ಓಬವ್ವಳ ಸಾಹಸ, ಸಮಯಪ್ರಜ್ಞೆ ಮಾದರಿ

KannadaprabhaNewsNetwork |  
Published : Nov 11, 2024, 11:48 PM ISTUpdated : Nov 11, 2024, 11:49 PM IST
11ಡಿಡಬ್ಲೂಡಿ2ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ಒನಕೆ ಓಬವ್ವ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಓಬವ್ವಳು, ಯಾವುದೇ ಒಂದು ಸಮಾಜಕ್ಕೆ ಮಾತ್ರ ಸಿಮೀತವಾಗಿಲ್ಲ. ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಮಕ್ಕಳಿಗೆ ಈ ಧೀಮಂತ ಮಹಿಳೆಯ ಬಗ್ಗೆ ತಿಳಿಸಬೇಕು.

ಧಾರವಾಡ:

ಒನಕೆ ಓಬವ್ವ 18ನೇ ಶತಮಾನದಲ್ಲಿ ಸಾಮಾನ್ಯ ಮಹಿಳೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ತನ್ನ ಜೀವನ ಪ್ರಾರಂಭಿಸಿದಳು. ರಾಜರು ತಮ್ಮ ಸೇನಾ ಬಲದಿಂದ ತಮ್ಮ ಸಾಮ್ರಾಜ್ಯವನ್ನು ಕಟ್ಟುವ ಕಾಲದಲ್ಲಿ ಒನಕೆ ಓಬವ್ವಳು ರಾಜ್ಯ ರಕ್ಷಣೆ ಮತ್ತು ರಾಜ್ಯಕ್ಕೆ ನಿಷ್ಠಳಾಗಿ ತೋರಿದ ಧೈರ್ಯ ಮತ್ತು ಸಾಹಸಗಳು ಸ್ತ್ರಿ ಕುಲಕ್ಕೆ ಅತ್ಯಂತ ಅಭಿಮಾನ, ಗೌರವ ತಂದುಕೊಟ್ಟಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಹೇಳಿದರು.

ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ಒನಕೆ ಓಬವ್ವ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿದ ಅವರು, ಓಬವ್ವಳು, ಯಾವುದೇ ಒಂದು ಸಮಾಜಕ್ಕೆ ಮಾತ್ರ ಸಿಮೀತವಾಗಿಲ್ಲ. ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಮಕ್ಕಳಿಗೆ ಈ ಧೀಮಂತ ಮಹಿಳೆಯ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ನಾಮಕರಣ ಮಾಡಿ, ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ. ಒಬ್ಬವ ಒಬ್ಬ ಕೋಟೆ ಕಾವಲುಗಾರನ ಹೆಂಡತಿಯಾಗಿ, ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಹೋರಾಡಿ, ಮಹಿಳೆಯರ ಸಾಧನೆಗೆ ಪ್ರೇರಕಳಾಗಿದ್ದಾಳೆ. ಅವಳ ಗುಣ, ಸಾಹಸಗಳು ನಮಗೆಲ್ಲ ಮಾದರಿ ಆಗಿವೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಕವಿವಿಯ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಜಿ. ಛಲವಾದಿ, ಒನಕೆ ಓಬವ್ವನ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಮಾಜದ ಮುಖಂಡ ಯಲ್ಲಪ್ಪ ಮಂಟೂರು, ದೇವಾನಂದ ರತ್ನಾಕರ, ರವಿ ಸಾಂಬ್ರಾಣಿ ಹಾಗೂ ಇಂದುಮತಿ ಶಿರಗಾಂವಿ ಇದ್ದರು. ಕುಮಾರ ಬೆಕ್ಕೇರಿ ಪರಿಚಯಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು