ಕನ್ನಡಪ್ರಭ ವಾರ್ತೆ, ತುಮಕೂರುಸಂವಿಧಾನದ ಬೇರುಗಳಿಗೆ ಕೊಡಲಿ ಪೆಟ್ಟುಕೊಡುತ್ತಿರುವಂತಹ ಸನ್ನಿವೇಶಗಳು, ಘಟನೆಗಳು ವರದಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಪತ್ರಕರ್ತರು ಐಪಿಲ್ ಭಾರತ ಬಿಟ್ಟು ಬಿಪಿಎಲ್ ಭಾರತದ ಕಡೆ ಗಮನ ಹರಿಸಬೇಕಾಗಿದೆ, ಪಿ.ಸಾಯಿನಾಥ್ ಪ್ರತಿ ಬಾರಿ ಪತ್ರಕರ್ತರಿಗೆ ಹೇಳುವ ಕಿವಿಮಾತಿದು ಎನ್ನುವ ಉಲ್ಲೇಖದೊಂದಿಗೆ ಹಿರಿಯ ಪತ್ರಕರ್ತ ಜಿ.ಎನ್ ಮೋಹನ್ ವಿಚಾರ ಮಂಡಿಸಿದರು. 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ವಿಚಾರಗೋಷ್ಟಿಯಲ್ಲಿ ಸಂವಿಧಾನ ಮತ್ತು ಮಾಧ್ಯಮ ಕುರಿತು ವಿಷಯ ಮಂಡಿಸಿದ ಅವರು ಇಂದು ಮಾಧ್ಯಮ ಕೇವಲ ಮಾಧ್ಯಮವಾಗಿ ಉಳಿದಿಲ್ಲ, ಸಂವಿಧಾನ ಜನಸಾಮಾನ್ಯರಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಂತೆಯೇ ಪತ್ರಕರ್ತರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಎಂದರು.ಸಂವಿಧಾನ ಹೇಗೆ ಮಾಧ್ಯಮವನ್ನು ರಕ್ಷಿಸುತ್ತದೆಯೋ ಹಾಗೆಯೇ ಮಾಧ್ಯಮವೂ ಸಂವಿಧಾನವನ್ನು ರಕ್ಷಿಸಬೇಕು ಎಂದರು. ಇಡೀ ಜಗತ್ತಿನಲ್ಲಿ ಅಮೇರಿಕದಲ್ಲಿ ಮಾತ್ರ ಮಾಧ್ಯಮಕ್ಕೆ ಸಂವಿಧಾನದ ರಕ್ಷಣೆ ಇದೆ. ಬೇರೆ ರಾಷ್ಟ್ರಗಳಲ್ಲಿ ಇಲ್ಲ. ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಮಾಧ್ಯಮಕ್ಕೆ ಸಾಮಾನ್ಯರಿಗೆ ಇರುವಂತೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದರು.