ಕನ್ನಡಪ್ರಭ ವಾರ್ತೆ ಕೆಜಿಎಫ್
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ೬೦ ಕೋಟಿ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ೪೦ ಕೋಟಿ ರು.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಬೀರನಕುಪ್ಪ ಬಳಿ ನೂತನವಾಗಿ ನಿರ್ಮಿಸಿರುವ ಎಸ್‌ಎಆರ್ ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟಿಸಿ ಮಾತನಾಡಿ, ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾದ ಬಳಿಕ ತಾವು ಕೆಜಿಎಫ್ ಮತ್ತು ಕೋಲಾರ ಕ್ಷೇತ್ರ ಒಟ್ಟು ಸುಮಾರು ೧೦೦ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಈಗಾಗಲೇ ಡಿಪಿಎಆರ್ ಸಹ ಮುಗಿದಿದೆ. ಸದ್ಯದಲ್ಲಿಯೇ ಶಾಸಕಿ ರೂಪಕಲಾ ಶಶಿಧರ್‌ರೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಮುನಿಸ್ವಾಮಿಗೆ ಬುದ್ಧಿಭ್ರಮಣೆನಮ್ಮ ಮನೆ ಮುಂದೆ ಇರುವ ರಸ್ತೆ ನನ್ನ ಸ್ವಂತ ಜಾಗವಾಗಿದ್ದು, ಸಾರ್ವಜನಿಕರು ಓಡಾಟ ನಡೆಸಲು ನಾನೇ ರಸ್ತೆ ಮಾಡಿಸಿದ್ದೇನೆ ಮತ್ತು ಅದು ಸಣ್ಣ ರಸ್ತೆಯಾಗಿದೆಯೇ ಹೊರತು ಮುಖ್ಯ ರಸ್ಯೆಯಲ್ಲ. ಆ ರಸ್ತೆಯಲ್ಲಿ ಹೆಚ್ಚಾಗಿ ಸಾರ್ವಜನಿಕರು ಯಾರೂ ಓಡಾಟ ಮಾಡುತ್ತಿಲ್ಲ. ಈಗ ನಮ್ಮ ಮನೆಯ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ಮಣ್ಣು ಹಾಕಲಾಗಿದೆ. ಯಾವುದೇ ಬ್ಯಾರಿಕೇಡ್ ಹಾಕಿಲ್ಲ ಮತ್ತು ಅಲ್ಲಿನ ನಿವಾಸಿಗಳು ಯಾರೂ ತಮಗೆ ತೊಂದರೆಯಾಗಿದೆ ಎಂದು ದೂರು ನೀಡದೇ ಇದ್ದರೂ ಸಂಸದ ಎಸ್. ಮುನಿಸ್ವಾಮಿ ಸುಖಾಸುಮ್ಮನೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ, ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅಮ್ಯೂಸ್‌ಮೆಂಟ್ ಪಾರ್ಕ್ನಮ್ಮ ಜಿಲ್ಲೆಯಲ್ಲಿ ಎಲ್ಲಿಯೂ ಅಮ್ಯೂಸ್‌ಮೆಂಟ್ ಪಾರ್ಕ್ ಇದುವರೆಗೆ ಸ್ಥಾಪನೆಯಾಗಿಲ್ಲ. ಎಸ್‌ಎಆರ್ ಫ್ಯಾಂಟಸಿ ಅಮ್ಯೂಸ್‌ಮೆಂಟ್ ಪಾರ್ಕ್ ಈಗ ಸ್ಥಾಪನೆಯಾಗಿದ್ದು, ಜಿಲ್ಲೆಯ ಜನರಿಗೆ ಉತ್ತಮ ಮನರಂಜನಾ ತಾಣವಾಗಲಿದೆ. ಬಂಗಾರಪೇಟೆ ಕಾಂಗ್ರೆಸ್ ಮುಖಂಡರಾಗಿರುವ ಅಫ್ತಾಬ್ ಹುಸೇನ್ ಪಾರ್ಕ್‌ನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಹೆಸರು ಪಡೆಯಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಜೈನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಲಾರೆನ್ಸ್, ನಗರಸಭೆ ಸದಸ್ಯ ಸಾಧಿಕ್ ಮಹೇಂದರ್, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕಿರಣ್‌ಕುಮಾರ ಇದ್ದರು.