ರಂಗಭೂಮಿಯಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು

KannadaprabhaNewsNetwork |  
Published : Nov 08, 2025, 01:03 AM IST
ಪೋಟೋ, 7ಎಚ್‌ಎಸ್‌ಡಿ3: ಸಾಣೇಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶಿವಕುಮಾರ ಪ್ರಶಸ್ತಿಯನ್ನು ರಂಗಭೂಮಿಯ ಹಿರಿಯ ಕಲಾವಿದೆ ಉಮಾಶ್ರೀ ಅವರಿಗೆ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸಾಣೇಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶಿವಕುಮಾರ ಪ್ರಶಸ್ತಿಯನ್ನು ರಂಗಭೂಮಿಯ ಹಿರಿಯ ಕಲಾವಿದೆ ಉಮಾಶ್ರೀ ಅವರಿಗೆ ನೀಡಿ ಗೌರವಿಸಲಾಯಿತು.

ಕನ್ನಡಪ್ರಭವಾರ್ತೆ ಹೊಸದುರ್ಗ

ರಂಗಭೂಮಿಯಲ್ಲಿ ದುಡಿಯುವುದು ಒಂದು ಕಾಯಕ ಇಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ರಂಗಭೂಮಿಯ ಹಿರಿಯ ಕಲಾವಿದೆ ನಟಿ ಉಮಾಶ್ರೀ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶ್ರೀ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶಿವಕುಮಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಿಜಿಕೆ ನನ್ನ ನೆಚ್ಚಿನ ಗುರುಗಳು ಅವರ ಸ್ಮರಣೆ ಅಗತ್ಯವಿದೆ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯಲ್ಲಿ ಅನೇಕ ನಿರ್ದೇಶಕರುಗಳು ನನ್ನನು ತಿದ್ದಿ ತೀಡಿ ಮೂರ್ತೀಯನ್ನಾಗಿ ಮಾಡಿದ್ದಾರೆ. ಈ ಶಿವಕುಮಾರ ಪ್ರಶಸ್ತಿಯನ್ನು ಎಲ್ಲಾ ನಿರ್ದೇಶಕರುಗಳಿಗೆ ಅರ್ಪಿಸುತ್ತೇನೆ ಎಂದರು.

ರಂಗ ಚಟುವಟಿಕೆಗಳ ಬಗ್ಗೆ ಶ್ರೀಗಳಿಗೆ ಇರುವ ಮಮಕಾರ ವರ್ಣಿಸಲಾಗದು. ವೃತ್ತಿ ರಂಗಭೂಮಿಯೂ ನನ್ನ ಬೆಳವಣಿಗೆಗೆ ಸಹಕರಿಸಿದೆ. ನಾನು ಕೂಡ ನನ್ನ ಶಾಸಕರ ನಿಧಿಯಿಂದ ದತ್ತಿ ನಿಧಿಗೆ 5 ಲಕ್ಷ ನೀಡುತ್ತೇನೆ . ಯಾವುದೇ ಜಿಲ್ಲೆಯಲ್ಲಿ ನನ್ನ ಏಕಪಾತ್ರಾಭಿಯನದ ಶರ್ಮಿಷ್ಠ ನಾಟಕ ಅಭಿನಯಿಸಿ ಅದರಿಂದ ಬರುವ ಹಣವನ್ನು ಇಲ್ಲಿನ ಧತ್ತಿ ನಿಧಿಗೆ ನೀಡುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಮಾತನಾಡಿ, ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು ಆದರೆ ಬೆಳಗಾವಿಯಲ್ಲಿ ರೈತರ ಹೋರಾಟದ ಹಿನ್ನಲೆಯಲ್ಲಿ ಇಲ್ಲಿಗೆ ಬರಲಾಗದಿದ್ದಕ್ಕೆ ಅವರು ವಿಷಾದ ವ್ಯಕ್ತಿ ಪಡಿಸಿದ್ದಾರೆ. ಪ್ರಪಂಚದಲ್ಲಿ ರಕ್ತದ ಕಲೆ ಕಡಿಮೆಯಾಗಬೇಕದಾರೆ ನಾಟಕ ಕಲೆ ಹೆಚ್ಚಾಗಬೇಕಿದೆ. ರಂಗ ಕಲಾವಿದರಿಗೆ ಬೇಕಾದ ಪ್ರೋತ್ಸಾಹದ ದತ್ತಿ ನಿಧಿಗೆ ವೈಯಕ್ತಿಕವಾಗಿ 5 ಲಕ್ಷ ಡಿಸಿಸಿ ಬ್ಯಾಂಕಿನಿಂದ 5 ಲಕ್ಷ ಹಣ ನೀಡುವುದಾಗಿ ಹೇಳಿದರು.

ಶಾಸಕ ಬಿಜಿ ಗೋವಿಂದಪ್ಪ ಮಾತನಾಡಿ ಕಣ್ಮರೆಯಾಗಿರುವ ಮೌಲ್ಯ, ನೈತಿಕತೆ, ಸಂಸ್ಕಾರವನ್ನು ನಾಟಕೋತ್ಸವ ಹಾಗೂ ಮತ್ತೆ ಕಲ್ಯಾಣದ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ಸಾಣೇಹಳ್ಳಿ ಶ್ರೀಗಳು ಮಾಡುತ್ತಿದ್ದಾರೆ . ಶಿವ ಸಂಚಾರದ ಕಲಾವಿದರ ಭತ್ಯೆ ನೀಡಲು 3 ಕೋಟಿ ದತ್ತಿನಿಧಿ ಇಡಲು ಶ್ರೀಗಳು ನಿರ್ದರಿಸಿದ್ದು ಇದಕ್ಕಾಗಿ ವೈಯಕ್ತಿಕವಾಗಿ 5 ಲಕ್ಷ ಹಣವನ್ನು ನೀಡುವುದಾಗಿ ತಿಳಿಸಿದರು.

ಅತಿಥಿಗಳಾಗಿ ಶಾಸಕರುಗಳಾದ ಯು ಬಿ ಬಣಕಾರ್‌, ಟಿ ರಘುಮೂರ್ತಿ, ಜಿ ಎಚ್‌ ಶ್ರೀನಿವಾಸ್‌, ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ, ಪತ್ರಕರ್ತ ಸಿದ್ದು ಯಾಪಲಪರವಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ , ಗ್ಯಾರೆಂಟಿ ಯೋಜನೆ ಜಿಲ್ಲಾಅಧ್ಯಕ್ಷ ಶಿವಣ್ಣ ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ನಂತರ ಪಂಡಿತಾರಾಧ್ಯ ಸ್ವಾಮೀಜಿ ರಚಿಸಿರುವ ವೈ ಡಿ ಬದಾಮಿ ನಿರ್ದೇಶಿಸಿರುವ ಶಿವಯೋಗಿ ಸಿದ್ದರಾಮೇಶ್ವರ ನಾಟಕವನ್ನು ಶಿವಸಂಚಾರ -25ರ ಕಲಾವಿದರು ಅಭಿನಯಿಸಿದರು.

ಬಾಕ್ಸ್‌: ಶಿವಕುಮಾರ ಕಲಾಸಂಘದಿಂದ ಪ್ರತಿವರ್ಷ ನೀಡುವ ಶಿವಕುಮಾರ ಪ್ರಶಸ್ತಿಯನ್ನು ಈ ಬಾರಿ ಬೆಂಗಳೂರಿನ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ ರಂಗಭೂಮಿಯ ಹಿರಿಯ ಕಲಾವಿದೆ ಉಮಾಶ್ರೀ ಅವರಿಗೆ ನೀಡಿ ಗೌರವಿಸಲಾಯಿತು.

2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ಶ್ರೀ ಶಿವಕುಮಾರ ಪ್ರಶಸ್ತಿ ಯನ್ನು ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಿಗೆ ಲಿಂಗಭೇದವಿಲ್ಲದೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ..ಪ್ರಶಸ್ತಿಯು 50 ಸಾವಿರ ನಗದು ಹಾಗೂ ಪರಿತೋಷಕ ಒಳಗೊಂಡಿದೆ.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ