ರಾಜ್ಯದ ಮುಖ್ಯಮಂತ್ರಿ ಕುರ್ಚಿ ಕಸರತ್ತು ಬಗ್ಗೆ ಕೋಡಿಮಠದ ಶಿವಾನಂದ ಸ್ವಾಮೀಜಿ ಭವಿಷ್ಯ

KannadaprabhaNewsNetwork |  
Published : Mar 03, 2025, 01:51 AM ISTUpdated : Mar 03, 2025, 11:41 AM IST
ಕೋಡಿಹಳ್ಳಿ ಶ್ರೀ. | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಮಧ್ಯೆ ಕುರ್ಚಿ ಕಸರತ್ತು ಕುರಿತ ರಾಜಕೀಯ ಚರ್ಚೆ ಬೆನ್ನಲ್ಲೇ, ಹಾಲುಮತದ ಕೈಯ್ಯಲ್ಲಿ ರಾಜ್ಯದ ಅಧಿಕಾರವಿದೆ, ಸಲೀಸಾಗಿ ಅವರನ್ನು ಕುರ್ಚಿಯಿಂದ ಇಳಿಸಲು ಅಸಾಧ್ಯ - ಭವಿಷ್ಯ

ಯಾದಗಿರಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಮಧ್ಯೆ ಕುರ್ಚಿ ಕಸರತ್ತು ಕುರಿತ ರಾಜಕೀಯ ಚರ್ಚೆ ಬೆನ್ನಲ್ಲೇ, ಹಾಲುಮತದ ಕೈಯ್ಯಲ್ಲಿ ರಾಜ್ಯದ ಅಧಿಕಾರವಿದೆ, ಸಲೀಸಾಗಿ ಅವರನ್ನು ಕುರ್ಚಿಯಿಂದ ಇಳಿಸಲು ಅಸಾಧ್ಯ, ಅವರಾಗೇ ಬಿಟ್ಟುಕೊಟ್ಟರೆ ಮಾತ್ರ ಬೇರೆಯವರು ಆ ಸ್ಥಾನದಲ್ಲಿ ಕೂಡಬಹುದು ಎಂದು ಕೋಡಿಮಠದ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗುವುದಿಲ್ಲ ಎಂದು ಕೋಡಿಶ್ರೀ ಪರೋಕ್ಷ ಭವಿಷ್ಯ ನುಡಿದಿದ್ದಾರೆ. ಇವತ್ತು ಹಾಲುಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ, ಅದನ್ನು ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗಿಯೇ ಅವರು ಬಿಡಬೇಕೇ ಹೊರತು, ನೀವು ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ ಎಂದರು.

ರ್ನಾಟಕಕ್ಕೆ ತೊಂದರೆಯಿಲ್ಲ: ಮುಂಬರುವ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರಯಗಳಿಲ್ಲ, ಮಳೆ- ಬೆಳೆ ಚೆನ್ನಾಗಿದೆ, ಸುಭಿಕ್ಷಿತೆ ಇರುತ್ತದೆ. ಯಾವುದೇ ತೊಂದರೆಗಳು ಕಾಣುತ್ತಿಲ್ಲ ಎಂದ ಕೋಡಿಶ್ರೀ, ಯುಗಾದಿಯ ಬಳಿ ಮತ್ತೆ ಜಾಗತಿಕವಾಗಿ ಬಹಳ ಅಜಾಗರೂರಕತೆಯಿದೆ.

ಹೋದ ವರ್ಷಕ್ಕಿಂತ ಈ ವರ್ಷ ಇನ್ನೂ ಭೀಕರತೆ ಕಾಡುವ ಲಕ್ಷಣಗಳಿವೆ. ಭೂಕಂಪ ಸಾವು-ನೋವು ಸಂಭವಿಸುವುದು, ಕಟ್ಟಡಗಳು ನೆಲಕುರುಳೋದು ಮುಂದುವರೆಯುತ್ತದೆ. ಭೂ ಸುನಾಮಿ, ಜಲ ಸುನಾಮಿ, ಬಾಹ್ಯ ಸುನಾಮಿ ಆಗುತ್ತದೆ. ಈವರೆಗೆ ಬರೀ ಜಲ ಸುನಾಮಿ ಆಗುತ್ತಿತ್ತು, ಈ ಬಾರಿ ಭೂ ಸುನಾಮಿ ಕೂಡ ಆಗುತ್ತದೆ ಎಂದ ಕೋಡಿಹಳ್ಳಿ ಶ್ರೀಗಳು, ಯುಗಾದಿ ನಂತರ ಎಲ್ಲವನ್ನೂ ಹೇಳುತ್ತೇನೆ ಎಂದರು. 

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ