ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜಗತ್ತಿನಲ್ಲಿ ಹುಟ್ಟಿದ ಪ್ರತಿ ಮನುಷ್ಯ ಒಂದಿಲ್ಲ ಒಂದು ತರಹದ ಮೋಹಕ್ಕೆ ಒಳಪಟ್ಟಿರುತ್ತಾನೆ. ಮೋಹದಿಂದ ದುಃಖ ಬರುತ್ತದೆ. ಆದರೂ ಮನುಷ್ಯ ಮೋಹ ಬಿಡುವುದಿಲ್ಲ ಎಂದು ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳು ನುಡಿದರು.ಸ್ಥಳೀಯ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘ ಮಹಾಲಿಂಗಪುರ ಆಶ್ರಯದಲ್ಲಿ ಶ್ರೀದೇವಿ ಪುರಾಣ ಮತ್ತು ದಸರಾ ಸಾಂಸ್ಕೃತಿಕ ನವರಾತ್ರಿ ಉತ್ಸವದಲ್ಲಿ ಐದನೇ ದಿನದ ದೇವಿ ಪುರಾಣದಲ್ಲಿ ಪ್ರವಚನ ನೀಡಿದ ಅವರು, ಯಾರು ಮೋಹ ಮದಗಳಾದ ಹಣದ ಮದ, ಧ್ಯಾನದ ಮದ, ಅಹಂಕಾರದ ಮದ, ನಾನು ಎನ್ನುವ ಅಹಂ. ನಮ್ಮ ಮನಸ್ಸಿನಲ್ಲಿರುವ ಮೋಹವನ್ನು ಸಂಪೂರ್ಣ ಮುಕ್ತಾರಾದರೇ ಮಾತ್ರ ದೇವಿ ಸಾಕ್ಷಾತ್ಕಾರ ಆಗಿ ಸಕಲ ಸೌಭಾಗ್ಯಗಳನ್ನು ಕೊಟ್ಟು ಕಾಪಾಡುತ್ತಾಳೆ. ನವದುರ್ಗಿಯರ ಐದನೇ ಅವತಾರವಾದ ಸ್ಕಂದಮಾತಾ ಅವಳನ್ನು ಭಯ ಭಕ್ತಿಯಿಂದ ಪೂಜಿಸುವವರಿಗೆ ಶಕ್ತಿ, ಸಂಪತ್ತು, ಮುಕ್ತಿ ನೀಡುತ್ತಾಳೆ ಎಂದು ತಿಳಿಸಿದರು.ಗದುಗಿನ ಶ್ರೀಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀಕಾಂತ್ ನಾಯಿಕ ಹಾರ್ಮೊನಿಯಂ ಸಾಥ್ ನೀಡಿದರು. ಹಣಮಂತ ಅಂಕದ ತಬಲಾ ಸಾಥ್ ನೀಡಿದರು. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ, ಹಿಂದೂ ಸನಾತನ ಧರ್ಮ ಸಂಸ್ಕೃತಿ ಮೇಲೆ ದೇಶ ನಿಂತಿದೆ. ಯಾರೂ ಸನಾತನ ಧರ್ಮದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ಹಿಂದೆ ಸನಾತನ ಧರ್ಮವನ್ನು ಹಾಳು ಮಾಡಲು ಬಂದಿದ್ದ ಬ್ರಿಟಿಷ್ ಅಧಿಕಾರಿ ತಾನೇ ಹಾಳಾಗಿ ಹೋದ. ಆದರೆ, ಹಿಂದೂ ಸನಾತನ ಧರ್ಮ ಜಗತ್ತು ಹುಟ್ಟುವ ಮೊದಲೇ ಇರುವ ಏಕೈಕ ಧರ್ಮ ಎಂದು ಅಳಿಯದು. ಸನಾತನ ಧರ್ಮ ಉಳುವಿಗಾಗಿ ಪ್ರತಿ ಹಿಂದೂ ರಕ್ಷಕನಾಗಬೇಕು. ರಾಕ್ಷಸರು ಎಲ್ಲ ಕಾಲದಲ್ಲೂ ಇರುತ್ತಾರೆ. ಅವರಿಂದ ರಕ್ಷಿಸಲು ದೇವರು ಯಾವುದೇ ರೂಪದಲ್ಲಿ ಬಂದು ಕಾಪಾಡುತ್ತಾನೆ. ಅನ್ನುವುದಕ್ಕೆ ನೀವೇ ಸಾಕ್ಷಿ ಸನಾತನ ಧರ್ಮ ಎಲರನ್ನೂ ಕಾಪಾಡುತ್ತದೆ. ಆದ್ದರಿಂದ ಇಡೀ ದೇಶ ಇಂದು ದುರ್ಗಾ ಮಾತೆಯ ಉತ್ಸವದಲ್ಲಿ ತಲ್ಲಿನವಾಗಿದೆ. ನವರಾತ್ರಿ ಉತ್ಸವದಲ್ಲಿ ದೇವಿ ಒಂಬತ್ತು ಅವತಾರ ಎತ್ತಿ ರಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ಕಾಪಾಡುತ್ತಾಳೆ. ದೇವಿ ನಂಬಿದವರು ನಿರ್ಭಿತ್ ಜೀವನ ನಡೆಸಬಹುದು ಎಂದು ತಿಳಿಸಿದರು.ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಂಜೆಯ ಕಾರ್ಯಕ್ರಮವನ್ನು ಪಂಚಮಸಾಲಿ ಸಮಾಜ, ಕಲಾಲ ಸಮಾಜ, ಬಣಜಿಗಾ ಸಮುದಾಯದವರು ದೇವಿಗೆ ಹಾಗೂ ಪೂಜ್ಯರಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಐದನೇಯ ದಿನದ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟರು.ಮುಖಂಡರಾದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಅಶೋಕ ಅಂಗಡಿ, ಸಂಜು ಸಕ್ರಿ, ಹಣಮಂತ ಬಡಿಗೇರ, ಚನ್ನಪ್ಪ ಪಟ್ಟನಶೆಟ್ಟಿ , ಸುರೇಶ ಕಲಾಲ, ಶ್ರೀಶೈಲ ರೊಡ್ಡಣ್ಣವರ, ಚನ್ನಬಸು ಹೊಸೂರ, ರಾಜೇಶ ಭಾವಿಕಟ್ಟಿ, ಶ್ರೀಶೈಲ ಕಾರಜೋಳ, ಮಲ್ಲಪ್ಪ ಯರಡ್ಡಿ, ಹಣಮಂತ ಬುರುಡ, ಚಿದಾನಂದ ಕಿರಗಟಗಿ, ರಾಮಣ್ಣ ಬಂಡಿ, ಮಲ್ಲಪ್ಪ ಭಾವಿಕಟ್ಟಿ, ರಾಚಪ್ಪ ಕುಳ್ಳೊಳ್ಳಿ, ಬಸವರಾಜ ಘಟ್ನಟ್ಟಿ, ಲಕ್ಕಪ್ಪ ಚಮಕೇರಿ, ಶ್ರೀಶೈಲ ನುಚ್ಚಿ, ಶ್ರೀಶೈಲ ಕಿರಗಟಗಿ, ಸುಭಾಸ ಭಾವಿಕಟ್ಟಿ, ನಾರಾಯಣ ಕಿರಗಿ, ಡಾ.ಬಿ.ಡಿ.ಸೋರಗಾಂವಿ, ಸಿದ್ದಗಿರೆಪ್ಪ ಕಾಗಿ, ಈಶ್ವರ ಚಮಕೇರಿ, ಪ್ರಭು ಬೆಳಗಲಿ, ಜಿ.ಎಸ್.ಗೊಂಬಿ, ಸಿದ್ದು ದಡುತಿ, ಸಿದ್ದಪ್ಪ ನಿಂಬರಗಿ, ಶಿವಾನಂದ ಕಿತ್ತೂರ, ರಾಚಪ್ಪ ದಡುತಿ, ಸುರೇಶ ನಿಂಬರಗಿ, ಶ್ರೀಶೈಲ ಬಾಡನವರ, ಶಂಕ್ರಪ್ಪ ಹಣಗಂಡಿ ಹಾಗೂ ಸಾವಿರಾರು ಮಹಿಳೆಯರು, ತಾಯಂದಿರು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಗುರುಪಾದ ಅಂಬಿ ನಿರೂಪಿಸಿದರು. ಬಿ.ಸಿ.ಪೂಜಾರಿ ವಂದಿಸಿದರು.ಬಿದರದ ನವಲಿಂಗ ಪಾಟೀಲ ಹಾಸ್ಯ ಕಾರ್ಯಕ್ರಮ ನಡೆಸಿದರು. ಇಂದಿನ ಮಹಾಪ್ರಸಾದವನ್ನು ಮುರಗೋಡ ಬಂಧುಗಳು ಮಾಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರನ್ನು ಸನ್ಮಾನಿಸಲಾಯಿತು.