೆ ಇನ್ನಿತರೆ ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ ಸರಬರಾಜುದಾರರು ಸಾಮಗ್ರಿ ಪೂರೈಸಿದ್ದರು.ಇದ್ದಬದ್ದ ಹಣವನ್ನು ಸಾಮಗ್ರಿಗಳ ಮೇಲೆ ವಿನಿಯೋಗಿಸಿರುವ ಸರಬರಾಜುದಾರರು, ಸಾಮಾಗ್ರಿ ಬಾಬ್ತುವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಇವರೆಲ್ಲರೂ ಹೊಸದಾಗಿ ಅನುಷ್ಠಾನವಾಗುವ ಕಾಮಗಾರಿಗಳಿಗೆ ಸಾಮಗ್ರಿ ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ದಿನನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ.
ಬರ ಹಿನ್ನೆಲೆಯಲ್ಲಿ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸುವ ಮೂಲಕ ವಲಸೆ ಹೋಗದಂತೆ ತಡೆಯುವಂತೆ ಸರ್ಕಾರ ನಿರಂತರವಾಗಿ ಸೂಚನೆ, ಮಾರ್ಗದರ್ಶನ ನೀಡುತ್ತಿದೆಯೇ ವಿನಾ ಸಾಮಗ್ರಿ ಬಾಬ್ತು ನೀಡಲು ಅನುದಾನ ಬಿಡುಗಡೆ ಮಾಡದೇ ನಾಳೆಯ ನೆಪ ಹೇಳುತ್ತಿರುವುದು ಸರಬರಾಜುದಾರರ ಆಕ್ರೋಶಕ್ಕೂ ಕಾರಣವಾಗಿದೆ.ಗ್ರಾಮ ಪಂಚಾಯಿತಿಗಳು ಅನುದಾನ ಬಳಕೆಗೆ ಹಿಂದೆ ಬಿದ್ದಿಲ್ಲ. ಆದರೆ, 10 ತಿಂಗಳಿಂದ ಸಾಮಗ್ರಿ ವೆಚ್ಚ ಪಾವತಿ ಮಾಡದೆ ತಡೆ ಹಿಡಿದಿರುವುದು ಎಲ್ಲಾ ಜಿಲ್ಲೆಗಳಲ್ಲು ಕಗ್ಗಂಟಾಗಿದೆ. ಗ್ರಾಪಂಗಳಲ್ಲಿ ಕಲಹ ಹೆಚ್ಚಾಗುತ್ತಿದ್ದು, ಇದರ ಸ್ವರೂಪ ಪ್ರತಿಭಟನೆ ರೂಪದಲ್ಲಿ ಗೋಚರಿಸುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಕಾರಿಗಳು ಕಚೇರಿಗೆ ಹೋಗಲು ಮೀನಾಮೇಷ ಎಣಿಸುವಂತಾಗಿದೆ. ಹೊಸದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರ ಜಿಲ್ಲೆಗಳಿಗೆ ನೀಡಿದ್ದ ಗುರಿಯನ್ನು ಇತ್ತೀಚೆಗೆ ಪರಿಷ್ಕರಿಸಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪ್ರಗತಿಗಾಗಿ ಪಿಡಿಓಗಳ ಬೆನ್ನಹತ್ತಿದ್ದಾರೆ. ಗುರಿ ತಲುಪದಿದ್ದರೆ ಶಿಸ್ತುಕ್ರಮ ಜರುಗಿಸುವ ಅಸ್ತ್ರ ಬಳಸುತ್ತಿದ್ದಾರೆ. ಇದರಿಂದಾಗಿ ಪಿಡಿಒಗಳ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬ ಇಕ್ಕಳದಲ್ಲಿ ಸಿಲುಕಿದಂತಾಗಿದೆ.ಬಾಕ್ಸ್ ..............
ಎಲ್ಲಿ ಎಷ್ಟು ಬಾಕಿ?ಸಾಮಗ್ರಿ ವೆಚ್ಚ ಬಾಕಿ ಇರುವುದರಲ್ಲಿ ಕನಕಪುರ ತಾಲೂಕು ಮುಂಚೂಣಿಯಲ್ಲಿದೆ. ಒಟ್ಟು 1971.63 ಲಕ್ಷ ಬಾಕಿ ಇದ್ದರೆ, ಅತಿ ಕಡಿಮೆ ರಾಮನಗರ ತಾಲೂಕು 493.92 ಲಕ್ಷ ರು.ಬಾಕಿ ಇದೆ. ಉಳಿದಂತೆ ಚನ್ನಪಟ್ಟಣ ತಾಲೂಕು - 1115.88 ಹಾಗೂ ಮಾಗಡಿ ತಾಲೂಕು - 779.6 ಲಕ್ಷ ರು.ಗಳಷ್ಟು ಸಾಮಗ್ರಿ ವೆಚ್ಚ ಬಾಕಿ ಉಳಿದಿದೆ.
ಈ ಸಾಮಗ್ರಿ ವೆಚ್ಚದ ಮೊತ್ತ ಭರಿಸದಿರುವುದರಿಂದ ಪಂಚಾಯಿತಿಗಳಲ್ಲಿ ತಿಕ್ಕಾಟ ಶುರುವಾಗಿದೆ. ಲಕ್ಷಾಂತರ ರುಪಾಯಿ ಕೆಲಸಕ್ಕೆ ಕೆಲವರು ಕೈಯಿಂದ ಹಣ ಹಾಕಿದ್ದು, ಬಿಲ್ ಪಾವತಿ ತಡ ಆಗುತ್ತಿರುವುದರಿಂದ ಆಕ್ರೋಶಿತರಾಗುತ್ತಿದ್ದಾರೆ. ಹಲವು ಪಂಚಾಯಿತಿಗಳಲ್ಲಿ ಸರಬರಾಜುದಾರರು ಮತ್ತು ಅಧಿಕಾರಿಗಳ ನಡುವೆ ತಿಕ್ಕಾಟ ಸಾಮಾನ್ಯವಾಗಿದೆ.ಬಾಕ್ಸ್ ..............
ನರೇಗಾ ಹಿನ್ನಡೆಯಾಗುವ ಸಾಧ್ಯತೆ:ತೀವ್ರವಾಗಿ ಕಾಡುತ್ತಿರುವ ಬರದ ಬೇಗೆಯಿಂದ ಗ್ರಾಮೀಣ ಭಾಗದ ಕೃಷಿ ಕೂಲಿಕಾರ್ಮಿಕರು ಗುಳೇ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಅವರನ್ನು ಗುಳೇ ಹೋಗದಂತೆ ತಡೆದು, ಅವರಿರುವ ಜಾಗದಲ್ಲೇ ಉದ್ಯೋಗ ಸೃಷ್ಟಿಸಲು ಈ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಮಾಡುತ್ತಿರುವ ಯತ್ನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ಅಡ್ಡಿಯಾಗಿದೆ. ಯೋಜನೆಯಡಿ ಕೈಗೊಳ್ಳುವ ಕೆಲಸಗಳಿಗೆ ಸಾಮಗ್ರಿ ಪೂರೈಸಿದವರಿಗೆ ಸಕಾಲದಲ್ಲಿ ಹಣವನ್ನು ನೀಡಲಾಗುತ್ತಿಲ್ಲ. ಹೀಗಾಗಿ, ಮುಂಬರುವ ದಿನಗಳಲ್ಲಿ ಯೋಜನೆಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಕೋಟ್ ..............ಗ್ರಾಮ ಪಂಚಾಯಿತಿ ಹಾಗೂ ಅನುಷ್ಠಾನ ಇಲಾಖೆಗಳಲ್ಲಿನ ಬಾಕಿ ಸಾಮಗ್ರಿ ವೆಚ್ಚಕ್ಕೆ ಎಫ್ ಟಿಒ ಸೃಜಿಸುವ ಮುನ್ನ, ಶೇಕಡ 100ರಷ್ಟು ಭೌತಿಕವಾಗಿ ಕಾಮಗಾರಿಗಳ ಸ್ಥಳ ಪರಿಶೀಲನೆ ಹಾಗೂ ನಿಯಮಾನುಸಾರ ಕಡತ ನಿರ್ವಹಣೆ ಆಗಿರುವುದನ್ನು ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಸಾಮಗ್ರಿ ಎಫ್ ಟಿಒ ಸೃಜಿಸಲು ಅನುಮತಿ ನೀಡಲಾಗುವುದು.
-ದಿಗ್ವಿಜಯ್ ಬೋಡ್ಕೆ, ಸಿಇಒ, ಜಿಪಂ, ರಾಮನಗರ.ಬಾಕ್ಸ್.......
ತಾಲೂಕ.ಕೂಲಿ ವೆಚ್.
ಕುಶಲ ಬಾಬ್ತ.ಸಾಮಗ್ರಿ ಬಾಬ್ತ.
ತೆರಿಗೆ ಒಟ್ಟು ಚನ್ನಪಟ್ಟ.37.6.
10.2.1015.6.
52.3.1115.88ಕನಕಪು.
54.6.9.5.
1824.3.83.0.
1971.63ಮಾಗಡ.49.2.
3.6.691.1.
35.6.779.6ರಾಮನಗ.
11.4.2.9.
458..20.6.
493.92----------------------------------------------------------------------------------------------------------- ಒಟ್ಟ.152.9.
26..3990.0.
191.6.4361.02-----------------------------------------------------------------------------------------------------------11ಕೆಆರ್ ಎಂ ಎನ್ 4.ಜೆಪಿಜಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಲೋಗೋ