ಸಾವಯವ ತರಕಾರಿ ಆರೋಗ್ಯಕ್ಕೆ ಸಹಕಾರಿ

KannadaprabhaNewsNetwork | Published : Dec 16, 2024 12:45 AM

ಸಾರಾಂಶ

ಸಾವಯವ ಗೊಬ್ಬರ ಬಳಸಿ ಮನೆ ಅಂಗಳದಲ್ಲಿಯೇ ಕೈತೋಟ ನಿರ್ಮಾಣ ಮಾಡಿ ಟೊಮ್ಯಾಟೋ, ಬದನೆ ಸೇರಿದಂತೆ ಇತರೆ ತರಕಾರಿ ಬೆಳೆದು ಬಳಕೆ ಮಾಡಿದರೆ ನಿತ್ಯ ನೀವು ಸೇವನೆ ಆಹಾರ ಪೌಷ್ಟಿಕತೆಯಿಂದ ಕೂಡಿರಲಿದ್ದು ಮನುಷ್ಯನ ಆರೋಗ್ಯ ಸದಾ ಸ್ಥಿರವಾಗಿರಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಸಾವಯವ ಗೊಬ್ಬರ ಬಳಸಿ ಮನೆ ಅಂಗಳದಲ್ಲಿಯೇ ಕೈತೋಟ ನಿರ್ಮಾಣ ಮಾಡಿ ಟೊಮ್ಯಾಟೋ, ಬದನೆ ಸೇರಿದಂತೆ ಇತರೆ ತರಕಾರಿ ಬೆಳೆದು ಬಳಕೆ ಮಾಡಿದರೆ ನಿತ್ಯ ನೀವು ಸೇವನೆ ಆಹಾರ ಪೌಷ್ಟಿಕತೆಯಿಂದ ಕೂಡಿರಲಿದ್ದು ಮನುಷ್ಯನ ಆರೋಗ್ಯ ಸದಾ ಸ್ಥಿರವಾಗಿರಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು. ಅವರು ತಾಲೂಕಿನ ಗೌಡಗೆರೆ ಹೋಬಳಿಯ ಕಗ್ಗಲಡು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸೃಜನಶೀಲ ಕೈತೋಟ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ಬೆಳೆಯುವ ಕೃಷಿ ಬಗ್ಗೆ ತಾಯಂದಿರು ಹೆಚ್ಚು ಆಸಕ್ತಿ ಮೂಡಿಸಬೇಕು, ಆಹಾರ ಧಾನ್ಯಗಳ ಮೌಲ್ಯ ಮಕ್ಕಳಿಗೆ ತಿಳಿಸುವಂತಾಗಬೇಕು. ಶ್ರಮಪಟ್ಟು ಬೆಳೆದ ಅನ್ನದ ಮೂಲ್ಯ ಪ್ರತಿಯೊಬ್ಬರಿಗೂ ಗೊತ್ತಾದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲಿದೆ ಎಂದರು.ಮೇಲ್ಕುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅವಿಲೇಖ ಮಾತನಾಡಿ ತಮ್ಮ ತಮ್ಮ ಮನೆಗಳ ಮುಂದೆ ಅತಿ ಚಿಕ್ಕದಾದ ಜಾಗದಲ್ಲಿರುವ ಫಲವತ್ತಾದ ಮಣ್ಣಿಗೆ, ಕೊಟ್ಟಿಗೆ ಗೊಬ್ಬರ ಬಳಸಿ ತರಕಾರಿ ಬೆಳೆದರೆ ಅಲ್ಪ ಪ್ರಮಾಣದ ಹಣದಲ್ಲಿಯೇ ಹೆಚ್ಚು ತರಕಾರಿ ಪದಾರ್ಥಗಳನ್ನು ನಿಮ್ಮ ಮನೆಗೂ ಬಳಸಿ ಇತರರಿಗೂ ಮಾರಾಟ ಮಾಡಿ ಆರ್ಥಿಕ ಲಾಭ ಮಾಡಬಹುದು. ಇಂತಹ ಪೌಷ್ಟಿಕ ತರಕಾರಿ ಸೇವನೆಯಿಂದ ಸದೃಢ ಆರೋಗ್ಯ ನಿಮ್ಮದಾಗಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಮ್ಮ ವಹಿಸಿದ್ದರು. ಜಿಲ್ಲಾ ನೋಡಲ್ ಅಧಿಕಾರಿ ಮೌನೇಶ್ವರ ಚಾರಿ, ತಾಲೂಕು ನೋಡಲ್ ಅಧಿಕಾರಿ ಸುರೇಶ್, ಮೇಲ್ವಿಚಾರಕ ವಿಜಯ ಕೃಷ್ಣ, ಸೇವಾ ಪ್ರತಿನಿಧಿ ನಾಗರಾಜು, ಮುಖ್ಯ ಶಿಕ್ಷಕಿ ನಾಗವೀಣಾ, ಮಹಿಳಾ ಜ್ಞಾನ ವಿಕಾಸ ಅಧಿಕಾರಿ ಮಮತಾ, ಹೊನ್ನೇನಹಳ್ಳಿ ವಿಎಲ್ಇ ಭುವನೇಶ್ವರಿ, ಹೇಮಾ, ತನುಜ ಸೇರಿದಂತೆ ಅನೇಕರಿದ್ದರು.

Share this article