ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಘಟಕದಲ್ಲಿ ₹9 ಲಕ್ಷದ ಸಾವಯವ ಗೊಬ್ಬರ ಮಾರಾಟ

KannadaprabhaNewsNetwork |  
Published : Jul 02, 2025, 11:51 PM ISTUpdated : Jul 03, 2025, 12:41 PM IST
ಹೂವಿನಹಡಗಲಿ ಪುರಸಭೆಯ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದಲ್ಲಿ ಉತ್ಪಾದಿಸಿದ ಸಾವಯವ ಗೊಬ್ಬರ ಮತ್ತು ಸುಂದರ ಕಮಾನು, | Kannada Prabha

ಸಾರಾಂಶ

ಪಟ್ಟಣದಲ್ಲಿ ಹೋಟೆಲ್‌ ಹಾಗೂ ಮನೆಗಳಲ್ಲಿ ನಿತ್ಯ ಟನ್‌ ಗಂಟೆಲೆ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ಎಲ್ಲೆಂದರಲ್ಲಿ ಬೀಸಾಡದೇ ವಾಹನಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ.

 ಹೂವಿನಹಡಗಲಿ :  ಪಟ್ಟಣದಲ್ಲಿ ಹೋಟೆಲ್‌ ಹಾಗೂ ಮನೆಗಳಲ್ಲಿ ನಿತ್ಯ ಟನ್‌ ಗಂಟೆಲೆ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ಎಲ್ಲೆಂದರಲ್ಲಿ ಬೀಸಾಡದೇ ವಾಹನಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಇದನ್ನು ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದಲ್ಲಿ ಸಾವಯವ ಗೊಬ್ಬರ ತಯಾರಿಕೆ ಮಾಡಿ ಉತ್ತರ ಕರ್ನಾಟಕ ಭಾಗಕ್ಕೆ ಹೂವಿನಹಡಗಲಿ ಪುರಸಭೆ ಮಾದರಿಯಾಗಿದೆ.

ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕವು 10 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ಇದರಿಂದ ಸಾವಯವ ಗೊಬ್ಬರ ತಯಾರಿಕೆ ಮಾಡಲಾಗುತ್ತಿದೆ. ಇಲ್ಲಿನ ಸಾವಯವ ಗೊಬ್ಬರವು ಮಲೆನಾಡು ಭಾಗದ ತೆಂಗು, ಅಡಿಕೆ ಮತ್ತು ಕಾಫಿ ಬೆಳೆಗಾರರು ಖರೀದಿ ಮಾಡುತ್ತಿದ್ದಾರೆ.

ಕಳೆದ 8 ವರ್ಷದಲ್ಲಿ ಈವರೆಗೂ ₹6.68 ಲಕ್ಷ ರುಗಳ ಸಾವಯವ ಗೊಬ್ಬರ ಮತ್ತು ₹2.28 ಲಕ್ಷ ಒಣ ಕಸ ಸೇರಿ ₹8.96 ಲಕ್ಷಗಳಿಗೆ ಮಾರಾಟ ಮಾಡಲಾಗಿದೆ. ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದಲ್ಲಿ ಈ ಹಿಂದೆ ಸಂಗ್ರಹಿಸಿದ್ದ ಕಸವನ್ನು ವಿಲೇವಾರಿ ಮಾಡಲು, ಪುಣೆ ಮೂಲದ ಕಂಪನಿಯೊಂದಕ್ಕೆ ಟೆಂಡರ್‌ ನೀಡಲಾಗಿದೆ. ಅಲ್ಲಿಂದ ಕಸ ವಿಲೇವಾರಿ ಮಾಡಿದ ಬಳಿಕ ಆ ಜಾಗದಲ್ಲಿ ಹತ್ತಾರು, ಬಗೆಯ ಹಣ್ಣಿನ ಗಿಡಗಳು, ತರಕಾರಿ ಸೇರಿದಂತೆ ಉದ್ಯಾನ ವನ ನಿರ್ಮಾಣ ಮಾಡಲು ಪುರಸಭೆ ಮುಂದಾಗಿದೆ. ಈಗಾಗಲೇ 6 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ.

ಪಟ್ಟಣದಲ್ಲಿ ನಿತ್ಯ ಸಂಗ್ರಹಿಸಿದ ಕಸವನ್ನು ಅದೇ ದಿನ ವಿಲೇವಾರಿ ಮಾಡಬೇಕೆಂದು ರಾಷ್ಟ್ರೀಯ ಹಸಿರು ಪೀಠ ಸೂಚನೆ ನೀಡಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಸ ಸಂಸ್ಕರಣೆ ಮಾಡುವಂತಿಲ್ಲ, ಹಾಗಾಗಿ ಸಾವಯವ ಗೊಬ್ಬರ ತಯಾರಿಕೆ ಮಾಡಲು ಹೆಚ್ಚು ಒತ್ತು ನೀಡಲಾಗುತ್ತಿದೆ.

ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕಕ್ಕೆ ಭೇಟಿ ನೀಡುವವರಿಗೆ ಇಲ್ಲಿನ ಉದ್ಯಾನವ ಕೈ ಬೀಸಿ ಕರೆಯುತ್ತದೆ. ಸುಂದರ ಕಮಾನು, ನೂರಾರು ರೀತಿಯ ಅಲಂಕಾರಿಕ ಸಸ್ಯಗಳು, ನಾನಾ ಜಾತಿಯ ಹೂವಿನ ಗಿಡಗಳಿಂದ ಅಲಂಕೃತವಾಗಿದೆ. ವೆಸ್ಟ್‌ ಟು ವಂಡರ್‌ ಎನ್ನುವ ರೀತಿಯ ಕಸದಲ್ಲಿ ಬಂದ ಬಿಯರ್‌ ಬಾಟಲಿ, ತೆಂಗಿನ ಚಿಪ್ಪುಗಳನ್ನು ಬಳಸಿಕೊಂಡು ಅಲಂಕರಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ.

ಈ ಘಟಕದಲ್ಲಿ ಉತ್ಪಾದನೆ ಮಾಡುವ ಸಾವಯವ ಮತ್ತು ಎರೆಹುಳು ಗೊಬ್ಬರವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದಿರುವ ಪ್ರಯೋಗಾಲಯದಿಂದ ಎನ್‌ಪಿಕೆ ಮೌಲ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಲ್ಲಿನ ಸಾವಯವ ಗೊಬ್ಬರವು ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಬಳಕೆಯಾಗುತ್ತಿದೆ. ಮಲೆನಾಡು ಭಾಗದ ರೈತರು 40 ಕೆಜಿ ತೂಕದ ಸಾವಯವ ಗೊಬ್ಬರ ₹300ನಂತೆ ಮಾರಾಟವಾಗುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲೇ ಹೂವಿನಹಡಗಲಿ ಪುರಸಭೆಯ, ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕವು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ನಿತ್ಯ 12 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ನಿತ್ಯ ವಿಲೇವಾರಿ ಮಾಡಬೇಕಿದ್ದು ಹೆಚ್ಚು ಸಾವಯವ ಗೊಬ್ಬರ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಇಮಾಮ್‌ ಸಾಹೇಬ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!