ರಾಮನಗರ: ಈ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ತೇಜಸ್ವಿನಿ ರಮೇಶ್ ಮಾತ್ರ ಈವರೆಗೆ ಆಯ್ಕೆಯಾಗಿರುವ ಏಕೈಕ ಮಹಿಳೆ ಆಗಿದ್ದಾರೆ.
ಕನಕಪುರ ಸಂಸತ್ ಕ್ಷೇತ್ರ 11 ಸಾರ್ವತ್ರಿಕ, 1 ಉಪಚುನಾವಣೆ, ಆನಂತರ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರ 3 ಸಾರ್ವತ್ರಿಕ, 1 ಉಪಚುನಾವಣೆ ಸೇರಿ ಒಟ್ಟು 14 ಸಾರ್ವತ್ರಿಕ , 2 ಉಪಚುನಾವಣೆಗಳನ್ನು ಕಂಡಿದೆ.ಈ ಚುನಾವಣೆಗಳಲ್ಲಿ ಮೂವರು ಮಹಿಳೆಯರು ಸ್ಪರ್ಧಿಸಿ ಪುರುಷ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದರು. ಇವರಲ್ಲಿ ತೇಜಸ್ವಿನಿ ರಮೇಶ್ ಮಾತ್ರ ಗೆಲುವಿನ ದಡ ಸೇರಲು ಸಾಧ್ಯವಾಯಿತು. ಅದು ಕೂಡ ಐತಿಹಾಸಿಕ ಗೆಲುವಿನಿಂದ ಕೂಡಿತ್ತು.
ಉಳಿದಂತೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿದ್ದ ಟಿ.ಸಿ.ರಮಾ ಸೋಲು ಕಂಡವರು.ಪ್ರಸಕ್ತ ಚುನಾವಣೆಯಲ್ಲಿ ಪ್ರಮುಖವಾದ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಆದರೆ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ ಕೆ.ಹೇಮವಾತಿ ಅವರನ್ನು ಕಣಕ್ಕಿಳಿಸಿದೆ.
ಇಲ್ಲಿಂದ ಸಂಸತ್ ಗೆ ಹೋದ ಮೊದಲ ಮಹಿಳೆ :ಕನಕಪುರ ಲೋಕಸಭಾ ಕ್ಷೇತ್ರ 1967ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಲ್ಲಿಂದ 1999ರವರೆಗೆ ನಡೆದ 10 ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ಯಾವೊಬ್ಬ ಮಹಿಳೆಯೂ ಧೈರ್ಯ ಮಾಡಲಿಲ್ಲ. ಆದರೆ, ಮಾಧ್ಯಮ ಕ್ಷೇತ್ರದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿದ ತೇಜಸ್ವಿನಿ ರಮೇಶ್ ರವರು ಚೊಚ್ಚಲ ಚುನಾವಣೆಯಲ್ಲಿಯೇ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಅವರನ್ನು ಮಣಿಸುವ ಮೂಲಕ ಎಲ್ಲರ ಗಮನ ಸೆಳೆದರು. ಇಷ್ಟೇ ಅಲ್ಲದೆ, ಈ ಕ್ಷೇತ್ರದಿಂದ ಸಂಸತ್ ಗೆ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾದರು.
1999ರ ಚುನಾವಣೆಯಲ್ಲಿ ಹಾಸನದಲ್ಲಿ ಹೀನಾಯವಾಗಿ ಸೋತು ಹಣ್ಣಾಗಿದ್ದ ದೇವೇಗೌಡರಿಗೆ 2002ರಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜಕೀಯ ಮರುಜನ್ಮ ನೀಡಿದ್ದು ಇದೇ ಕ್ಷೇತ್ರ. ಚಂದ್ರಶೇಖರ್ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬಿತ್ತು.ಆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ದೇವೇಗೌಡರ ವಿರುದ್ಧ ರಾಜಕೀಯ ಎದುರಾಳಿಯಾಗಿ ಕಣಕ್ಕಿಳಿದಿದ್ದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹೋರಾಟದಲ್ಲಿ 52,576 ಮತಗಳ ಅಂತರದಿಂದ ಗೆದ್ದು ದೇವೇಗೌಡರು ನಿಟ್ಟುಸಿರು ಬಿಟ್ಟರು.
ಅನಿತಾ ಕುಮಾರಸ್ವಾಮಿಗೆ ಸೋಲು:ಹೀಗಾಗಿ 2013ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪತ್ನಿ ಅನಿತಾಕುಮಾರಸ್ವಾಮಿ ಅವರಿಗೆ ತಮ್ಮ ಸ್ಥಾನ ಬಿಟ್ಟುಕೊಡಲು ಕುಮಾರಸ್ವಾಮಿ ಮುಂದಾಗಿದ್ದರು. ಆದರೆ, ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಇಳಿದಿದ್ದ ಡಿ.ಕೆ.ಸುರೇಶ್, 1,36,000 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.
ಇನ್ನು 2019ರ ಚುನಾವಣೆಯಲ್ಲಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಸಿ.ರಮಾ ಕೇವಲ 2094 ಮತಗಳನ್ನು ಪಡೆದು 10ನೇ ಸ್ಥಾನ ಅಲಂಕರಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ 8,78,258 ಮತ ಪಡೆದು ಹ್ಯಾಟ್ರಿಕ್ ಗೆಲವು ದಾಖಲಿಸಿದರು.ಬಾಕ್ಸ್.............ಗೌಡರನ್ನು ಮಣಿಸಿದ ತೇಜಸ್ವಿನಿ:2004ರ ಸಾರ್ವತ್ರಿಕ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ ದೇವೇಗೌಡರ ವಿರುದ್ಧ ತೇಜಸ್ವಿನಿ ರಮೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದರು. ತೇಜಸ್ವಿನಿಯವರು 5,84,238 ಮತಗಳನ್ನು ಪಡೆದರೆ, ದೇವೇಗೌಡರು 4,62,320 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಬಿಜೆಪಿಯ ರಾಮಚಂದ್ರಗೌಡ 4,67,575 ಮತ ಪಡೆದು ಎರಡನೇ ಸ್ಥಾನದಲ್ಲಿದ್ದರು.ಮೊದಲ ಬಾರಿ ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ತೇಜಸ್ವಿನಿ ರಮೇಶ್ ಅವರು ಮರು ಚುನಾವಣೆಯಲ್ಲಿಯೇ ಹೀನಾಯವಾಗಿ ಸೋಲು ಕಂಡರು. ಕಾಂಗ್ರೆಸ್ ಪಾಳಯದಲ್ಲಿಯೇ ತೀವ್ರ ವಿರೋಧ ಕಟ್ಟಿಕೊಂಡಿದ್ದ ತೇಜಸ್ವಿನಿಯವರು 2008ರ ವೇಳೆಗೆ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಚುನಾವಣೆಯಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಗೆಲವು ಸಾಧಿಸಿದ್ದರು. 4 ವರ್ಷ ಸಂಸದರಾಗಿದ್ದ ಕುಮಾರಸ್ವಾಮಿಯವರು, 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವಿನ ಮಾಲೆ ಧರಿಸಿಕೊಂಡರು. ರಾಜ್ಯ ರಾಜಕಾರಣದೆಡೆಗೆ ವಾಲಿದ ಕುಮಾರಸ್ವಾಮಿಯವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು.(ಮಗ್‌ಶಾಟ್ ಫೋಟೊಸ್)
5ಕೆಆರ್ ಎಂಎನ್ 1,2,3.ಜೆಪಿಜಿ1.ತೇಜಸ್ವಿನಿ ರಮೇಶ್
2.ಅನಿತಾ ಕುಮಾರಸ್ವಾಮಿ3.ಟಿ.ಸಿ.ರಮಾ