ಕುಕ್ಕೆ ಲಕ್ಷ ದೀಪೋತ್ಸವ ಕುಣಿತ ಭಜನೋತ್ಸವ: ಕ್ಯೂಆರ್‌ ಕೋಡ್‌ ಬಳಸಿ ನೋಂದಾಯಿಸಿ

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಕುಣಿತ ಭಜನೋತ್ಸವ; ಕ್ಯುಆರ್ರ್‌ ಕೋಟ್ಟ್‌ ಬಳಸಿ ನೋಂದಾಯಿಸಬೇಕು

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಲಕ್ಷ ದೀಪೋತ್ಸವದ ದಿನ ಕುಣಿತ ಭಜನೋತ್ಸವ ನಡೆಯಲಿದೆ.

ದೇವಳದ ರಥಬೀದಿ ಮತ್ತು ಅಡ್ಡಬೀದಿಯಲ್ಲಿ ನಡೆಯುವ ಕುಣಿತ ಭಜನೆಯಲ್ಲಿ ಭಾಗವಹಿಸಲು ಸಾರ್ವಜನಿಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ ಕುಣಿತ ಭಜನಾ ತಂಡಗಳು ಡಿ. 9ರಂದು ಅಪರಾಹ್ನ 2ಗಂಟೆಯ ಒಳಗೆ ಶ್ರೀ ದೇವಳದ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಅಥವಾ ಭಜನಾ ತಂಡಗಳು ಆನ್‌ಲೈನ್ ರಿಜಿಸ್ಟ್ರೇಷನ್ ಮೂಲಕ ಗೂಗಲ್ ಲೆನ್ಸ್ ಅಪ್ಲಿಕೇಶನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482646275, 9632955406, 7676935342, 9448792977 ಕರೆ ಮಾಡಿ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ನಿಯಮಗಳು:

ತಂಡದಲ್ಲಿ ಗರಿಷ್ಠ 10 ಮಂದಿ ಮಾತ್ರ ಇರತಕ್ಕದ್ದು. 10 ಕ್ಕಿಂತ ಅಧಿಕ ಮಂದಿ ಇದ್ದಲ್ಲಿ 1ಕ್ಕಿಂತ ಹೆಚ್ಚು ತಂಡ ರಚಿಸಬಹುದಾಗಿದೆ. ಭಾಗವಹಿಸುವ ಭಜನಾ ತಂಡಗಳು ಭಾರತೀಯ ಉಡುಗೆಗಳನ್ನು ಧರಿಸಿರಬೇಕು. ಭಜನಾ ತಂಡಗಳು ತಮ್ಮ ಸ್ವಂತ ವೆಚ್ಚದಲ್ಲಿ ಭಾಗವಹಿಸಬೇಕು. ಡಿ. 9ರಂದು ಅಪರಾಹ್ನ ಗಂಟೆ 2 ರ ಒಳಗಾಗಿ ತಂಡಗಳು ದೇವಳದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ಇಲ್ಲಿ ನೀಡಿರುವ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಲಿಂಕ್ ಮೂಲಕ ಆನ್ ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು. ಆನ್‌ಲೈನ್ ಮೂಲಕ ಮಾಡಿದಲ್ಲಿ ಕೊನೆಯಲ್ಲಿ ಸಬ್‌ಮೀಟ್ ನಂತರ ಬರುವ ರಿಜಿಸ್ಟ್ರೇಷನ್ ನಂಬರ್ ಬರೆದಿಟ್ಟುಕೊಳ್ಳಬೇಕು. ಒಂದು ಈ ಮೇಲ್ ಐ.ಡಿ ಯಿಂದ ಒಂದು ತಂಡದ ರಿಜಿಸ್ಟ್ರೇಷನ್ ಮಾತ್ರ ಮಾಡಬಹುದಾಗಿದೆ.

ಡಿ. 12ರಂದು ಲಕ್ಷದೀಪೋತ್ಸವದ ದಿನ ಸಂಜೆ 6.30ರಿಂದ 8.30 ರ ತನಕ ಕುಣಿತ ಭಜನೆ ನಡೆಯಲಿದೆ. ಭಜನೆಯ ನೇತೃತ್ವವನ್ನು ಶ್ರೇಷ್ಠ ಗಾಯಕರಾದ ಕಲಾವಿದ ಮೈಸೂರು ರಾಮಚಂದ್ರ ಆಚಾರ್ ಮತ್ತು ತಂಡ ವಹಿಸಲಿದೆ. ಕುಣಿತ ಭಜನೆಯಲ್ಲಿ ಪ್ರಖ್ಯಾತಿ ಗಳಿಸಿದ ರಾಮಚಂದ್ರ ಆಚಾರ್ ಮೈಸೂರು ಇವರ ತಂಡದ ನೇತೃತ್ವದಲ್ಲಿ ಕುಕ್ಕೆಯ ಪುಣ್ಯದ ಮಣ್ಣಿನಲ್ಲಿ ನಡೆಯುವ ಕುಣಿತ ಭಜನೆಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಒದಗಿ ಬಂದಿದೆ. ಶೀಘ್ರವೇ ತಂಡಗಳು ನೋಂದಾಣಿ ಮಾಡಿ ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

Share this article